ಆಂಡ್ರಾಯ್ಡ್ ವೇರ್‌: ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

Posted By:

ಗೂಗಲ್‌ ಸ್ಮಾರ್ಟ್‌ವಾಚ್‌‌ ಹೇಗಿರಲಿದೆ, ಏನು ವಿಶೇಷತೆಯನ್ನು ಒಳಗೊಂಡಿರುತ್ತದೆ ಎಂಬುದಕ್ಕೆ ಇಲ್ಲಿಯವರೆಗೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದ ವದಂತಿ ಸುದ್ದಿಗಳಿಗೆ ಗೂಗಲ್‌ ತೆರೆ ಏಳೆದಿದೆ. ಗೂಗಲ್‌ ತನ್ನ ಸ್ಮಾರ್ಟ್‌ವಾಚ್‌ ಕಲ್ಪನೆಯ ವಿಡಿಯೋ ಮತ್ತು ಅದರಲ್ಲಿರುವ ಓಎಸ್‌ ವಿಶೇಷತೆಯನ್ನು ಬಹಿರಂಗಪಡಿಸಿದೆ.

ಸ್ಮಾರ್ಟ್‌ಫೋನ್‌ಗಳಿಗಾಗಿ ಆಂಡ್ರಾಯ್ಡ್‌ ಓಎಸ್‌ನ್ನು ಅಭಿವೃದ್ಧಿ ಪಡಿಸುತ್ತಿರುವ ಗೂಗಲ್‌ ಈಗ ಸ್ಮಾರ್ಟ್‌ವಾಚ್‌ಗಳಿಗಾಗಿ 'ಆಂಡ್ರಾಯ್ಡ್ ವೇರ್‌' ಹೆಸರಿನ ಹೊಸ ಆಪರೇಟಿಂಗ್‌ ಸಿಸ್ಟಂ ಅಭಿವೃದ್ಧಿ ಪಡಿಸಿದೆ.ಈಗಾಗಲೇ ಸೋನಿ,ಸ್ಯಾಮ್‌ಸಂಗ್‌ಗಳು ಬಿಡುಗಡೆ ಮಾಡಿರುವ ಸ್ಮಾರ್ಟ್‌‌‌ವಾಚ್‌ಗಳಲ್ಲಿರುವ ಬಹುತೇಕ ವಿಶೇಷತೆಗಳು ಆಂಡ್ರಾಯ್ಡ್ ವೇರ್‌ ಸ್ಮಾರ್ಟ್‌‌‌‌‌ವಾಚ್‌ ಓಎಸ್‌ನಲ್ಲಿದೆ.

ಆಂಡ್ರಾಯ್ಡ್‌‌‌ ವೇರ್‌ ಸ್ಮಾರ್ಟ್‌ವಾಚ್‌ನಲ್ಲಿ ಸೋಶಿಯಲ್‌ ಆಪ್‌ ನೋಟಿಫಿಕೇಶನ್‌,‌‌ನ್ಯೂಸ್‌ ಫೀಡ್‌‌ಗಳನ್ನು ನೋಡಬಹುದು ಎಂದು ಗೂಗಲ್‌ ತಿಳಿಸಿದೆ.ಫಿಟ್‌ನೆಸ್‌ ಆಪ್‌ಗಳು ಸಹ ಈ ಸ್ಮಾರ್ಟ್‌‌‌‌ವಾಚ್‌ನಲ್ಲಿ ಇರಲಿದೆ.

ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನಗಳಲ್ಲಿ ಗೂಗಲ್‌ ಸರ್ಚ್‌ನಲ್ಲಿ ಮಾಹಿತಿ ಹುಡುಕಬೇಕಾದರೆ ವಾಯ್ಸ್‌ ರೆಕಗ್ನಿಷನ್ ಸಾಫ್ಟ್‌ವೇರ್‌ 'Google Now' ಗೂಗಲ್‌ ಅಭಿವೃದ್ಧಿ ಪಡಿಸಿದೆ. ಆದೇ ರೀತಿಯ ವಾಯ್ಸ್‌ ರೆಕಗ್ನಿಷನ್ ಸಾಫ್ಟ್‌ವೇರ್‌ 'ಆಂಡ್ರಾಯ್ಡ್ ವೇರ್‌'ನಲ್ಲಿದ್ದು ಇದಕ್ಕೆ 'Ok Google' ಹೆಸರನ್ನಿರಿಸಿದೆ. ಬಳಕೆದಾರರು ಸ್ಮಾರ್ಟ್‌ವಾಚ್‌‌ ಮೂಲಕ ಗೂಗಲ್‌‌ ಸರ್ಚ್‌ನಲ್ಲಿ ಮಾಹಿತಿ ಹುಡುಕಬೇಕಾದರೆ 'ಓಕೆ ಗೂಗಲ್‌' ಎಂದು ಹೇಳಿ ತಮ್ಮ ಪ್ರಶ್ನೆ ಕೇಳಿದರೆ ಉತ್ತರ ಸ್ಕ್ರೀನ್‌ನಲ್ಲಿ ಕಾಣುತ್ತದೆ.

ಇವಿಷ್ಟೇ ವಿಶೇಷತೆ ಅಲ್ಲದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌, ಟಿವಿಗಳನ್ನು ಸಹ ಈ ಓಎಸ್‌ ಸ್ಮಾರ್ಟ್‌ವಾಚ್‌ನ ಮೂಲಕ ನಿಯಂತ್ರಿಸಬಹುದು ಎಂದು ಗೂಗಲ್‌ ತಿಳಿಸಿದೆ.

ವಿಶ್ವದ ಮುಂಚೂಣಿ ಹಾರ್ಡ್‌ವೇರ್‌ ತಯಾರಕಾ ಕಂಪೆನಿಗಳ ಜೊತೆಗೆ ಗೂಗಲ್‌ ಈ ಓಎಸ್‌ ಆಧಾರಿತ ಸ್ಮಾರ್ಟ್‌‌ವಾಚ್‌‌‌ ನಿರ್ಮಾ‌ಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.ಮುಂದಿನ ತಿಂಗಳಿನಲ್ಲಿ ಆಂಡ್ರಾಯ್ಡ್‌ವೇರ್‌ಗೆ ಸಂಬಂಧಿಸಿದ ಮತ್ತಷ್ಟು ಎಪಿಐ(Application programming interface)ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಗೂಗಲ್‌ ಪ್ರಕಟಿಸಿದೆ.ಮುಂದಿನ ಪುಟದಲ್ಲಿ ಈ ಓಎಸ್‌ನಲ್ಲಿರುವ ಆಪ್‌ ಚಿತ್ರ, ಜೊತೆಗೆ ವಿಡಿಯೋವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

1

ಆಂಡ್ರಾಯ್ಡ್ ವೇರ್‌ ಅಪ್ಲಿಕೇಶನ್‌

 ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

2

ಆಂಡ್ರಾಯ್ಡ್ ವೇರ್‌ ಅಪ್ಲಿಕೇಶನ್‌

 ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

3

ಆಂಡ್ರಾಯ್ಡ್ ವೇರ್‌ ಅಪ್ಲಿಕೇಶನ್‌

 ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

4

ಆಂಡ್ರಾಯ್ಡ್ ವೇರ್‌ ಅಪ್ಲಿಕೇಶನ್‌

 ಆಂಡ್ರಾಯ್ಡ್ ವೇರ್‌: ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

ಆಂಡ್ರಾಯ್ಡ್ ವೇರ್‌: ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

5

ವಿಶ್ವದ ಮುಂಚೂಣಿ ಹಾರ್ಡ್‌ವೇರ್‌ ತಯಾರಕಾ ಕಂಪೆನಿಗಳ ಜೊತೆಗೆ ಗೂಗಲ್‌ ಈ ಓಎಸ್‌ ಆಧಾರಿತ ಸ್ಮಾರ್ಟ್‌‌ವಾಚ್‌‌‌ ನಿರ್ಮಾ‌ಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದೆ.

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

6

ವಿಡಿಯೋ ವೀಕ್ಷಿಸಿ

ಆಂಡ್ರಾಯ್ಡ್ ವೇರ್‌:ಸ್ಮಾರ್ಟ್‌ವಾಚ್‌‌ಗಳಿಗಾಗಿ ಗೂಗಲ್‌‌ನಿಂದ ಹೊಸ ಓಎಸ್‌

7

ವಿಡಿಯೋ ವೀಕ್ಷಿಸಿ

ಮಾಹಿತಿ:http://googleblog.blogspot.in

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting