Home
ಸುದ್ದಿಜಾಲ

Pixel Feature Drop 2025: ಗೂಗಲ್‌ ಪಿಕ್ಸೆಲ್ ಫೋನ್‌ಗಳು ಮತ್ತಷ್ಟು ಆಕರ್ಷಕ!

ಟೆಕ್ ದೈತ್ಯ Google ತನ್ನ ನವೆಂಬರ್ ತಿಂಗಳ Pixel Feature Drop 2025 ಅನ್ನು ಅಧಿಕೃತವಾಗಿ ಹೊರತರಲು ಆರಂಭಿಸಿದೆ. ಈ ಹೊಸ ಅಪ್ಡೇಟ್‌ನೊಂದಿಗೆ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಳಕೆದಾರರು ಹೊಸ AI ಆಧಾರಿತ ವೈಶಿಷ್ಟ್ಯಗಳು, ಸುರಕ್ಷತಾ ಸುಧಾರಣೆ ಮತ್ತು ಕ್ರಿಯೇಟಿವ್ ಕಸ್ಟಮೈಜೇಶನ್ ಆಯ್ಕೆಗಳನ್ನು ಪಡೆಯಲಿದ್ದು, ಇದು ಗೂಗಲ್‌ನ ಅತ್ಯಂತ ಬುದ್ಧಿವಂತ ಅಪ್ಡೇಟ್‌ಗಳಲ್ಲಿ ಒಂದಾಗಿದೆ. ಈ ಹೊಸ ಅಪ್‌ಡೆಟ್‌ನಲ್ಲಿ Remix Photo Editor, AI Notification Summaries ಮತ್ತು Power Saving Mode Google Maps ವೈಶಿಷ್ಟ್ಯಗಳು ಪ್ರಮುಖವಾಗಿ ಗಮನ ಸೆಳೆಯುತ್ತಿವೆ. ಹಾಗಾದರೆ, Pixel Feature Drop 2025 ಅಪ್‌ಡೇಟ್‌ನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಫೋಟೋ ಸಂಪಾದನೆಗೆ ಹೊಸ Remix ವೈಶಿಷ್ಟ್ಯ
Google Messages ನಲ್ಲಿ ಇದೀಗ 'Remix' ಎಂಬ ಫೋಟೋ ಎಡಿಟಿಂಗ್ ಫೀಚರ್ ಲಭ್ಯವಿದೆ. ಇದರ ಮೂಲಕ ಯಾವುದೇ ಚಿತ್ರವನ್ನು ನೇರವಾಗಿ ಚಾಟ್‌ನೊಳಗೆ ಸಂಪಾದಿಸಬಹುದು ಅಥವಾ ಕ್ರಿಯೇಟಿವ್ ರೂಪಕ್ಕೆ ಪರಿವರ್ತಿಸಬಹುದು. ಈ ವೈಶಿಷ್ಟ್ಯ ಎಲ್ಲ ಫೋನ್‌ಗಳಲ್ಲಿ ಕೆಲಸ ಮಾಡುತ್ತದೆ ಮತ್ತು ಗ್ರೂಪ್ ಚಾಟ್‌ಗಳಲ್ಲಿಯೂ ಸಹ ಬಳಸಬಹುದು. Remix ಗೂಗಲ್‌ನ Gemini Nano ಇಮೇಜ್ ಎಡಿಟಿಂಗ್ ಮಾದರಿಯನ್ನು ಬಳಸುತ್ತದೆ. ಇದರಿಂದ ನೀವು ಮತ್ತು ನಿಮ್ಮ ಸ್ನೇಹಿತರು ಒಂದೇ ಫೋಟೋವನ್ನು ಪರಸ್ಪರ ಎಡಿಟ್ ಮಾಡಬಹುದು.

'Wicked: For Good' ಥೀಮ್ ಪ್ಯಾಕ್‌ಗಳು
ಗೂಗಲ್ ತನ್ನ ಹೊಸ ಸಿನಿಮಾ Wicked ನಿಂದ ಪ್ರೇರಿತವಾದ For Good, Glinda, ಮತ್ತು Elphaba ಎಂಬ ಮೂರು ವಿಭಿನ್ನ ಥೀಮ್ ಪ್ಯಾಕ್‌ಗಳನ್ನು ಪರಿಚಯಿಸಿದೆ. ಈ ಥೀಮ್‌ಗಳು ನಿಮ್ಮ ಪಿಕ್ಸೆಲ್ ಫೋನ್‌ನ ವಾಲ್‌ಪೇಪರ್, ಐಕಾನ್‌ಗಳು, ಸಿಸ್ಟಮ್ ಸೌಂಡ್ ಮತ್ತು GIF‌ಗಳಿಗೆ ಮಾಯಾವಿ ಲುಕ್ ನೀಡುತ್ತವೆ. ಇದರಿಂದ ಕೆಲವೇ ಕ್ಷಣಗಳಲ್ಲಿ ನಿಮ್ಮ ಫೋನ್‌ಗೆ ಹೊಸ ಶೈಲಿ ಸಿಗುತ್ತದೆ.

AI ಆಧಾರಿತ Notification Summaries
ದೀರ್ಘ ಚಾಟ್‌ಗಳಲ್ಲಿ ಮುಖ್ಯ ಮಾಹಿತಿಯನ್ನು ಹುಡುಕುವುದು ಕಷ್ಟವಾಗಬಹುದು. ಆದರೆ, ಈ ಸಮಸ್ಯೆಗೆ ಪರಿಹಾರವಾಗಿ ಗೂಗಲ್ ಹೊಸ AI Notification Summaries ಅನ್ನು ನೀಡಿದೆ. ಈ ವೈಶಿಷ್ಟ್ಯವು ಉದ್ದವಾದ ಸಂದೇಶಗಳನ್ನು ಸಂಕ್ಷಿಪ್ತವಾಗಿ ಸೂಚನೆ ಶೇಡ್‌ನಲ್ಲೇ ತೋರಿಸಿ ಸಮಯ ಉಳಿಸುತ್ತದೆ ಮತ್ತು ಮುಖ್ಯ ವಿಷಯವನ್ನು ತಕ್ಷಣ ಓದಲು ಸಹಾಯಕವಾಗುತ್ತದೆ.

Scam Detection ಸೌಲಭ್ಯ
Pixel 6 ಮತ್ತು ಅದರ ನಂತರದ ಮಾದರಿಗಳಲ್ಲಿ (ಅಮೇರಿಕಾ ಬಳಕೆದಾರರಿಗೆ) ಈಗ ಹೊಸ Scam Detection ವೈಶಿಷ್ಟ್ಯ ಲಭ್ಯವಿದೆ. ಇದು ಸಂಶಯಾಸ್ಪದ ಚಾಟ್ ಅಥವಾ ಮೆಸೇಜ್ ಬಂದಾಗ 'Likely Scam' ಎಂಬ ಎಚ್ಚರಿಕೆಯನ್ನು ತೋರಿಸುತ್ತದೆ. ವುಈ ವೈಶಿಷ್ಟ್ಯ ಆನ್‌ಲೈನ್ ಮೋಸಗಳಿಂದ ಬಳಕೆದಾರರನ್ನು ರಕ್ಷಿಸುವ ಗೂಗಲ್‌ನ ಮತ್ತೊಂದು ಸುರಕ್ಷತಾ ಹೆಜ್ಜೆಯಾಗಿದೆ.

Pixel Feature Drop 2025: ಗೂಗಲ್‌ ಪಿಕ್ಸೆಲ್ ಫೋನ್‌ಗಳು ಮತ್ತಷ್ಟು ಆಕರ್ಷಕ!

VIP Message Priority
ಹೊಸದಾಗಿ ಬಂದಿರುವ VIP Message Priority ಫೀಚರ್‌ನಿಂದ ನಿಮ್ಮ ಅತ್ಯಂತ ಪ್ರಮುಖ ಸಂಪರ್ಕಗಳಿಂದ ಬರುವ ಸಂದೇಶಗಳು ತಕ್ಷಣ ಮತ್ತು ಸ್ಪಷ್ಟವಾಗಿ ತೋರಿಸುತ್ತವೆ. ಇದರಿಂದ ನಿಮ್ಮ ಕುಟುಂಬ ಅಥವಾ ಸ್ನೇಹಿತರ ಮುಖ್ಯ ಮೆಸೇಜ್‌ಗಳು ತಪ್ಪಿಹೋಗುವುದಿಲ್ಲ ಎಂದು ಗೂಗಲ್ ಹೇಳಿದೆ.

Maps‌ ನಲ್ಲಿ Power Saving Mode
ಹೊಸ Power Saving Mode Google Maps ಬಳಕೆ ಮಾಡುವಾಗ ಬ್ಯಾಟರಿ ಉಳಿತಾಯ ಮಾಡಲು ಸಹಾಯಮಾಡುತ್ತದೆ. ಈ ಮೋಡ್ ಅನ್ನು ಸಕ್ರಿಯಗೊಳಿಸಿದಾದ, ಫೋನ್ ಕೇವಲ ಮುಖ್ಯ ಮಾಹಿತಿಗಳನ್ನೇ (ಉದಾ: ಮುಂದಿನ ತಿರುವು) ತೋರಿಸುತ್ತದೆ. ಇದರಿಂದ ಬ್ಯಾಟರಿ ಆಯುಷ್ಯವು ನಾಲ್ಕು ಗಂಟೆಗಳವರೆಗೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

Google Photos‌ನಲ್ಲಿ ಹೊಸ AI ಎಡಿಟ್ ಉಪಕರಣಗಳು
ಹೊಸ ಅಪ್ಡೇಟ್‌ನೊಂದಿಗೆ Google Photos ನಲ್ಲೂ ಬದಲಾವಣೆಗಳು ಕಂಡುಬಂದಿವೆ.ಈಗ ಬಳಕೆದಾರರು ಫೋಟೋಗಳಿಂದ ಸನ್‌ಗ್ಲಾಸ್ ತೆಗೆದುಹಾಕುವುದು, ಸ್ಮೈಲ್ ಸರಿಪಡಿಸುವುದು ಅಥವಾ ಸಣ್ಣ ಮುಖದ ಬದಲಾವಣೆಗಳನ್ನು ಮಾಡಬಹುದು.ಇವು AI Smart Editing Tools ಮೂಲಕ ಸಾಧ್ಯವಾಗುತ್ತವೆ, ಫೋಟೋಗಳನ್ನು ಇನ್ನಷ್ಟು ಸಹಜವಾಗಿ ಕಾಣುವಂತೆ ಮಾಡುತ್ತವೆ.

Call Notes ಮತ್ತು Scam Detection ಈಗ ಜಾಗತಿಕ
ಗೂಗಲ್ ಈಗ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಜಾಗತಿಕವಾಗಿ ವಿಸ್ತರಿಸಿದೆ.Pixel 9+ ಬಳಕೆದಾರರಿಗೆ ಭಾರತ, ಯುಕೆ, ಕೆನಡಾ, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ Scam Detection ಸೌಲಭ್ಯ ಲಭ್ಯವಾಗಿದೆ.ಇದೇ ವೇಳೆ, Call Notes ವೈಶಿಷ್ಟ್ಯ ಈಗ ಭಾರತ ಸೇರಿ ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಲಭ್ಯ. ಈ ಫೀಚರ್ Gemini Nano ತಂತ್ರಜ್ಞಾನವನ್ನು ಬಳಸಿಕೊಂಡು ಕರೆಗಳನ್ನು ದಾಖಲಿಸುತ್ತದೆ, ನೋಟ್ಸ್ ಬರೆಯುತ್ತದೆ, ಸಾರಾಂಶ ನೀಡುತ್ತದೆ ಮತ್ತು ಮುಂದಿನ ಹಂತಗಳ ಸಲಹೆ ನೀಡುತ್ತದೆ.

Best Mobiles in India

English summary
Google has begun rolling out its November 2025 Pixel Feature Drop, bringing a fresh set of AI-powered upgrades, stronger security enhancements, and new creative customization tools. This update delivers some of the smartest and most useful improvements Pixel users have seen yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+