ಕೋರ್ಟ್ ಕೇಸ್:ಆಕ್ಷೇಪಾರ್ಹ ಮಾಹಿತಿಯನ್ನು ತೆಗೆದುಹಾಕಿದ ಗೂಗಲ್

ವೆಬ್ ಸೆನ್ಸಾರ್ ಶಿಪ್ ಬಗ್ಗೆ ಗೂಗಲ್ ಹಾಗು ಇನ್ನಿತರ 21 ಕಂಪನಿಗಳ ಮೇಲೆ ಇಂದು ನಡೆದ ವಿಚಾರಣೆಯ ತೀರ್ಪಿನ ಬೆನ್ನಲ್ಲೇ ಗೂಗಲ್ ತನ್ನ ಭಾರತೀಯ ಸೇವೆಗಳಿಂದ ಆಕ್ಷೇಪಾರ್ಹ ಮಾಹಿತಿಯನ್ನು ತೆಗೆದುಹಾಕಿದೆ.
ತನ್ನ ಗೂಗಲ್ ಸರ್ಚ್ ಇಂಜಿನ್, ಯೂ ಟ್ಯೂಬ್ ಹಾಗು ಬ್ಲಾಗ್ಗರ್ ನಿಂದ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಾರುವಸೂಕ್ಷ್ಮ ಚಿತ್ರಗಳನ್ನೂ ತೆಗೆದು ಹಾಕಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದರು.
ಕಳೆದ ವರ್ಷವಷ್ಟೇ ಅಂತರ್ಜಾಲದ ಕಂಪನಿಗಳ ಮೇಲೆ ಗದಾ ಪ್ರಹಾರ ಬೀಸಿದ್ದಕೇಂದ್ರ ಸರ್ಕಾರ, ತನ್ನ ಗಮನಕ್ಕೆ ಆಕ್ಷೇಪಾರ್ಹ ಅಂಶಗಳು ಕಂಡುಬಂದಲ್ಲಿ ಐ.ಟಿಕಾಯ್ದೆಯಡಿ 36 ಗಂಟೆಯೊಳಗೆ ತೆಗೆಯಬೇಕೆಂದು ಆಜ್ಞಾಪಿಸಿತ್ತು.
Comments
Best Mobiles in India


Click it and Unblock the Notifications








