Home
ಸುದ್ದಿಜಾಲ

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳು? ಅಬ್ಬಾ ಇಷ್ಟೆಲ್ಲಾ ಪ್ರಯೋಜನ ಇದೆಯಾ?

ಸರ್ಚ್‌ ಇಂಜಿನ್ ದೈತ್ಯ ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ನೀವು ಪ್ರಯಾಣಿಸುವ ಹಾದಿಯನ್ನು ತೋರುವ ಗೂಗಲ್‌ ಮ್ಯಾಪ್‌ ಕೇವಲ ನ್ಯಾವಿಗೇಷನ್‌ ಮಾತ್ರವಲ್ಲದೆ ಹಲವು ಅನುಕೂಲಕರ ಸೇವೆಗಳನ್ನು ಕೂಡ ನೀಡುತ್ತಾ ಬಂದಿದೆ. ಇದೀಗ ಇದಕ್ಕೆ ಇನ್ನು ಹಲವು ಹೊಸ ಫೀಚರ್ಸ್‌ಗಳನ್ನು ಗೂಗಲ್‌ ಸೇರ್ಪಡೆ ಮಾಡಿದೆ.

ಹೌದು, ಗೂಗಲ್‌ ಮ್ಯಾಪ್‌ ಹೊಸ ಅಪ್ಡೇಟ್‌ ಅನ್ನು ಪಡೆದುಕೊಂಡಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಹೊಸ ಮಾದರಿಯ ವ್ಯೂವ್‌ ಮತ್ತು ಲೈವ್‌ ವ್ಯೂನಂತಹ ಫೀಚರ್ಸ್‌ಗಳು ಕೂಡ ಸೇರಿವೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ಗೆ ಹೊಸದಾಗಿ ಸೇರ್ಪಡೆ ಆಗಿರುವ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳು? ಅಬ್ಬಾ ಇಷ್ಟೆಲ್ಲಾ ಪ್ರಯೋಜನ ಇದೆಯಾ?

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ನಲ್ಲಿ ಏನಿದೆ?

ಗೂಗಲ್‌ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಈ ಹೊಸ ಫೀಚರ್ಸ್‌ಗಳಿಂದಾಗಿ ಗೂಗಲ್‌ ಮ್ಯಾಫ್‌ನಲ್ಲಿ ಲೈವ್‌ ವ್ಯೂ ನೋಡುವ ವಿಧಾನ ಇನ್ನಷ್ಟು ಆಕರ್ಷಕವಾಗಿರಲಿದೆ. ಜೊತೆಗೆ ತಲ್ಲಿನಗೊಳಿಸುವ ವ್ಯೂ ಅನ್ನು ನೀಡಲಿದೆ. ಅಲ್ಲದೆ ಹೊಸ ಸ್ಥಳಗಳನ್ನು ಸರ್ಚ್‌ ಮಾಡುವುದಕ್ಕೆ ಸುಲಭವಾಗುವ ಮಾರ್ಗವನ್ನು ಕೂಡ ಕಲ್ಪಿಸಿದೆ. ಸದ್ಯ ಗೂಗಲ್‌ ಮ್ಯಾಪ್‌ ಸೇರಿರುವ ಹೊಸ ಫೀಚರ್ಸ್‌ಗಳ ವಿವರಗಳನ್ನು ಈ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳು? ಅಬ್ಬಾ ಇಷ್ಟೆಲ್ಲಾ ಪ್ರಯೋಜನ ಇದೆಯಾ?

ಇಮ್ಮೆರ್ಸಿವ್‌ ವ್ಯೂ

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳಲ್ಲಿ ಇಮ್ಮೆರ್ಸಿವ್‌ ವ್ಯೂ ಕೂಡ ಒಂದಾಗಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರಿಗೆ ತಾವು ಸರ್ಚ್‌ ಮಾಡುವ ಸ್ಥಳದ ಫೋಟೊರಿಯಲಿಸ್ಟಿಕ್ ವ್ಯೂ ಅನ್ನು ತೋರಿಸಲಿದೆ. ಇದರೊಂದಿಗೆ ಆ ಸ್ಥಳದಲ್ಲಿ ದಿನದ ವಿವಿಧ ಸಮಯಗಳಲ್ಲಿ ಜನಸಂದಣಿ ಹೇಗಿರಲಿದೆ? ಹವಾಮಾನ ಹೇಗಿದೆ ಎಂಬೆಲ್ಲಾ ಮಾಹಿತಿಯನ್ನು ಒದಗಿಸಲಿದೆ. ಪ್ರಸ್ತುತ ಈ ಆಯ್ಕೆಯು ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೊದಲ್ಲಿ ಲಭ್ಯವಾಗಲಿದೆ.

ಡೆಸ್ಕ್‌ಟಾಪ್‌ನಲ್ಲಿ ಇತ್ತೀಚಿನ (Recents ) ಟ್ಯಾಬ್

ಗೂಗಲ್ ಡೆಸ್ಕ್‌ಟಾಪ್‌ನಲ್ಲಿ ಹೊಸ Recents ಟ್ಯಾಬ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ತಾವು ಸೇವ್‌ ಮಾಡಿದ ಸ್ಥಳಗಳ ಲ್ಯಾಂಡ್‌ಮಾರ್ಕ್‌ಗಳಿಗೆ ಪ್ರವೇಶ ನೀಡಲಿದೆ. ಜೊತೆಗೆ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಸ್ಥಳಗಳನ್ನು ಶೇರ್‌ ಮಾಡಿಕೊಳ್ಳುವುದಕಕೆ ಸಹ ಅವಕಾಶ ನೀಡಲಿದೆ. ಈ ಆಯ್ಕೆಯು ಮುಂದಿನ ವಾರದಿಂದ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳು? ಅಬ್ಬಾ ಇಷ್ಟೆಲ್ಲಾ ಪ್ರಯೋಜನ ಇದೆಯಾ?

ಲೈವ್ ವ್ಯೂ

ಗೂಗಲ್‌ ಮ್ಯಾಪ್‌ನ ಲೈವ್‌ ವ್ಯೂ ಇದೀಗ AR ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದರಿಂದ ಗೂಗಲ್‌ ಮ್ಯಾಪ್‌ನಲ್ಲಿ ಲೈವ್‌ ವ್ಯೂ ನೊಂದಿಗೆ ತಾವು ಹೋಗಬೇಕಾದ ಪ್ರದೇಶವನ್ನು ನಿಖರವಾಗಿ ಸೂಚಿಸುವ AR ಬಾಣದ ಗುರುತನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಈ ಫೀಚರ್ಸ್‌ನಿಂದಾಗಿ ಬಳಕೆದಾರರು ಔಟ್‌ಸೈಡ್‌ ಮತ್ತು ಇನ್‌ಸೈಡ್‌ ಪ್ರದೇಶಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡಲಿದೆ. ಸದ್ಯ ಈ ಹೊಸ ಫೀಚರ್ಸ್‌ ನ್ಯೂಯಾರ್ಕ್, ಲಂಡನ್, ಲಾಸ್ ಏಂಜಲೀಸ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೊದಲ್ಲಿ ಲಭ್ಯವಿದೆ.

ಗೂಗಲ್‌ ಮ್ಯಾಪ್‌ ಸೇರಿದ ಹೊಸ ಫೀಚರ್ಸ್‌ಗಳು? ಅಬ್ಬಾ ಇಷ್ಟೆಲ್ಲಾ ಪ್ರಯೋಜನ ಇದೆಯಾ?

ಬೈಕ್ ಮತ್ತು ಸ್ಕೂಟರ್ ಮಾಹಿತಿ

ಇದಲ್ಲದೆ ಗೂಗಲ್‌ ಮ್ಯಾಪ್‌ ಇದೀಗ ಬೈಕ್ ಅಥವಾ ಸ್ಕೂಟರ್‌ನಂತಹ ದ್ವಿಚಕ್ರ ವಾಹನಗಳಲ್ಲಿ ನಗರ ಪ್ರದೇಶವನ್ನು ಅನ್ವೇಷಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಿಂದ ಬೈಕ್‌ ಸವಾರರು ತಾವು ತಲುಪಬೇಕಾದ ಸ್ಥಳದ ದಿಕ್ಕುಗಳ ಮೇಲೆ ಟ್ಯಾಪ್ ಮಾಡಿ ಮತ್ತು ಸೈಕ್ಲಿಂಗ್ ಆಯ್ಕೆಗೆ ಸ್ಕ್ರಾಲ್ ಮಾಡಬಹುದಾಗಿದೆ. ಇದಲ್ಲದೆ ನೀವು ಎಲೆಕ್ಟ್ರಿಕಲ್‌ ಬೈಕ್‌ ಬಳಸುತ್ತಿದ್ದರೆ ಚಾರ್ಜಿಂಗ್‌ ಸ್ಟೇಷನ್‌ಗಳ ಮಾಹಿತಿಯನ್ನು ಸಹ ನೀಡಲಿದೆ ಎಂದು ಗೂಗಲ್‌ ಹೇಳಿದೆ.

Best Mobiles in India

English summary
This update brings a bunch of new features such as Immersive View and Live View to Google Maps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+