Subscribe to Gizbot

ಭಾರತದಲ್ಲಿ ನೆಕ್ಸಸ್ 5 ಗೆ ಲಾಲಿಪಪ್ ಭಾಗ್ಯ

Written By:

ಭಾರತದಲ್ಲಿ ತನ್ನೆಲ್ಲಾ ಡಿವೈಸ್‌ಗಳಿಗೆ ಗೂಗಲ್ ಇದೀಗ ಆಂಡ್ರಾಯ್ಡ್ 5.1 ಲಾಲಿಪಪ್ ನವೀಕರಣವನ್ನು ಬಿಡುಗಡೆ ಮಾಡಿದ್ದು ಹೊಸ ಫೀಚರ್ ಮತ್ತು ಸುಧಾರಣೆಗಳೊಂದಿಗೆ ಲಾಲಿಪಪ್‌ನ ಮುಂದಿನ ಆವೃತ್ತಿ ಇದೀಗ ಸಕ್ರಿಯಗೊಂಡಿದೆ. ಭಾರತದಲ್ಲಿ ನೆಕ್ಸಸ್ ಡಿವೈಸ್‌ಗಾಗಿ ಒಟಿಎ ನವೀಕರಣವನ್ನು ಇಂಟರ್ನೆಟ್ ದೈತ್ಯ ಇದೀಗ ಬಿಡುಗಡೆ ಮಾಡಿದೆ.

ಭಾರತದಲ್ಲಿ ನೆಕ್ಸಸ್ 5 ಗೆ ಲಾಲಿಪಪ್ ಭಾಗ್ಯ

ಹೊಸ ಲಾಲಿಪಪ್ ಸಂಪರ್ಕ, ವೈಫೈ, ಎಲ್‌ಟಿಇ ಮತ್ತು ಬ್ಲ್ಯೂಟೂತ್‌ನಲ್ಲಿ ಯಾವುದೇ ಸಮಸ್ಯೆಗಳನ್ನು ಹೊಂದಿಲ್ಲ ಅಂತೆಯೇ ಸಲೀಸಾಗಿ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ. ಇನ್‌ಸ್ಟಾಲೇಶನ್ ನಂತರ ಬಳಕೆದಾರರು ಕೆಲವು ರೀಬೂಟ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಗೂಗಲ್ ಲಾಲಿಪಪ್ 5.1 ನಲ್ಲಿ ಬ್ಯಾಟರಿ ಜೀವಿತಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ.

ಭಾರತದಲ್ಲಿ ನೆಕ್ಸಸ್ 5 ಗೆ ಲಾಲಿಪಪ್ ಭಾಗ್ಯ

ಇನ್ನು ಓಎಸ್ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಅಪ್ಲಿಕೇಶನ್‌ಗಳ ಕ್ರ್ಯಾಶ್ ಆಗುವಿಕೆಯಲ್ಲಿ ಅಪ್‌ಡೇಟ್ ಇನ್ನೂ ಸಹಾಯವನ್ನು ಒದಗಿಸುತ್ತಿಲ್ಲ ಎಂಬ ಅಪಶ್ರುತಿಯು ಕೇಳಿಬರುತ್ತಿದೆ. ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇತರ ಕೆಲವು ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುತ್ತಿದ್ದು ಬಳಕೆದಾರರಿಗೆ ಇದು ತೊಂದರೆಯನ್ನುಂಟು ಮಾಡುತ್ತಿದೆ.

ಇದನ್ನೂ ಓದಿ: ನೀವು ಕಂಡರಿಯದ ಲಾಲಿಪಪ್ ವಿಶೇಷತೆಗಳು

ಭಾರತದಲ್ಲಿ ನೆಕ್ಸಸ್ 5 ಗೆ ಲಾಲಿಪಪ್ ಭಾಗ್ಯ

ಇನ್ನು ಬಳಕೆದಾರರ ಅಭಿಪ್ರಾಯದಂತೆ ಲಾಲಿಪಪ್ 5.1 ಉತ್ತಮ ಬ್ಯಾಟರಿ ಜೀವಿತವನ್ನು ಒದಗಿಸುತ್ತಿದ್ದು ಕಾರ್ಯಾಚರಣೆ ಮತ್ತು ಭದ್ರತೆ ವಿಷಯದಲ್ಲಿ ಕೆಲವೊಂದು ಸುಧಾರಣೆಗಳ ಸೌಲಭ್ಯವನ್ನು ಅವರು ಪಡೆಯುತ್ತಿದ್ದಾರೆ. ಇತ್ತೀಚೆಗೆ ಆಂಡ್ರಾಯ್ಡ್ ಒನ್ ಡಿವೈಸ್‌ಗಳಾದ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎ1, ಕಾರ್ಬನ್ ಸ್ಪಾರ್ಕಲ್ ವಿ ಹಾಗೂ ಸ್ಪೈಸ್ ಯುಎನ್‌ಒ ಬಳಕೆದಾರರು ಆಂಡ್ರಾಯ್ಡ್ ಲಾಲಿಪಪ್ 5.1 ನವೀಕರಣವನ್ನು ಪಡೆದುಕೊಳ್ಳುತ್ತಿದ್ದಾರೆ.

English summary
Google has now rolled out the Android 5.1 Lollipop update for all of the Nexus devices in India. The next version of the Lollipop has now arrived for the Nexus devices with several improvements and new features. The Internet giant has now released the OTA update for the Nexus devices in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot