Home
ಸುದ್ದಿಜಾಲ

ಟ್ರಾವೆಲ್‌ ಪ್ರಿಯರಿಗೆ ಗೂಗಲ್‌ನಿಂದ ಮತ್ತೊಂದು ಆಯ್ಕೆ..! ಹಕ್ಕಿಯಾಗಿ ಹಾರಾಡಿ..!

By Avinash

ಪ್ರವಾಸ ಅಂದ್ರೇ ಎಲ್ಲರಿಗೂ ಇಷ್ಟವೇ.. ಹೀಗಾಗಲೇ ಗೂಗಲ್‌ ಟ್ರಾವೆಲ್ ಪ್ರಿಯರಿಗೆ ತನ್ನ ಗೂಗಲ್‌ ಮ್ಯಾಪ್ಸ್‌ನಿಂದ ಅಚ್ಚು ಮೆಚ್ಚಾಗಿದ್ದು, ಈಗ ಟ್ರಾವೆಲರ್‌ಗಳಿಗೆ ಗೂಗಲ್ ಮತ್ತೊಂದು ಆಯ್ಕೆಯನ್ನು ನೀಡಿದೆ. ಹೊಸ ಪ್ರವಾಸಿ ಮಾರ್ಗದರ್ಶಿ ವೆಬ್‌ಸೈಟ್‌ ಪರಿಚಯಿಸಿದ್ದು, ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶಿ ಆಗುವ ಸಾಧ್ಯತೆಯಿದೆ.

ಟ್ರಾವೆಲ್‌ ಪ್ರಿಯರಿಗೆ ಗೂಗಲ್‌ನಿಂದ ಮತ್ತೊಂದು ಆಯ್ಕೆ..! ಹಕ್ಕಿಯಾಗಿ ಹಾರಾಡಿ..!

ಹೌದು, ಗೂಗಲ್‌ ಒಡೆತನದ ಸ್ಟಾರ್ಟ್‌ ಅಪ್‌ Area 120 ಹೊಸ ಪ್ರವಾಸಿ ಮಾರ್ಗದರ್ಶಿ ವೆಬ್‌ಸೈಟ್‌ ಒಂದನ್ನು ಪರಿಚಯಿಸಿದೆ. ಟೂರಿಂಗ್‌ ಬರ್ಡ್‌ ಎಂದು ಕರೆಯಲಾಗಿರುವ ವೆಬ್‌ಸೈಟ್‌ನಲ್ಲಿ ವಿಶ್ವದ ಪ್ರಮುಖ ನಗರಗಳ ಪ್ರವಾಸ, ಆಕರ್ಷಣೆ ಮತ್ತು ಚಟುವಟಿಕೆಗಳನ್ನು ಟ್ರಾವೆಲರ್ ಹಾಗೂ ಪ್ರವಾಸಿಗರಿಗಾಗಿ ಪಟ್ಟಿ ಮಾಡಲಾಗಿದೆ.

ಏನಿದು Area 120..?

ಏನಿದು Area 120..?

ಗೂಗಲ್‌ನ ಆಂತರಿಕ ಸ್ಟಾರ್ಟ್‌ಅಪ್‌ ಆಗಿರುವ Area 120 ತಂತ್ರಜ್ಞಾನದ ದೈತ್ಯ ಪ್ರಾಯೋಗಿಕ ಉತ್ಪನ್ನಗಳ ಕಾರ್ಯಾಗಾರವಾಗಿದೆ. ಗೂಗಲ್‌ ಇಲ್ಲಿ ಹೊಸ ಹೊಸ ಉತ್ಪನ್ನಗಳ ಹಾಗೂ ಫೀಚರ್‌ಗಳನ್ನು ಪ್ರಯೋಗಿಸುತ್ತದೆ.

ಸದ್ಯ 20 ನಗರಗಳು

ಸದ್ಯ 20 ನಗರಗಳು

Area 120ಯ ಟೂರಿಂಗ್‌ ಬರ್ಡ್‌ ವೆಬ್‌ಸೈಟ್‌ನಲ್ಲಿ ಸದ್ಯ ವಿಶ್ವದ 20 ನಗರಗಳ ಬಗ್ಗೆ ವಿವರಣೆಯಿದೆ. ಇದರಲ್ಲಿ ದೆಹಲಿ, ಪ್ರಾಗ್ಯೂ, ಚಿಕಾಗೋ, ಆಮಸ್ಟರ್‌ಡಾಂ, ಬಾರ್ಸಿಲೋನಾ, ಬರ್ಲಿನ್, ಲಾಸ್‌ ವೆಗಾಸ್‌ ಮತ್ತಿತರ ನಗರಗಳು ಸೇರಿವೆ. ಈ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಇರಾದೆಯನ್ನು ಗೂಗಲ್ ಹೊಂದಿದೆ.

ಟೂರಿಂಗ್‌ ಬರ್ಡ್‌ನಲ್ಲಿ ಏನೀದೆ..?

ಟೂರಿಂಗ್‌ ಬರ್ಡ್‌ನಲ್ಲಿ ಏನೀದೆ..?

ನೀವು ಟೂರಿಂಗ್‌ ಬರ್ಡ್‌ ವೆಬ್‌ಸೈಟ್‌ ತೆರೆದು ನಿಮಗೆ ಬೇಕಾದ ನಗರವನ್ನು ಆಯ್ಕೆ ಮಾಡಿಕೊಂಡರೆ, ನಿಮಗೆ ಅಲ್ಲಿನ ಜನಪ್ರಿಯ ಆಕರ್ಷಣೆಗಳು, ಪ್ರವಾಸದ ಸಲಹೆಗಳು ಮತ್ತು ದರದ ಜತೆ ಅಲ್ಲಿನ ಚಟುವಟಿಕೆಗಳನ್ನು ತೋರಿಸುತ್ತದೆ. ಅದಲ್ಲದೇ ಉಚಿತ ಮಾರ್ಗದರ್ಶನದ ಪ್ರವಾಸ ಹಾಗೂ ಸ್ಥಳೀಯರು ಮತ್ತು ಟ್ರಾವೆಲ್‌ ಬ್ಲಾಗರ್‌ಗಳಿಂದ ರೆಕ್‌ಮೆಂಡ್‌ಗಳು ಸಹ ನಿಮಗೆ ಈ ವೆಬ್‌ಸೈಟ್‌ನಲ್ಲಿ ದೊರೆಯುತ್ತವೆ ಎಂದು Area 120 ಹೇಳಿಕೊಂಡಿದೆ.

ಕಸ್ಟಮೈಜ್‌ ಫೀಚರ್

ಕಸ್ಟಮೈಜ್‌ ಫೀಚರ್

ಟೂರಿಂಗ್‌ ಬರ್ಡ್‌ ಆಪ್‌ build-your-own package ಫೀಚರ್ ಹೊಂದಿದ್ದು, ಬಳಕೆದಾರರು ಕಸ್ಟಮೈಜ್‌ ಮತ್ತು ದರ ಹಾಗೂ ಆದ್ಯತೆಗಳನ್ನು ಹೋಲಿಕೆ ಮಾಡುವ ಫೀಚರ್ ಹೊಂದಿದೆ. ಅದಲ್ಲದೇ ನಿಮಗೆ ಸರಿ ಹೊಂದುವ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬುಕ್ಕಿಂಗ್‌ ಮತ್ತು ಕ್ಯಾನ್ಸಲಿಂಗ್‌ ಅವಕಾಶವನ್ನು ನೀಡಿದೆ.

ಸಣ್ಣ ತಂಡದೊಂದಿಗೆ ದೊಡ್ಡ ಪ್ರಯತ್ನ

ಸಣ್ಣ ತಂಡದೊಂದಿಗೆ ದೊಡ್ಡ ಪ್ರಯತ್ನ

ಸಾಮಾನ್ಯ ಉತ್ಸಾಹದ ಪ್ರಯಾಣಕ್ಕಾಗಿ ಮತ್ತು ಇತರರಿಗೆ ಒಟ್ಟಾರೆ ಪ್ರಯಾಣದ ಅನುಭವವನ್ನು ಸುಧಾರಿಸುವ ಒಂದು ಸಣ್ಣ ತಂಡವಾಗಿದ್ದು, ನಮ್ಮಲ್ಲಿ ಹೆಚ್ಚಿನವರು ಗೂಗಲ್‌ನಲ್ಲಿ ಪ್ರಯಾಣ ಉತ್ಪನ್ನಗಳನ್ನು ನಿರ್ಮಿಸುವ ಹಿನ್ನೆಲೆ ಹೊಂದಿದ್ದಾರೆ. ಪ್ರವಾಸ ಹಾಗೂ ಪ್ರಯಾಣದ ಬಗ್ಗೆ ನೈಜ ಬಳಕೆದಾರರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಟೂರಿಂಗ್ ಬರ್ಡ್‌ ಎಂದು ಹೇಳಿಕೊಂಡಿದೆ.

ಹಂಚಿಕೊಳ್ಳುವ ಅವಕಾಶ

ಹಂಚಿಕೊಳ್ಳುವ ಅವಕಾಶ

ಟೂರಿಂಗ್‌ ಬರ್ಡ್‌ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಟುವಟಿಕೆಗಳು ಹಾಗೂ ಶಿಫಾರಸುಗಳನ್ನು ಬುಕ್‌ಮಾರ್ಕ್ ಮಾಡಲು ಅವಕಾಶವಿದೆ. ಆಹಾರ, ಸ್ಥಳಗಳು, ತಂಗುವಿಕೆಗಳು ಮತ್ತು ಅಮ್ಯೂಸ್ಮೆಂಟ್ಸ್‌ಗಳನ್ನು ಪಟ್ಟಿ ಮಾಡುವುದು ಮತ್ತು ಸಹ ಪ್ರಯಾಣಿಕರೊಂದಿಗೆ ಹಂಚಿಕೊಳ್ಳಬಹುದು. ಪ್ರಸ್ತುತ, ಟೂರಿಂಗ್ ಬರ್ಡ್‌ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಬಳಕೆದಾರರಿಗೆ ಜಾಗತಿಕವಾಗಿ ಇಂಗ್ಲಿಷ್‌ನಲ್ಲಿ ಲಭ್ಯವಿದೆ.

Best Mobiles in India

English summary
Google's new travel guide website is here. To know more this visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+