Home
ಸುದ್ದಿಜಾಲ

ಆಪ್ಲಿಕೇಶನ್‌ ಗಾತ್ರವನ್ನು ಬದಲಾಯಿಸಿದ ಗೂಗಲ್‌ ಪ್ಲೇಸ್ಟೋರ್‌!

ನಿಮಗೆ ಯಾವುದೇ ಒಂದು ಆಪ್ಲಿಕೇಶನ್‌ ಬೇಕಿದ್ದರೂ ಗೂಗಲ್‌ ಪ್ಲೇ ಸ್ಟೋರ್‌ಗೆ ಹೊಗಿ ಆಪ್ಲಿಕೇಶನ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಇರೋದು ನಿಮಗೆಲ್ಲಾ ಗೊತ್ತೆ ಇದೆ. ಸದ್ಯ ಪ್ಲೇ ಸ್ಟೋರ್‌ನಲ್ಲಿ ಬಹುತೇಕ ಎಲ್ಲಾ ಮಾದರಿಯ ಆಪ್ಲಿಕೇಶನ್‌ಗಳು ಲಬ್ಯವಿವೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಪ್ಲೇ ಸ್ಟೋರ್‌ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಆಪ್‌ ಡೌನ್‌ಲೋಡ್‌ನಿಂದ ಹಿಡಿದು ಆಪ್‌ ಅಪ್ಡೇಟ್‌ ತನಕವೂ ಹೊಸ ಫೀಚರ್ಸ್‌ಗಳು ಲಬ್ಯವಿವೆ.

ಹೌದು

ಹೌದು, ಪ್ಲೇ ಸ್ಟೋರ್‌ನಲ್ಲಿ ವಿಭಿನ್ನ ಮಾದರಿಯ ಫೀಚರ್ಸ್‌ಗಳು, ಆಪ್‌ಗಳು ಲಬ್ಯವಿವೆ. ಸದ್ಯ ಇಷ್ಟು ದಿನ ಬಳಕೆದಾರರು ಯಾವುದಾದರೂ ಆಪ್‌ ಗಲನ್ನ ಡೌನ್‌ಲೋಡ್‌ ಮಾಡಿಕೊಳ್ಳಲು ಹೋದರೆ ಪ್ಲೇ ಸ್ಟೋರ್‌ನಲ್ಲಿ ಆಪ್‌ ಕುರಿತ ಮಾಹಿತಿ, ಅದರ ರೇಟಿಂಗ್ಸ್‌, ಹಾಗೂ ವೀಕ್ಷಕರ ಅಭಿಪ್ರಾಯವನ್ನ ತಿಳಿಸಲಾಗ್ತಿತ್ತು. ಆದರೆ ಇದೀಗ ಇದಕ್ಕೆ ಪ್ಲೇ ಸ್ಟೋರ್‌ ಕಡಿವಾಣ ಹಾಕಿದ್ದು, ಇನ್ಮುಂದೆ ಹೊಸ ಮಾದರಿಯಲ್ಲಿ ಕಾಣಿಸಕೊಳ್ಳಲಿದೆ. ಅದುಹೆಗಿರಲಿದೆ ಅನ್ನೊದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಇನ್ನು

ಇನ್ನು ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನ ಡೌನ್‌ಲೋಡ್ ಮಾಡುವುದು ಸುಲಭವಾಗಲಿದೆ. ಆಪ್‌ಗಳನ್ನ ಡೌನ್‌ಲೋಡ್‌ ಮಾಡುವಾಗ ಕೆವಲ ಟ್ಯಾಪ್‌ ಂಆಡಿದರೆ ಸಾಕು ಆಪ್‌ ತೆರೆದುಕೊಳ್ಳಿದೆ. ಮೊದಲಿನಂತೆ ಅದರ ವಿಚಾರ ಹಾಗೂ ವಿಕ್ಷಕರ ರೇಟಿಂಗ್‌ ಎಲ್ಲವನ್ನೂ ಓದುತ್ತಾ ಸಮಯ ವ್ಯರ್ಥಮಾಡಲು ಅವಕಾಶವಿರುವುದಿಲ್ಲ. ನೀವು ಬಯಸುವ ಅಪ್ಲಿಕೇಶನ್‌ ಅನ್ನು ಹುಡುಕಿ ಮತ್ತು ಡೌನ್‌ಲೋಡ್‌ ಮಾಡಲು ಟ್ಯಾಪ್ ಮಾಡಬಹುದಾಗಿದೆ. ಆದಾಗ್ಯೂ, ಈಗಾಗಲೇ 2.8 ಮಿಲಿಯನ್‌ಗಿಂತಲೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಹೋಸ್ಟ್ ಮಾಡಲಾಗಿದ್ದರೂ, ನಿಮಗೆ ಬೇಕಾದುದನ್ನು ನಿಖರವಾಗಿ ಕಂಡುಹಿಡಿಯುವುದು ಇವಗ ಸುಲಭವಾಗಲಿದೆ.

ಮೊದಲಿನಂತೆ

ಹೌದು ಮೊದಲಿನಂತೆ ಈಗ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಾಗ ಹೆಚ್ಚಿನ ಪ್ರಮಾಣದಲ್ಲಿ ಸರ್ಚ್‌ ಮಾಡಬೇಕಾದ ಅನಿವಾರ್ಯತೆ ಇಲ್ಲ. ನಿವು ಯಾವ ಆಪ್‌ ಅನ್ನು ಟ್ಯಾಪ್‌ ಮಾಡುತ್ತಿರೋ ಅದೇ ಆಪ್‌ ತೆರೆದುಕೊಳ್ಳಲಿದೆ. ನಿವು ಬಯಸಿದ ಆಪ್‌ನ ಇತರೆ ಎಲ್ಲಾ ಮಾದರಿಯ ಆಪ್‌ಗಳು ತೆರೆದುಕೊಳ್ಳುವುದಿಲ್ಲ. ಅಂದರೆ ಯಾವ ಆಪ್‌ ಬೇಕು ಅದು ಮಾತ್ರ ಡೌನ್‌ಲೋಡ್‌ ಲಿಂಕ್‌ನಲ್ಲಿ ಕಾಣಿಸಿಕೊಳ್ಳಲಿದೆ. ಅದರಲ್ಲೂ ನಿವು ಮೊದಲ ಬಾರಿಗೆ ಆ ಆಪ್‌ ಅನ್ನು ಡೌನ್‌ಲೋಡ್ ಮಾಡುತ್ತಿದ್ದರೆ. ಒಂದೇ ವರ್ಗದ ವಿಭಿನ್ನ ಅಪ್ಲಿಕೇಶನ್‌ಗಳನ್ನು ಹೋಲಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಒಂದೆರಡು ಅಂಶಗಳಿವೆ. ಅವುಗಳಲ್ಲಿ ವಿಮರ್ಶೆಗಳು, ಡೌನ್‌ಲೋಡ್ ಎಣಿಕೆ ಮತ್ತು ಕೆಲವು ಸಂದರ್ಭಗಳಲ್ಲಿ, ಅಪ್ಲಿಕೇಶನ್‌ನ ಗಾತ್ರವು ಹೆಚ್ಚು ಪ್ರಸ್ತುತವಾಗಿದೆ.

ಡೌನ್‌ಲೋಡ್‌

ಸದ್ಯ ಆಪ್‌ ಡೌನ್‌ಲೋಡ್‌ ಮಾಡುವಾಗ ಇದೆಲ್ಲ ವಿಚಾರವನ್ನ ಗಮನಿಸಲೇಬೇಕಾಗುತ್ತದೆ. ಈ ಹಿಂದೆ, ಪ್ಲೇ ಸ್ಟೋರ್‌ನಲ್ಲಿನ ಹುಡುಕಾಟ ಫಲಿತಾಂಶಗಳು ಡೆವಲಪರ್, ರೇಟಿಂಗ್ ಮತ್ತು ಬೆಲೆಯ ಹೆಸರನ್ನು ಮಾತ್ರ ಡಿಸ್‌ಪ್ಲೇ ಆಗುತ್ತಿತ್ತು. ಆದರೆ ಈಗ ಅಪ್ಲಿಕೇಶನ್ ಗಾತ್ರ ಮತ್ತು ಡೌನ್‌ಲೋಡ್ ಎಣಿಕೆಯನ್ನು ಸಹ ಕಾಣಿಸುವಂತೆ ಸೇರಿಸಲಾಗಿದೆ. ಇದರಿಂದ ಸಾವಿರಾರು, ಮಿಲಿಯನ್ ಮತ್ತು ಶತಕೋಟಿ ಪ್ರಬಳಕೆದಾರರ ವಿಮರ್ಶೇಯನ್ನ ನೊಡುವುದಕ್ಕಿಂತ ಕೆಲವು ಅಪ್ಲಿಕೇಶನ್‌ಗಳ ಸಂಪಾದಕರ ಆಯ್ಕೆ ಶೀರ್ಷಿಕೆಯನ್ನು ಇಲ್ಲಿ ಕಾಣಬಹುದಾಗಿರುತ್ತೆ. ಜೊತೆಗೆ ಹುಡುಕಾಟ ಫಲಿತಾಂಶಗಳಲ್ಲಿ ಡೌನ್‌ಲೋಡ್ ಸಂಖ್ಯೆಯನ್ನು ಬದಲಾಯಿಸುತ್ತದೆ.

ನಿಮಗೆ

ಇನ್ನು ನಿಮಗೆ ಬೇಕಾದ ಕೆಲವು ಟ್ಯಾಪ್‌ಗಳನ್ನು ಉಳಿಸುವ ಮೂಲಕ ಒಟ್ಟಾರೆ ಆಪ್‌ ಡೌನ್‌ಲೋಡ್‌ ಬಳಕೆದಾರರ ಅನುಭವವನ್ನು ಸುಧಾರಿಸಲಾಗಿದೆ. ಅನಿರೀಕ್ಷಿತವಾಗಿ, ಈ ನವೀಕರಣಗಳು ಕ್ರಮೇಣ ಸರ್ವರ್ ಬದಿಯಲ್ಲಿ ಕಾಣಿಸಲಿವೆ. ಅಲ್ಲದೆ ಇದನ್ನು ಹಸ್ತಚಾಲಿತವಾಗಿ ಪ್ರಚೋದಿಸಲು ಆಗುವುದಿಲ್ಲ. ಅಂದರೆ ಪ್ಲೇ ಸ್ಟೋರ್ ಹುಡುಕಾಟ ಫಲಿತಾಂಶಗಳು ಅಪ್ಲಿಕೇಶನ್ ರೇಟಿಂಗ್ ಅನ್ನು ಮಾತ್ರ ಪ್ರದರ್ಶಿಸುತ್ತವೆ. ಜರ್ಮನಿಯ ಬಳಕೆದಾರರು ರೇಟಿಂಗ್ ಮತ್ತು ಅಪ್ಲಿಕೇಶನ್ ಗಾತ್ರವನ್ನು ಹೊಂದಿದ್ದರೆ, ಲೆಬನಾನ್‌ನಲ್ಲಿರುವವರು ಡೌನ್‌ಲೋಡ್ ಎಣಿಕೆ ಸೇರಿದಂತೆ ಮೂರನ್ನೂ ಹೊಂದಿರುತ್ತಾರೆ.

ಸಾಮಾನ್ಯವಾಗಿ

ಸಾಮಾನ್ಯವಾಗಿ ಬಳಕೆದಾರರು ಹೆಚ್ಚು ಜನಪ್ರಿಯವಾದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಸಣ್ಣ ಡೌನ್‌ಲೋಡ್ ಗಾತ್ರವನ್ನು ಹೊಂದಿರುವ ಇತರ ಆಯ್ಕೆಗಳನ್ನು ನೋಡುತ್ತಾರೆ. ಆದರೆ ಇದೀಗ ಆಪ್‌ನ ಗಾತ್ರಗಳಲ್ಲಿ ಬದಲಾವಣೆ ಆಗಿರುವುದರಿಂದ ಬಲಕೆದಾರರು ವಿಕ್ಷಕರ ಕೌಂಟ್‌ನ ಆದಾರದ ಮೇಲೆ ಡೌನ್‌ಲೋಡ್‌ ಮಾಡಲಿದ್ದಾರೆ. ಗೂಗಲ್‌ ನಿಂದ ಈ ಸಣ್ಣ ಬದಲಾವಣೆಯು ಈ ನಿಟ್ಟಿನಲ್ಲಿ ಉಪಯುಕ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಗೂಗಲ್‌ನಿಂದ ಸರ್ವರ್-ಸೈಡ್ ಬದಲಾವಣೆಯಾಗಿದ್ದು, ಶೀಘ್ರದಲ್ಲೇ ಜಗತ್ತಿನಾದ್ಯಂತದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಪರಿಚಯಿಸಲಿದೆ.

Best Mobiles in India

English summary
Google Play Store now shows download count and size in app search results.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+