ನಿಮ್ಮ ಪಾವತಿಯ ಬಗ್ಗೆ ಮಾಹಿತಿ ನೀಡುವ ಗೂಗಲ್ ಸರ್ಚ್

Written By:

ನೀವು ಅತ್ಯುತ್ತಮ ಕ್ರೆಡಿಟ್ ಬೇಕೆಂದಾದಲ್ಲಿ ನೀವು ಸರಿಯಾದ ಸಮಯಕ್ಕೆ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಆದರೆ ನಿಮ್ಮ ದೈನಂದಿನ ಎಲ್ಲಾ ಪಾವತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಎಂದರೆ ತುಸು ಕಷ್ದ ಕೆಲಸವೇ ಸರಿ. ಆದರೆ ಇದೀಗ ಗೂಗಲ್ ಈ ವಿಷಯದಲ್ಲಿ ನಿಮ್ಮೊಂದಿಗೆ ನೆರವಿನ ಹಸ್ತವನ್ನು ಒಗ್ಗೂಡಿಸಲಿದೆ.

ಈ ವೆಬ್ ದೈತ್ಯ ತನ್ನ ಗೂಗಲ್ ಸರ್ಚ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ವಿಶೇಷತೆಯನ್ನು ಪ್ರಸ್ತುತಪಡಿಸುತ್ತಿದ್ದು ನಿಮ್ಮ ಬಿಲ್ ಬಾಕಿ ಆದಾಗ ನಿಮಗೆ ನೆನಪಿಸಿ, ಅದನ್ನು ಸರಿಯಾದ ಸಮಯಕ್ಕೆ ಪಾವತಿಸುವ ಪ್ರಯೋಜನವನ್ನು ನಿಮಗೆ ಒದಗಿಸಲಿದೆ.

ಗೂಗಲ್ ಸರ್ಚ್ ಅಪ್ಲಿಕೇಶನ್‌ನಲ್ಲಿ ಬಿಲ್ಲಿಂಗ್ ಜಂಜಾಟವಿಲ್ಲ

ನೀವು ಬಿಲ್ ಅನ್ನು ಪಾವತಿ ಮಾಡಿದ್ದೀರಾ ಇಲ್ಲವೇ ಅಥವಾ ಎಷ್ಟು ಹಣವನ್ನು ಪಾವತಿಸಿದ್ದೀರಿ ಇದೆಲ್ಲಾ ಮಾಹಿತಿಗಾಗಿ ನೀವು ಗೂಗಲ್ ಅನ್ನು ಕೇಳಿದರೆ ಸಾಕು ಗೂಗಲ್ ಅಪ್ಲಿಕೇಶನ್‌ನಲ್ಲಿರುವ ಮೈಕ್ ಅನ್ನು ಸ್ಪರ್ಶಿಸಿ ಇದನ್ನು ಹೇಳಿ, "ಶೋ ಮಿ ಮೈ ಬಿಲ್ಸ್", "ಮೈ ಬಿಲ್ಸ್ ಡ್ಯೂ ದಿಸ್ ವೀಕ್". ನೀವು ಪಾವತಿ ಬಾಕಿಯನ್ನು ಹೊಂದಿದ್ದಲ್ಲಿ ಮತ್ತು ಜಿಮೇಲ್‌ನಲ್ಲಿ ದುಡ್ಡು ಇದ್ದಲ್ಲಿ, ನಿಮಗೆ ಮುಂಬರುವ ಮತ್ತು ಹಿಂದಿನ ಬಿಲ್‌ಗಳ ಸಾರಾಂಶವನ್ನು ತ್ವರಿತವಾಗಿ ನೀವು ನೋಡುತ್ತೀರಿ."

ಗೂಗಲ್‌ ನೌನ ವಿಸ್ತರಣೆಯಾಗಿ ಈ ಅಂಶವಿದ್ದು, ಇದು ನಿಮಗೆ ಬೆಳಗ್ಗಿನ ಹವಾಮಾನ ವರದಿ ಮತ್ತು ದಟ್ಟಣೆ ಪರಿಸ್ಥಿತಿಗಳನ್ನು ನಿಮಗೆ ತಿಳಿಸುತ್ತದೆ.ಗೂಗಲ್ ನೌ ಅನ್ನು ಸಕ್ರಿಯಗೊಳಿಸಿರುವವರಿಗೆ ಮತ್ತು ತಮ್ಮ ಜಿಮೇಲ್ ಖಾತೆಗಳಿಂದ ಈ ಮಾಹಿತಿಯನ್ನು ಪ್ರವೇಶಿಸಲು ಅನುಮತಿ ಇರುವವರಿಗೆ ಇದು ಸಾಧ್ಯ ಎಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ.

English summary
This article tells about Google Search App Will Tell You When to Pay Your Bills.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot