ಪಾಕಿಸ್ತಾನ ಮಾಹಿತಿ ಕದಿಯುತ್ತಿದ್ದ ಅಪ್ಲಿಕೇಶನ್‌ ಡಿಲೀಟ್‌ ಮಾಡಿದ ಗೂಗಲ್‌

Written By:

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಸ್ಪೈವೇರ್‌ ಆಪ್‌ ಒಂದನ್ನು ತೆಗೆದುಹಾಕಿದೆ. ಆಪ್‌ ಹೆಸರು "SmeshApp". ಸಿಎನ್‌ಎನ್‌-ಐಬಿಎನ್‌ ತನಿಖೆಯ ಪ್ರಕಾರ "SmeshApp" ಆಪ್‌ ಅನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡು ಭಾರತೀಯ ಮಿಲಿಟರಿಯ ವೈಯಕ್ತಿಕ ಮಾಹಿತಿಯನ್ನು ತನಿಖೆ ನಡೆಸುತ್ತಿತ್ತು ಎನ್ನಲಾಗಿದೆ. ಈ ಮಾಹಿತಿ ತಿಳಿದ ಗೂಗಲ್‌ ಆಪ್‌ ಅನ್ನು ತನ್ನ ಪ್ಲೇ ಸ್ಟೋರ್‌ನಿಂದ ಈಗ ತೆಗೆದು ಹಾಕಿದೆ. ಈ ಬಗ್ಗೆ ಇನ್ನಷ್ಟು ಕುತೂಹಲ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ಲೇ ಸ್ಟೋರ್‌ನಿಂದ ಆಪ್‌ ತೆಗೆದ ಗೂಗಲ್‌

ಗೂಗಲ್‌

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಸ್ಪೈವೇರ್‌ ಆಪ್‌ ಒಂದನ್ನು ತೆಗೆದುಹಾಕಿದೆ. ಆಪ್‌ ಹೆಸರು "SmeshApp" ಕಾರಣ ತಿಳಿಯಲು ಮುಂದೆ ಓದಿ.

App

ಸಿಎನ್‌ಎನ್‌-ಐಬಿಎನ್‌ ತನಿಖೆಯ ಪ್ರಕಾರ "SmeshApp" ಆಪ್‌ ಅನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡು ಭಾರತೀಯ ಮಿಲಿಟರಿಯ ವೈಯಕ್ತಿಕ ಮಾಹಿತಿಯನ್ನು ತನಿಖೆ ನಡೆಸುತ್ತಿತ್ತು ಎನ್ನಲಾಗಿದೆ.
ಚಿತ್ರ ಕೃಪೆ: BCCL 2014

 ಸಿಎನ್ಎನ್-ಐಬಿಎನ್‌ ಹೇಳಿದ್ದೇನು?

ಸಿಎನ್ಎನ್-ಐಬಿಎನ್‌

'ಭಯೋತ್ಪಾದನೆ ಕಾರ್ಯಾಚರಣೆಗಳ ಚಳುವಳಿ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ನಿರ್ಧರಿಸಲು' ಸೈನ್ಯದ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು "SmeshApp" ಆಪ್‌ ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ಸೈನಿಕರ ಕಂಪ್ಯೂಟರ್‌ಗೆ ಕಂಟಕ

ಕಂಟಕ

ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದ ಸ್ಪೈವೇರ್‌ ಆಪ್‌ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲದೇ ಸೈನಿಕರ ವೈಯಕ್ತಿಕ ಕಂಪ್ಯೂಟರ್‌ಗಳಿಗೂ ಸಹ ಪರಿಣಾಮ ಬೀರುತ್ತಿತ್ತು.

ಆಪ್‌ ಇನ್‌ಸ್ಟಾಲ್‌ನಿಂದ ಮಾಹಿತಿ ಎಲ್ಲರಿಗೂ ಆಕ್ಸೆಸ್‌

ಮಾಹಿತಿ ಎಲ್ಲರಿಗೂ ಆಕ್ಸೆಸ್‌

ಒಮ್ಮೆ ಆಪ್‌ ಇನ್‌ಸ್ಟಾಲ್‌ ಆದರೆ ಮೂರನೇ ವ್ಯಕ್ತಿಗೆ ವೈಯಕ್ತಿಕ ಮಾಹಿತಿ ಆಕ್ಸೆಸ್‌ ಮಾಡುವ ಅವಕಾಶ ಇತ್ತು. ಉದಾಹರಣೆಗೆ ಫೋನ್‌ನಲ್ಲಿ ಅಥವಾ ಡಿವೈಸ್‌ನಲ್ಲಿ ಶೇಖರಣೆಗೊಂಡ ಫೋನ್‌ ಕರೆಗಳು, ಅಕ್ಷರ ಸಂದೇಶ, ಫೋಟೋಗ್ರಾಫ್‌ ಇತ್ಯಾದಿ ಮಾಹಿತಿಗಳನ್ನು ಮೂರನೇ ವ್ಯಕ್ತಿ ಆಕ್ಸೆಸ್ ಮಾಡವ ಅವಕಾಶ ಇತ್ತು ಎಂದು ಸಿಎನ್‌ಎನ್‌ -ಐಬಿಎನ್‌ ವರದಿ ಮಾಡಿದೆ.

 ಸ್ಪೈವೇರ್‌ ಆಪ್‌

ಸ್ಪೈವೇರ್‌ ಆಪ್‌

ಸ್ಪೈವೇರ್‌ ಆಪ್‌ "SmeshApp" ನಿಂದ ಸಂಗ್ರಹಿಸಿದ ಮಾಹಿತಿಯನ್ನು ಜರ್ಮನಿಯ ಸರ್ವರ್‌ ಒಂದರಲ್ಲಿ ಶೇಖರಿಸಿ ಇಡಲಾಗಿತ್ತು. ಈ ಮಾಹಿತಿಯನ್ನು ಕರಾಚಿ ಮೂಲದ ವ್ಯಕ್ತಿಯೊಬ್ಬರು ನಿರ್ವಹಿಸಿದರು ಎನ್ನಲಾಗಿದೆ.

ಪಠಾಣ್‌ಕೋಟ್‌ ದಾಳಿ

ಪಠಾಣ್‌ಕೋಟ್‌ ದಾಳಿ

ಸ್ಪೈವೇರ್‌ ಆಪ್‌ "SmeshApp" ಅನ್ನು 2016 ಜನವರಿಯಲ್ಲಿಯ ಭಾರತೀಯ ವಾಯುಪಡೆ ನೆಲೆ ಮೇಲಿನ ಪಠಾಣ್‌ಕೋಟ್‌ ದಾಳಿ ಸಮಯದಲ್ಲಿಯೂ ಪಾಕಿಸ್ತಾನದ ನಿಯಂತ್ರಕರಿಂದ ಬಳಸಲಾಗಿದೆ. ಆಪ್‌ ಅವರಿಗೆ ಭಾರತೀಯ ವಾಯುಪಡೆಯ ಪ್ರಮುಖ ಮಾಹಿತಿಗಳನ್ನು ಪಡೆದುಕೊಳ್ಳಲು ಸಹಾಯವಾಗಿದೆ ಎಂದು ಹೇಳಲಾಗಿದೆ.

 ಪಾಕಿಸ್ತಾನ ಮಾಡಿದ್ದೇನು ಗೊತ್ತೇ?

ಪಾಕಿಸ್ತಾನ

ಪಾಕಿಸ್ತಾನ ಗುಪ್ತಚರ ಏಜೆನ್ಸಿ ಐಎಸ್‌ಐ, ಭಾರತದ ಸೈನಿಕರನ್ನು ಫೇಸ್‌ಬುಕ್‌ ಮೂಲಕ ಆಪ್‌ ಬಳಸಿಕೊಂಡು ಆಮಿಷ ಒಡ್ಡಿ ಬಲೆಗೆ ಹಾಕಿಕೊಳ್ಳಲು ಬಳಸಿತ್ತು ಎನ್ನಲಾಗಿದೆ. 10 ಕ್ಕೂ ಹೆಚ್ಚು ಫೇಕ್‌ ಫೇಸ್‌ಬುಕ್‌ ಪೇಜ್‌ ಬಳಸಿಕೊಂಡು ಹಲವು ಭಾರತೀಯ ಸೈನಿಕ ಸಿಬ್ಬಂದಿಗಳಿಗೆ ಗೊತ್ತಿಲ್ಲದಂತೆ ಅವರೊಂದಿಗೆ ಸಂವಹನ ನಡೆಸಿದ್ದಾರೆ ಪಾಕಿಸ್ತಾನ ನಿಯಂತ್ರಕರು ಎನ್ನಲಾಗಿದೆ.

ಆಪ್‌ ತೆಗೆದುಹಾಕಿದ ಗೂಗಲ್‌

ಗೂಗಲ್‌

ಸ್ಪೈವೇರ್‌ ಆಪ್‌ ಮೂಲಕ ಪಾಕಿಸ್ತಾನ ಎಲ್ಲಾ ಮಿಲಿಟರಿ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದು, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕ ಸುರಕ್ಷತಾ ಪಡೆ ಮೇಲು ಸಹ ತನ್ನ ಗುರಿಯನ್ನು ಹೊಂದಿತ್ತು. ಇದನ್ನು ವರದಿ ಮಾಡಿದ ನಂತರ ಗೂಗಲ್‌ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಇದು ಟೆಕ್ನಾಲಜಿಯಿಂದ ಸಾಧ್ಯ!!

ದಿನನಿತ್ಯದ ಬಳಕೆಗೆ ಅಗತ್ಯವಾದ ಆಂಡ್ರಾಯ್ಡ್‌ ಆಪ್‌ಗಳು

ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಬಂಪರ್‌ ಕೊಡುಗೆ

ಏಲಿಯನ್‌ಗಳ ಶೋಧನೆಗೆ ಸಜ್ಜಾದ ಎಕ್ಸೋ ಮಾರ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google removes app used by Pakistan to snoop on Indian Army. read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot