Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ ವಾಚ್‌ 2 ಲಾಂಚ್‌ ಡೇಟ್‌ ಬಹಿರಂಗ.. ಫೀಚರ್ಸ್‌ ನಿರೀಕ್ಷೆ ಏನು?

ಗೂಗಲ್‌ ಕಂಪೆನಿ ಪಿಕ್ಸೆಲ್‌ ವಾಚ್‌ಗಳಿಗೆ ಟೆಕ್‌ ವಲಯದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಲುಕ್‌ ಹಾಗೂ ಡಿಸೈನ್‌ನಿಂದಾಗಿ ಸ್ಮಾರ್ಟ್‌ವಾಚ್‌ಗಳು ಬೇಡಿಕೆ ಪಡೆದುಕೊಂಡಿವೆ. ಅದಕ್ಕೆ ಅನುಗುಣವಾಗಿ ಇದೀಗ ಗೂಗಲ್‌ ಪಿಕ್ಸೆಲ್‌ ವಾಚ್‌2 ಬಿಡುಗಡೆಗೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ವಾಚ್‌ ಲಾಂಚ್‌ ಡೇಟ್‌ ಇದೀಗ ಅಧಿಕೃತವಾಗಿದೆ.

ಹೌದು, ಗೂಗಲ್‌ ಪಿಕ್ಸೆಲ್ ವಾಚ್ 2 ಜಾಗತಿಕವಾಗಿ ಇದೇ ಅಕ್ಟೋಬರ್ 4 ರಂದು ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಲಾಂಚ್‌ ಆಗಲಿದೆ. ಆದರೆ ಭಾರತದಲ್ಲಿ ಈ ಸ್ಮಾರ್ಟ್‌ವಾಚ್‌ ಅಕ್ಟೋಬರ್ 5ಕ್ಕೆ ಎಂಟ್ರಿ ನೀಡಲಿದೆ. ಇನ್ನು ಈ ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪಿಕ್ಸೆಲ್‌ ವಾಚ್‌ 2 ಲಾಂಚ್‌ ಡೇಟ್‌ ಬಹಿರಂಗ.. ಫೀಚರ್ಸ್‌ ನಿರೀಕ್ಷೆ ಏನು?

ಗೂಗಲ್‌ ಪಿಕ್ಸೆಲ್ ವಾಚ್ 2 ಫೀಚರ್ಸ್‌ ವಿವರ
ಗೂಗಲ್‌ ಪಿಕ್ಸೆಲ್ ವಾಚ್ 2 ಸ್ಮಾರ್ಟ್‌ವಾಚ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ W5 ಸರಣಿಯ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಂದರೆ ಸ್ನಾಪ್‌ಡ್ರಾಗನ್ W5 ಅಥವಾ ಸ್ನಾಪ್‌ಡ್ರಾಗನ್ W5+ ಪ್ರೊಸೆಸರ್‌ ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ ಪಿಕ್ಸೆಲ್ ವಾಚ್ 2 ವೇರ್ ಓಎಸ್ 4 ಅನ್ನು ರನ್ ಆಗಲಿದೆ. ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಆನ್ ಡಿಸ್‌ಪ್ಲೇ (AOD) ಹೊಂದಿರಲಿದೆ. ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಆಕ್ಟಿವ್‌ ಆಗಿದ್ದರೂ ಸಹ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.

ಈ ಸ್ಮಾರ್ಟ್ ವಾಚ್ ನಾಲ್ಕು ಹೊಸ ವಾಚ್ ಫೇಸ್‌ಗಳನ್ನು ಪಡೆಯಬಹುದಾಗಿದೆ. ಇವುಗಳನ್ನು ಆರ್ಕ್, ಬೋಲ್ಡ್ ಡಿಜಿಟಲ್ ಮತ್ತು ಅನಲಾಗ್ ಬೋಲ್ಡ್ ಎಂದು ಹೆಸರಿಸಲಾಗಿದೆ. ಈ ಪಿಕ್ಸೆಲ್ ವಾಚ್ 2 ಅಲ್ಯೂಮಿನಿಯಂ ಬಾಡಿಯನ್ನು ಒಳಗೊಂಡಿರುವ ಸಾದ್ಯತೆಯಿದೆ. ಇನ್ನು ಸ್ಮಾರ್ಟ್ ವಾಚ್‌ನ ಗೂಗಲ್ ಪ್ಲೇ ಕನ್ಸೋಲ್ ಪಟ್ಟಿಯು ಕ್ವಾಲ್ಕಾಮ್ SW5100 SoC ನಿಂದ ಚಾಲಿತವಾಗಬಹುದೆಂದು ಸುಳಿವು ನೀಡಿದೆ. ಇನ್ನು ಇದೇ ಈವೆಂಟ್‌ನಲ್ಲಿ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಕೂಡ ಬಿಡುಗಡೆ ಆಗಲಿದೆ.

ಇನ್ನು ಗೂಗಲ್‌ ಪಿಕ್ಸೆಲ್‌ 8 ಸರಣಿಯು ಈ ವರ್ಷದ ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಅನಾವರಣಗೊಳ್ಳಲಿದೆ. ಈ ಸರಣಿಯಲ್ಲಿ ಗೂಗಲ್‌ ಪಿಕ್ಸೆಲ್ 8 ಮತ್ತು ಗೂಗಲ್‌ ಪಿಕ್ಸೆಲ್ 8 ಪ್ರೊ ಫೋನ್‌ಗಳು ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್‌ಗಳ ಜೊತೆಗೆ ಗೂಗಲ್‌ ಪಿಕ್ಸೆಲ್ ವಾಚ್ 2 ಕೂಡ ಬಿಡುಗಡೆ ಆಗುವ ಸಾಧ್ಯತೆಯಿದೆ. ಆದರೆ ಈ ಭಾರಿ ಕರ್ವ್ಡ್‌ ಡಿಸ್‌ಪ್ಲೇ ಬದಲಿಗೆ, ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಗೂಗಲ್‌ ಪಿಕ್ಸೆಲ್‌ 8 ಸರಣಿ ಸ್ಮಾರ್ಟ್‌ಫೋನ್‌ ಹೊಸ 50 ಮೆಗಾಪಿಕ್ಸೆಲ್‌ ಸ್ಯಾಮ್‌ಸಂಗ್‌ ಐಸೋಸೆಲ್‌ GN2 ಪ್ರೈಮೆರಿ ಸೆನ್ಸಾರ್‌ ಅನ್ನು ಹೊಂದಿರಲಿದೆ. ಇದು ಪಿಕ್ಸೆಲ್‌ 6 ಮತ್ತು ಪಿಕ್ಸೆಲ್‌ 7 ಸರಣಿಗಳಲ್ಲಿನ GN1 ಸೆನ್ಸಾರ್‌ಗಳಿಗಿಂತ 35% ಹೆಚ್ಚು ಬೆಳಕನ್ನು ಸೆರೆಹಿಡಿಯಲಿದೆ. ಇನ್ನು ಹೊಸ 64 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಆದರೆ ಪಿಕ್ಸೆಲ್‌ 8 12.2MP ಆವೃತ್ತಿಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇನ್ನು ಎರಡೂ ಸ್ಮಾರ್ಟ್‌ಫೋನ್‌ಗಳು ಹೊಸ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಇದಲ್ಲದೆ ಗೂಗಲ್‌ ಪಿಕ್ಸೆಲ್‌ 8 ಪ್ರೊ ಮಾದರಿಯ ಎಲ್ಲಾ ಲೆನ್ಸ್‌ಗಳಿಗೆ ಕ್ಯಾಮೆರಾ ವಿಸರ್ ಒಂದೇ ಕಟೌಟ್ ಅನ್ನು ಹೊಂದಿರಲಿದೆ. ಜೊತೆಗೆ ಟೆಂಪರೇಚರ್ ಸೇನ್ಸಾರ್‌ ಅನ್ನು ಸಹ ಹೊಂದಿರಲಿದೆ. ಇನ್ನು ಗೂಗಲ್‌ ಪಿಕ್ಸೆಲ್‌ 8 ಸರಣಿಯು ಮೂರನೇ ತಲೆಮಾರಿನ ಟೆನ್ಸರ್‌ G3 ಪ್ರೊಸೆಸರ್‌ನಿಂದ ರನ್‌ ಆಗುವ ನಿರೀಕ್ಷೆಯಿದೆ. ಇನ್ನು ಎರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Google Pixel Watch 2 India Launch Confirmed: Expected specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+