Home
ಸುದ್ದಿಜಾಲ

400 ರೈಲ್ವೇ ಸ್ಟೇಷನ್ ಗಳಲ್ಲಿ ಫ್ರೀ ವೈ-ಫೈ ಪ್ಲಾನ್ ಮುಗಿಸಿದ ಗೂಗಲ್..!

By Avinash

ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಒದಗಿಸುವ ಕಾರ್ಯವನ್ನು ಗೂಗಲ್ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಗೂಗಲ್ 2016ರಲ್ಲಿ Railtel ಸಹಭಾಗಿತ್ವದಲ್ಲಿ ಭಾರತದ 400 ರೈಲ್ವೇ ನಿಲ್ದಾಣಗಳಿಗೆ ಉಚಿತ ವೈ-ಫೈ ಸೇವೆ ನೀಡಲು ಕಾರ್ಯಾರಂಭ ಮಾಡಿತ್ತು.

400 ರೈಲ್ವೇ ಸ್ಟೇಷನ್ ಗಳಲ್ಲಿ ಫ್ರೀ ವೈ-ಫೈ ಪ್ಲಾನ್ ಮುಗಿಸಿದ ಗೂಗಲ್..!

ಗುರುವಾರ ಅಸ್ಸಾಂನ ದಿಬ್ರುಗರ್ ರೈಲ್ವೇ ನಿಲ್ದಾಣದಲ್ಲಿ ಉಚಿತ ವೈ-ಫೈ ಒದಗಿಸುವುದರೊಂದಿಗೆ ಗೂಗಲ್ ತನ್ನ ಮಿಷನ್ 400 ಪೂರ್ಣಗೊಳಿಸಿದ ಸಾಧನೆ ಮಾಡಿತು. ಇದರೊಂದಿಗೆ ಡಿಜಿಡಲ್ ಇಂಡಿಯಾದ ಕನಸಿಗೆ ಬಲ ತುಂಬಿದಂತಾಗಿದೆ.
ರೇಲ್ ವೈರ್ ಎಂಬ ಬ್ರಾಂಡ್ ಹೆಸರಿನಡಿ 30 ನಿಮಿಷಗಳವರೆಗೆ ಉಚಿತ ಅಂತರ್ಜಾಲ ಸೇವೆ ಪಡೆಯಬಹುದಾಗಿದ್ದು, ಸಂಪರ್ಕ ಪಡೆದ ಒಂದು ಅವಧಿಯಲ್ಲಿ 350MB ಡಾಟಾ ಬಳಸಬಹುದಾಗಿದೆ.

400 ರೈಲ್ವೇ ಸ್ಟೇಷನ್ ಗಳಲ್ಲಿ ಫ್ರೀ ವೈ-ಫೈ ಪ್ಲಾನ್ ಮುಗಿಸಿದ ಗೂಗಲ್..!

"ಭಾರತದ ಪ್ರತಿಯೊಬ್ಬರರಿಗೂ ಉತ್ತಮ ಗುಣಮಟ್ಟದ ಅಂತರ್ಜಾಲ ಸೇವೆ ನೀಡುವುದಕ್ಕೆ ಸಾರ್ವಜನಿಕ ವೈ-ಫೈ ಸೇವೆ ಒಂದು ಗಂಭೀರ ಚಿಂತನೆಯಾಗಿತ್ತು. ರೈಲ್ವೇ ನಿಲ್ದಾಣಗಳ ಮೂಲಕ ಕೋಟ್ಯಾಂತರ ಭಾರತೀಯರಿಗೆ ಉತ್ತಮ ಗುಣಮಟ್ಟದ ಅಂತರ್ಜಾಲ ಸೇವೆ ಒದಗಿಸುವ ಪ್ರಯಾಣ ಅದ್ಭುತವಾಗಿತ್ತು.ಮತ್ತು ತಿಂಗಳಿಗೆ 8 ಮಿಲಿಯನ್ ಬಳಕೆದಾರರು ಈ ಸೇವೆಯನ್ನು ಪಡೆಯುತ್ತಿದ್ದಾರೆ.

ಇದು ಭಾರತದ ಬಹುದೊಡ್ಡ ಯೋಜನೆಯಾಗಿದೆ. ಮತ್ತು ಆರ್ಥಿಕತೆಯ ಅಭಿವೃದ್ಧಿಗೆ ದೇಶದ ಎಲ್ಲರೂ ಸಂಪರ್ಕದಲ್ಲಿರುವುದು ಮುಖ್ಯ" ಎಂದು ಗೂಗಲ್ ಇಂಡಿಯಾದ ಭಾರತೀಯ ಸಹಭಾಗಿ ನೆಕ್ಸ್ಟ್ ಬಿಲಿಯನ್ ಯುಸರ್ಸ್ ನ ನಿರ್ದೇಶಕ ಕೆ.ಸೂರಿ ಸಂತಸ ಹಂಚಿಕೊಂಡಿದ್ದಾರೆ.

400 ರೈಲ್ವೇ ಸ್ಟೇಷನ್ ಗಳಲ್ಲಿ ಫ್ರೀ ವೈ-ಫೈ ಪ್ಲಾನ್ ಮುಗಿಸಿದ ಗೂಗಲ್..!

ರೇಲ್ ವೈರ್ ವಿಶೇಷಗಳು:

  • ರೇಲ್ ವೈರ್ ನ 35% ಬಳಕೆದಾರರು ಮೊದಲ ಬಾರಿಗೆ ವೈ-ಫೈ ಬಳಸಿದವರಾಗಿದ್ದಾರೆ.
  • 50% ಬಳಕೆದಾರರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಇಂಟರ್ ನೆಟ್ ಸೇವೆಯನ್ನು ಪಡೆದು ತಮ್ಮ ವೃತ್ತಿಗೆ ಸಂಬಂಧಿಸಿದ ಕಾರ್ಯಗಳನ್ನು ನಡೆಸಿರುವುದು ವಿಶೇಷ.
  • ರೇಲ್ ವೈರ್ ಯೋಜನೆಯ ಮೊದಲ ವರ್ಷದಲ್ಲಿ ಬಹಳ ಜನದಟ್ಟಣೆಯ 100 ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈ-ಫೈ ನೀಡಲಾಯಿತು.
  • ಕಳೆದ ಒಂದುವರೆ ವರ್ಷದಲ್ಲಿ 300 ಹೊಸ ರೈಲ್ವೇ ನಿಲ್ದಾಣಗಳಿಗೆ ಉಚಿತ ವೈ-ಫೈ ನೀಡಿರುವುದು ವಿಶೇಷ.
  • ರೇಲ್ ವೈರ್ ಯೋಜನೆಯ ಯಶಸ್ವಿಯ ನಂತರ ಸಾರ್ವಜನಿಕ ವೈ-ಫೈಗಳನ್ನು ವಿಶ್ವದ ಎಲ್ಲ ಕಡೆ ರೈಲ್ವೇ ನಿಲ್ದಾಣಗಳ ಹೊರಗೂ ಸ್ಥಾಪಿಸಲು ನೆಕ್ಸ್ಟ್ ಬಿಲಿಯನ್ ಯುಸರ್ ಮುಂದಾಗಿದೆ.
  • ಹೆಚ್ಚೆಚ್ಚು ಸ್ಥಳಗಳಲ್ಲಿ ಉತ್ತಮ ವೈ-ಫೈ ನೀಡುವ ಪ್ರಮುಖ ಉದ್ದೇಶದೊಂದಿಗೆ ಗೂಗಲ್ ಸ್ಟೇಷನ್ ಯೋಜನೆ ಪ್ರಾರಂಭವಾಗಿದೆ. ಭಾರತದಲ್ಲಿ ಈಗಾಗಲೇ ಗೂಗಲ್ ಸ್ಟೇಷನ್ ಯೋಜನೆ ಆರಂಭವಾಗಿದ್ದು, ಪುಣೆಯಲ್ಲಿ ಕಾಣಬಹುದಾಗಿದೆ.
  • ರೇಲ್ ಟೆಲ್ ಮೂಲಕ ಭಾರತದ ಎಲ್ಲಾ ನಿಲ್ದಾಣಗಳಿಗೂ ವೇಗದ ಇಂಟರ್ ನೆಟ್ ವಿಸ್ತರಿಸಲು ಮುಂದಾಗಿದೆ.

Best Mobiles in India

English summary
Google, Railtel's RailWire Free Public Wi-Fi Service Now at 400 Indian Railway Stations. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+