Home
ಸುದ್ದಿಜಾಲ

ಜಿಮೇಲ್ ಬಳಕೆದಾರರಿಗೆ ದೊಡ್ಡ ರಿಲೀಫ್: ವಿಳಾಸ ಬದಲಾವಣೆಗೆ ಅನುಮತಿ!

Gmail ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ Gmail ವಿಳಾಸವನ್ನು ಬದಲಾಯಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು Google ಹೊರತರುತ್ತಿದೆ ಎಂದು ವರದಿಯಾಗಿದೆ. ಜಿಮೇಲ್ ಬಳಸುವ ಲಕ್ಷಾಂತರ ಜನರಿಗೆ ದಿನನಿತ್ಯದ ಬಳಕೆಯನ್ನು ಇನ್ನಷ್ಟು ಸುಲಭವಾಗಿಸುವುದರ ಜೊತೆಗೆ, ಬಹುಕಾಲದಿಂದಲೂ ಇದ್ದ ಪ್ರಮುಖ ಮಿತಿಯನ್ನು ತೆಗೆದುಹಾಕಲಿದೆ. ಇತ್ತೀಚೆಗೆ ಗೂಗಲ್ ತನ್ನ ಅಧಿಕೃತ ಸಹಾಯ ಪುಟವನ್ನು ನವೀಕರಿಸಿದ್ದು, ಜಿಮೇಲ್ ವಿಳಾಸವನ್ನು ಕಳೆದುಕೊಳ್ಳದೇ ಬದಲಾಯಿಸುವ ಅವಕಾಶದ ಬಗ್ಗೆ ಸೂಚನೆ ನೀಡಿದೆ. ಈ ಬದಲಾವಣೆ ಹಂತ ಹಂತವಾಗಿ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.

ಇದುವರೆಗೆ @gmail.com ಅಂತ್ಯವಾಗುವ ಇಮೇಲ್ ವಿಳಾಸವನ್ನು ಬದಲಾಯಿಸಲು ಯಾವುದೇ ಆಯ್ಕೆಯಿರಲಿಲ್ಲ. ಬಳಕೆದಾರರು ಹೊಸ ಜಿಮೇಲ್ ಐಡಿ ಬೇಕಾದರೆ, ಹಳೆಯ ಖಾತೆಯನ್ನು ಮುಚ್ಚಿ ಹೊಸದಾಗಿ ಖಾತೆ ತೆರೆಯಬೇಕಾಗುತ್ತಿತ್ತು. ಇದರಿಂದ ಇಮೇಲ್‌ಗಳು, ಗೂಗಲ್ ಡ್ರೈವ್ ಡೇಟಾ, ಫೋಟೋಗಳು ಮತ್ತು ಸಬ್‌ಸ್ಕ್ರಿಪ್ಷನ್‌ಗಳನ್ನು ಕಳೆದುಕೊಳ್ಳುವ ಭಯವೂ ಇತ್ತು. ಈ ಹಿನ್ನೆಲೆಯಲ್ಲೇ ಗೂಗಲ್ ತರಲು ಹೊರಟಿರುವ ಹೊಸ ಸೌಲಭ್ಯ ಬಳಕೆದಾರರಿಗೆ ದೊಡ್ಡ ರಿಲೀಫ್ ಆಗಲಿದೆ. ಮತ್ತು ಈ ಆಯ್ಕೆಯಿಂದ ಒಂದೇ ಗೂಗಲ್ ಖಾತೆ ಬಳಸುತ್ತಿರುವ ಬಳಕೆದಾರರಿಗೆ ಭಾರೀ ಪ್ರಯೋಜನವಾಗಲಿದೆ.

ಹೊಸ ವ್ಯವಸ್ಥೆಯಡಿ, ಬಳಕೆದಾರರು ತಮ್ಮ ಗೂಗಲ್ ಖಾತೆ ಸೆಟ್ಟಿಂಗ್‌ಗಳಲ್ಲಿ ಹೋಗಿ ಜಿಮೇಲ್ ವಿಳಾಸದ ಮೊದಲ ಭಾಗವನ್ನು ಬದಲಾಯಿಸಬಹುದು. ಅಂದರೆ, @gmail.com ಹಿಂದಿನ ಹೆಸರು ಮಾತ್ರ ಬದಲಾಯಿಸಲಾಗುತ್ತದೆ. ವಿಳಾಸ ಬದಲಾಗಿದರೂ, ಗೂಗಲ್ ಖಾತೆ ಹಾಗೇ ಉಳಿಯುತ್ತದೆ. ಸಂಪರ್ಕಗಳು, ಜಿಮೇಲ್ ಇತಿಹಾಸ, ಡ್ರೈವ್ ಫೈಲ್‌ಗಳು, ಫೋಟೋಗಳು ಮತ್ತು ಖರೀದಿಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮುಖ್ಯವಾಗಿ, ಹಳೆಯ ಜಿಮೇಲ್ ವಿಳಾಸವನ್ನು ಅಲಿಯಾಸ್ ಆಗಿ ಬಳಸಲಾಗುತ್ತದೆ. ಹೀಗಾಗಿ, ಹಳೆಯ ವಿಳಾಸಕ್ಕೆ ಬರುವ ಎಲ್ಲಾ ಇಮೇಲ್‌ಗಳು ಹೊಸ ವಿಳಾಸದ ಇನ್‌ಬಾಕ್ಸ್‌ಗೆ ತಲುಪುತ್ತವೆ.

ಜಿಮೇಲ್ ಬಳಕೆದಾರರಿಗೆ ದೊಡ್ಡ ರಿಲೀಫ್: ವಿಳಾಸ ಬದಲಾವಣೆಗೆ ಅನುಮತಿ!

ಈ ಬದಲಾವಣೆಯ ನಂತರ, ಬಳಕೆದಾರರು ಹಳೆಯ ಅಥವಾ ಹೊಸ ವಿಳಾಸ ಎರಡನ್ನೂ ಬಳಸಿ ಲಾಗಿನ್ ಆಗಬಹುದಾಗಿದೆ. ಜಿಮೇಲ್ ಮಾತ್ರವಲ್ಲದೆ, ಗೂಗಲ್ ಡ್ರೈವ್, ಯೂಟ್ಯೂಬ್, ಮ್ಯಾಪ್ಸ್ ಮತ್ತು ಇತರ ಪ್ರಮುಖ ಗೂಗಲ್ ಸೇವೆಗಳಿಗೂ ಯಾವುದೇ ವ್ಯತ್ಯಯವಾಗುವುದಿಲ್ಲ. ಇನ್ನು ಗೂಗಲ್ ಈ ವೈಶಿಷ್ಟ್ಯಕ್ಕೆ ಕೆಲವು ಮಿತಿಗಳನ್ನು ಕೂಡ ನಿಗದಿಪಡಿಸಿದೆ. ಬಳಕೆದಾರರು ವರ್ಷಕ್ಕೆ ಒಂದೇ ಬಾರಿ ಜಿಮೇಲ್ ವಿಳಾಸವನ್ನು ಬದಲಾಯಿಸಬಹುದು. ಒಟ್ಟು ಮೂರು ಬಾರಿ ಬದಲಾವಣೆ ಮಾಡಲು ಅವಕಾಶವಿದ್ದು, ಅಂದರೆ ಒಂದು ಖಾತೆಗೆ ಗರಿಷ್ಠ ನಾಲ್ಕು ಜಿಮೇಲ್ ವಿಳಾಸಗಳನ್ನು ಹೊಂದಬಹುದು.

ಹಳೆಯ ಜಿಮೇಲ್ ವಿಳಾಸವನ್ನು ಬೇರೆ ಯಾರೂ ಬಳಸಲು ಸಾಧ್ಯವಿಲ್ಲ ಮತ್ತು ಅದು ಶಾಶ್ವತವಾಗಿ ಅದೇ ಖಾತೆಗೆ ಲಿಂಕ್ ಆಗಿರುತ್ತದೆ. ಆದರೆ, ಹೊಸ ಜಿಮೇಲ್ ವಿಳಾಸಕ್ಕೆ ಬದಲಾಯಿಸುವಾಗ ಕೆಲವು ಸೇವೆಗಳಲ್ಲಿ ಸಣ್ಣ ತೊಂದರೆಗಳು ಎದುರಾಗಬಹುದು ಎಂದು ಗೂಗಲ್ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕ್ರೋಮ್‌ಬುಕ್ ಬಳಕೆದಾರರು, 'Sign in with Google' ಆಯ್ಕೆಯನ್ನು ಬಳಸುವ ಆಪ್‌ಗಳು ಮತ್ತು ರಿಮೋಟ್ ಡೆಸ್ಕ್‌ಟಾಪ್ ಸೇವೆಗಳಲ್ಲಿ ಹೆಚ್ಚುವರಿ ಹಂತಗಳನ್ನು ಅನುಸರಿಸಬೇಕಾಗಬಹುದು. ಆದ್ದರಿಂದ, ವಿಳಾಸ ಬದಲಾಯಿಸುವ ಮೊದಲು ಮುಖ್ಯ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಲು ಗೂಗಲ್ ಸಲಹೆ ನೀಡಿದೆ.

ಭಾರತದ ಬಳಕೆದಾರರ ದೃಷ್ಟಿಯಿಂದ ಈ ಅಪ್‌ಡೇಟ್ ಅತ್ಯಂತ ಮಹತ್ವದ್ದಾಗಿದೆ. ವೃತ್ತಿಪರ ಜೀವನ, ಆನ್‌ಲೈನ್ ಸೇವೆಗಳು ಮತ್ತು ಬ್ಯಾಂಕಿಂಗ್ ಕೆಲಸಗಳಿಗೆ ಒಂದೇ ಗೂಗಲ್ ಖಾತೆಯನ್ನು ವರ್ಷಗಳ ಕಾಲ ಬಳಸುವವರಿಗೆ ಇದು ದೊಡ್ಡ ಅನುಕೂಲ. ಜಿಮೇಲ್ ವಿಳಾಸವನ್ನು ಹೊಸ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿಕೊಂಡರೂ, ಖಾತೆಯ ಇತಿಹಾಸ ಮತ್ತು ಡೇಟಾ ಸುರಕ್ಷಿತವಾಗಿರುವುದು ಈ ವೈಶಿಷ್ಟ್ಯದ ದೊಡ್ಡ ಪ್ಲಸ್ ಪಾಯಿಂಟ್. ಗೂಗಲ್ ತರಲಿರುವ ಈ ಹೊಸ ಜಿಮೇಲ್ ವಿಳಾಸ ಬದಲಾವಣೆ ಸೌಲಭ್ಯವು ಬಳಕೆದಾರರ ಅನುಭವವನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂಬುದು ನಮ್ಮ ಅಭಿಪ್ರಾಯ.

Best Mobiles in India

English summary
Google is reportedly planning a new feature that will allow Gmail users to change their email address without losing their existing account or data. The update, hinted at on Google’s support page, aims to remove a long-standing limitation and will roll out gradually to users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+