'ಗೂಗಲ್‌ ಕ್ರೋಮ್‌' ತೆಗೆದುಹಾಕುತ್ತಿದೆ ಗೂಗಲ್‌! ಕಾರಣ ಏನು?

By Suneel
|

ಮಾಹಿತಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕ್ರೋಮ್‌ ಈಗ ತನ್ನ ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್‌ ನೀಡುತ್ತಿದೆ. ಕಂಪ್ಯೂಟರ್ ಮತ್ತು ಮೊಬೈಲ್‌ ಬಳಕೆದಾರರು ಮಾಹಿತಿ ಸರ್ಚ್‌ ಮಾಡಲು ಬಳಸುವ 'ಗೂಗಲ್‌ ಕ್ರೋಮ್‌' ಆಪ್ಲಿಕೇಶನ್‌ ಅನ್ನು ಎಲ್ಲಾ ಆಪರೇಟಿಂಗ್‌ ವೇದಿಕೆಗಳಿಂದ ತೆಗೆದುಹಾಕುತ್ತಿದೆ. ಗೂಗಲ್‌ ಕ್ರೋಮ್‌ ಆಪ್‌ ತೆಗೆದು ಹಾಕುತ್ತಿರುವುದಕ್ಕೆ ಕಾರಣವಾದರೂ ಏನು? ಗೂಗಲ್‌ನ ಹೊಸ ಯೋಜನೆಯಾದರೂ ಏನು ಎಂದು ಲೇಖನದಲ್ಲಿ ಓದಿರಿ.

1

1

ಗೂಗಲ್‌ ವಿಂಡೋಸ್‌, ಮ್ಯಾಕ್‌ ಮತ್ತು ಲಿನಕ್ಸ್‌ಗಳಲ್ಲಿ ತನ್ನ ಗೂಗಲ್‌ ಕ್ರೋಮ್‌ ಆಪ್‌ ಲಾಂಚರ್‌ ಅನ್ನು ತೆಗೆದುಹಾಕುತ್ತಿದೆ ಎಂದು ಹೇಳಿದೆ. ಗೂಗಲ್‌ನ ಕಂಪನಿಯ ಈ ನಡೆ ಬ್ರೌಸರ್ ಫೀಚರ್‌ ಅನ್ನು ಸುಗಮಗೊಳಿಸಲು ಎಂದು ಹೇಳಲಾಗಿದೆ.

2

2

ಗೂಗಲ್‌ನ ಅಧಿಕೃತ ಬ್ಲಾಗ್‌ ಪೋಸ್ಟ್‌ನಲ್ಲಿ ಕಂಪನಿಯ ಇಂಜಿನಿಯರಿಂಗ್‌ ನಿರ್ದೇಶಕರಾದ 'ಮಾರ್ಕ್‌ ಪಾಲಿಗರ್‌', "ಕ್ರೋಮ್‌ ಅಪ್ಲಿಕೇಶನ್‌ ಮುಂದುವರಿಸಲು ಒತ್ತು ನೀಡುವುದರಲ್ಲಿ ಅದರ ಸರಳತೆಯಿಂದ ಬ್ರೌಸರ್‌ ಫೀಚರ್‌ ಅನ್ನು ಸುಗಮಗೊಳಿಸಲು ಮೇಲೆ ತಿಳಿಸಿದ ವೇದಿಕೆಗಳಲ್ಲಿ ತೆಗೆದು ಹಾಕಲಾಗುವುದು. ಕ್ರೋಮ್‌ ಓಎಸ್‌ನಲ್ಲಿ ಯಾವುದೇ ಬದಲಾವಣೆ ಆಗದು" ಎಂದು ಹೇಳಿದ್ದಾರೆ.

3

3

ಗೂಗಲ್‌ ಕ್ರೋಮ್‌ ತೆಗೆದು ಹಾಕುವ ವ್ಯವಸ್ಥೆಯನ್ನು ಗೂಗಲ್‌ ಕಂಪನಿ ಮುಂದೂಡಿದ್ದು, ಜುಲೈ ತಿಂಗಳಿನಲ್ಲಿ ಪ್ರಾಥಮಿಕವಾಗಿ ಲಾಂಚರ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಮಾಹಿತಿ ನೀಡಿದೆ.

4

4

ಮೊದಲಬಾರಿಗೆ ಇನ್‌ಸ್ಟಾಲ್‌ ಮಾಡಿಕೊಂಡ ಬಳಕೆದಾರರು ಕ್ರೋಮ್‌ ಆಪ್‌ ಅನ್ನು ಬಳಸಲು ಆಗುವುದಿಲ್ಲ. ಅಲ್ಲದೇ ಈಗಾಗಲೇ ಕ್ರೋಮ್‌ ಲಾಂಚರ್‌ ಅನ್ನು ಬಳಕೆ ಮಾಡುತ್ತಿರುವವರಿಗೆ ಗೂಗಲ್‌ ಕ್ರೋಮ್‌ ಆಪ್‌ Remove ಮಾಡುತ್ತಿರುವ ಬಗ್ಗೆ ನೋಟಿಫಿಕೇಶನ್‌ ಕಳುಹಿಸಲಾಗುತ್ತದೆ ಎಂದು ಗೂಗಲ್‌ ಮಾಹಿತಿ ನೀಡಿದೆ.

5

5

ಗೂಗಲ್‌, ಹಲವು ಜನರು ಭೇಟಿ ನೀಡದ ಕಾರಣ ಕ್ರೋಮ್‌ ಡೆಸ್‌ಟಾಪ್‌ ನೋಟಿಫಿಕೇಶನ್‌ ಅನ್ನು ಸಹ ಡಿಸೇಬಲ್‌ ಮಾಡಿತ್ತು. ಅಲ್ಲದೇ ಕ್ರೋಮ್‌ ವೆಬ್‌ ಬ್ರೌಸರ್‌ಗೆ ಸಪೋರ್ಟ್ ಮಾಡುತ್ತಿರಲಿಲ್ಲ ಎಂದು ಹಸ ಬಹಿರಂಗ ಪಡಿಸಿತ್ತು. ಗೂಗಲ್‌ ಈಗ ಕ್ರೋಮ್‌ ಲಾಂಚರ್ ಅನ್ನು ವಿಂಡೋಸ್‌ XP, ವಿಂಡೋಸ್‌ ವಿಸ್ತಾ ಮತ್ತು OS X 10.8 ನಲ್ಲಿ ಇದೇ ವರ್ಷದ(2016) ಏಪ್ರಿಲ್‌ ನಂತರ ಸಪೋರ್ಟ್‌ ಅನ್ನು ತೆಗೆದುಹಾಕಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಸಾಲಿಡ್ ಟಿಪ್ಸ್ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಸಾಲಿಡ್ ಟಿಪ್ಸ್

ಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕುಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕು

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?

ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Google to remove Chrome app launcher on all operating systems. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X