'ಪಿಕ್ಸೆಲ್ 3ಎ' ಹಿಡಿದು 'ಐಪೋನ್ X' ಟ್ರೋಲ್ ಮಾಡಿದ ಗೂಗಲ್!!
ಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳ ವಿಶೇಷ ಫೀಚರ್ಸ್ ಹಿಡಿದು ಆಪಲ್ ಕಂಪೆನಿಯ ಜನಪ್ರಿಯ 'ಐಪೋನ್ X' ಅನ್ನು ಗೂಗಲ್ ಕಂಪೆನಿ ಟ್ರೋಲ್ ಮಾಡಿದೆ. ಗೂಗಲ್ ಇತ್ತೀಚಿಗಷ್ಟೇ ಬಿಡುಗಡೆ ಮಾಡಿರುವ ಪಿಕ್ಸೆಲ್ 3ಎ ಫೋನಿನ ಜಾಹೀರಾತಿನಲ್ಲಿ, ಐಫೋನ್ X ಅನ್ನು ಟ್ರೋಲ್ ಮಾಡಿದಂತೆಯೂ ಆಗಬೇಕು ಮತ್ತು ಪಿಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಫೋನ್‌ಗಳ ಜನಪ್ರಿಯತೆ ಕೂಡ ಹೆಚ್ಚಾಗಬೇಕು ಎಂಬಂತಹ ವಿಶೇಷ ಜಾಹಿರಾತನ್ನು ಪ್ರಕಟಿಸಿದೆ.

ಹೌದು, ಗೂಗಲ್ ಮ್ಯಾಪ್ಸ್ ಎಆರ್ ಬಳಕೆಗಾಗಿ ಪಿಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ವಿಶೇಷವಾಗಿ ಸಿದ್ದಗೊಂಡಿದ್ದು, ಐಫೋನ್‌ನಲ್ಲಿ ಇದರ ಕೊರತೆಯು ಕಾಡುತ್ತಿದೆ. ಹಾಗಾಗಿ, ಹೊಸದಾಗಿ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿಹೊಸ ಪಿಕ್ಸೆಲ್ 3ಎ ಸ್ಮಾರ್ಟ್‌ಫೋನ್‌ನಲ್ಲಿರುವ ಎಆರ್ ನೇವಿಗೇಷನ್ ಫೀಚರ್ ಅನ್ನು ಐಫೋನ್ X ಜತೆ ಹೋಲಿಕೆ ಮಾಡುವ ಪಯತ್ನವನ್ನು ಗೂಗಲ್ ಮಾಡಿದೆ. ಇದು ಒಂದು ರೀತಿಯಲ್ಲಿ ಆಪಲ್‌ನ ಟ್ರೋಲ್ ಮಾಡಿದಂತಿದೆ.
ಏಕೆಂದರೆ, ಹೊಸ ಪಿಕ್ಸೆಲ್ 3ಎ ಸ್ಮಾರ್ಟ್‌ಫೋನ್‌ನಲ್ಲಿರುವ ಎಆರ್ ನೇವಿಗೇಷನ್ ಫೀಚರ್‌ನಲ್ಲಿ ರಿಯಲ್ ಟೈಮ್ ಮಾರ್ಗದರ್ಶಕಗಳಾದ ಏರೋ ಚಿಹ್ನೆಗಳು ಎಷ್ಟು ನಿಖರವಾಗಿದೆ ಎಂಬುದನ್ನು ಗೂಗಲ್ ಉದಾಹರಣೆ ಸಹಿತ ತೋರಿಸಿದೆ. ಆದರೆ, ಐಫೋನ್ X ಮ್ಯಾಪ್ ಸಾಕಷ್ಟು ನಿಧಾನವಾಗಿರುವಂತೆ ತೋರಿಸಲಾಗಿದೆ. ಒಟ್ಟಿನಲ್ಲಿ ಏನೇ ಆದರೂ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿರುವ ಗೂಗಲ್ ಪಿಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಹೇಗಿವೆ ಎಂಬುದನ್ನು ತಿಳಿಯೋಣ ಬನ್ನಿ.

ಡಿಸೈನ್
ಡ್ರಾಗನ್ ಗ್ಲಾಸ್ ಜೊತೆಗೆ ಕಡಿಮೆ ಅಂಚು ಡಿಸ್‌ಪ್ಲೇಯೊಂದಿಗೆ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಫೋನ್‌ಗಳು ಬಿಡುಗಡೆಯಾಗಿವೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸೈನ್‌ನಲ್ಲಿದೆ ಎಂದು ಹೇಳಬಹುದಾರೂ ಸಹ, ಹಿಂಬದಿಯಲ್ಲಿರುವ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು ಫಿಂಗರ್ ಸೆನ್ಸಾರ್ ಆಯ್ಕೆಗಳು ಹಳೆಯ ಮಾದರಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವಂತೆ ಕಾಣಿಸುತ್ತವೆ.

ಡಿಸ್‌ಪ್ಲೇ
GOLED ಮಾದರಿಯ ಅತ್ಯುತ್ತಮ 1080x2220 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 5.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಗಫೋನ್‌ಗಳು ಹೊಂದಿವೆ. ಡಿಸ್‌ಪ್ಲೇಯು ಡ್ರಾಗನ್ ಟ್ರೈಯಲ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ. ಹಾಗೆಯೇ 24 ಬಿಟ್ ಕಲರ್ ಡೆಪ್ತ್ ಸಾಮರ್ಥ್ಯವನ್ನು ಹೊಂದಿರುವ ಡಿಸ್‌ಪ್ಲೇಯು 18.5:9 ಅನುಪಾತದಲ್ಲಿರುವುದನ್ನು ನೀವು ನೋಡಬಹುದು.

ಪ್ರೊಸೆಸರ್
'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 670 ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, ವೇಗದ ಕೆಲಸಗಳನ್ನು ನಿರ್ವಹಿಸಬಲ್ಲದು. ಇದರೊಂದಿಗೆ 4GB ಸಾಮರ್ಥ್ಯ RAM ಜೊತೆಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಸ್ಮಾರ್ಟ್‌ಪೋನ್‌ಗಳು ಮಲ್ಟಿಟಾಸ್ಕ್ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲಿವೆ.

ಕ್ಯಾಮೆರಾ
ಗೂಗಲ್ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಎರಡು ಫೋನ್‌ಗಳಲ್ಲಿ ಹಿಂಬದಿಯಲ್ಲಿ 12ಎಂಪಿ ಸಾಮರ್ಥ್ಯದ ರಿಯರ್ ಕ್ಯಾಮೆರಾ ಮತ್ತು 8ಎಂಪಿ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. 12 ಮೈಕ್ರಾನ್ ಹೈ ರೆಸಲ್ಯೂಶನ್ ಶಕ್ತಿಯೊಂದಿಗೆ LED ಫ್ಲ್ಯಾಶ್,ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ. ಸೂಪರ್ RES ಜೂಮ್, ಸ್ಲೋ ಮೋಷನ್, ನೈಟ್ ಮೋಡ್ ಆಯ್ಕೆಗಳು ಇವೆ.

ಬ್ಯಾಟರಿ
ಗೂಗಲ್ ಪಿಕ್ಸಲ್ 3a ಫೋನ್ 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಹಾಗೆಯೇ, ಪಿಕ್ಸಲ್ 3a XL ಪೋನ್‌ಗೆ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದರೊಂದಿದೆ 18 ವ್ಯಾಟ್ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುವುದರಿಂದ 15 ನಿಮಿಷದಲ್ಲಿ 7 ಗಂಟೆಯ ಬ್ಯಾಟರಿ ಬ್ಯಾಕ್‌ಅಪ್ ಚಾರ್ಜ್ ಒದಗಿಸುತ್ತದೆ.

ಬೆಲೆ
ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿರುವ ಗೂಗಲ್ ಪಿಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳು ಅನುಕ್ರಮವಾಗಿ 39,999 ರೂ. ಹಾಗೂ 44,999 ರೂ.ಗಳಷ್ಟು ಬೆಲೆಗಳಲ್ಲಿ ಮಾರಾಟಕ್ಕಿವೆ. ಗೂಗಲ್‌ನ ಕೆಲವು ವಿಶೇಷ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಪೋನ್ ಬ್ರ್ಯಾಂಡ್ ಮೇಲೆ ಬೆಲೆಯನ್ನು ಹೊಂದಿದೆ ಎಂದು ನಾವು ಹೇಳಬಹುದು.


Click it and Unblock the Notifications








