Home
ಸುದ್ದಿಜಾಲ

ಗೂಗಲ್‌ನಿಂದ ಹೊಸ ಫೀಚರ್ಸ್‌ ಬಿಡುಗಡೆ !..ಇದು ನಿಮಗೆ ಸಾಕಷ್ಟು ಉಪಯುಕ್ತವಾಗಲಿದೆ!

ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಅಷ್ಟರ ಮಟ್ಟಿಗೆ ನಮ್ಮ ದೈನಂದಿನ ಜೀವನದಲ್ಲಿ ಗೂಗಲ್‌ ತನ್ನ ಪ್ರಭಾವವನ್ನು ಬೀರಿದೆ. ಇನ್ನು ಗೂಗಲ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಸರ್ಚ್‌ ರಿಸಲ್ಟ್‌ಗಾಗಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಸಾಕಷ್ಟು ಉಪಯುಕ್ತವಾಗಲಿದೆ. ಅದರಲ್ಲೂ ವಿಶೇಷವಾಗಿ ಪರಿಚಯವಿಲ್ಲದ ಮೂಲಗಳಿಂದ ಫಲಿತಾಂಶಗಳನ್ನು ಪಡೆಯುವಾಗ ಈ ಫೀಚರ್ಸ್‌ ಸಾಕಷ್ಟು ಉಪಯುಕ್ತ ಎನಿಸಲಿದೆ.

ಗೂಗಲ್‌

ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಹೊಸ ಸರ್ಚ್‌ ರಿಸಲ್ಟ್‌ ಫೀಚರ್ಸ್‌ ಅನಾವರಣಗೊಳಿಸಿದೆ. ಇದು ಬಳಕೆದಾರರು ವೆಬ್‌ಸೈಟ್‌ಗಳನ್ನು ತೆರೆಯುವ ಮೊದಲೇ ಆ ವೆಬ್‌ಸೈಟ್‌ಗಳ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ನೀಡುತ್ತದೆ. ಜನರು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಬಯಸುತ್ತಾರೆ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ನಲ್ಲಿ ಮೋರ್‌ ರಿಸಲ್ಟ್‌ ಪಕ್ಕದಲ್ಲಿ ಮೆನು ಐಕಾನ್ ಅನ್ನು ಗೂಗಲ್ ಸೇರಿಸಿದೆ. ಇದರ ಮೇಲೆ ಕ್ಲಿಕ್ ಮಾಡುವುದರಿಂದ ಬಳಕೆದಾರರಿಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂಬುದರ ಕುರಿತು ಹೆಚ್ಚುವರಿ ವಿಚಾರವನ್ನು ತಿಳಿಸಲಿದೆ. ಇನ್ನು ಸೈಟ್‌ಗಳ ಬಗ್ಗೆ ಕೆಲವು ಹೆಚ್ಚುವರಿ ಸಂಶೋಧನೆ ಮಾಡಲು ಗೂಗಲ್ ಸರ್ಚ್‌ ಅನ್ನು ಎಲ್ಲಿ ಬಳಸಬೇಕೆಂಬುದನ್ನು ತಿಳಿಯಬಹುದಾಗಿದೆ. ಈ ಹೆಚ್ಚುವರಿ ಸನ್ನಿವೇಶದೊಂದಿಗೆ, ನೀವು ಭೇಟಿ ನೀಡಲು ಬಯಸುವ ಸೈಟ್‌ಗಳ ಬಗ್ಗೆ ನೀವು ಹೆಚ್ಚು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಯಾವ ಫಲಿತಾಂಶಗಳು ನಿಮಗೆ ಹೆಚ್ಚು ಉಪಯುಕ್ತವಾಗುತ್ತವೆ ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ಮೂಲಕ ಮಾಹಿತಿಯು ವಿಕಿಪೀಡಿಯಾದಿಂದ ವೆಬ್‌ಸೈಟ್‌ನ ಅತ್ಯಂತ ನವೀಕೃತ ಪರಿಶೀಲಿಸಿದ ಮತ್ತು ಮೂಲದ ವಿವರಣೆಯನ್ನು ಒಳಗೊಂಡಿದೆ ಎಂಬುದನ್ನು ಗಮನಿಸಬಹುದು. ಆರೋಗ್ಯ ಅಥವಾ ಹಣಕಾಸಿನ ಮಾಹಿತಿಯಂತಹ ಯಾವುದನ್ನಾದರೂ ಹುಡುಕುವಾಗ ಈ ಫೀಚರ್ಸ್‌ ಸೂಕ್ತ ಬಳಕೆ ಆಗಿರಲಿದೆ. ಬಳಕೆದಾರರು ತಾವು ಮೊದಲು ಕೇಳಿರದ ಸೈಟ್‌ನಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಈ ಹೆಚ್ಚುವರಿ ಮಾಹಿತಿಯು ನಿಮಗೆ ಸಂದರ್ಭಕ್ಕೆ ತಕ್ಕಂತೆ ಸಹಾಯ ಮಾಡಲು ಅನುಕೂಲವಾಗಲಿದೆ.

ವಿಕಿಪೀಡಿಯಾ

ಇದಲ್ಲದೆ ವಿಕಿಪೀಡಿಯಾ ವಿವರಣೆಯನ್ನು ಹೊಂದಿರದ ವೆಬ್‌ಸೈಟ್‌ಗಳಿಗಾಗಿ, ಗೂಗಲ್ ಮೊದಲು ಸೈಟ್‌ ಅನ್ನು ಸೂಚ್ಯಂಕ ಮಾಡಿದಾಗ ಬಳಕೆದಾರರು ಲಭ್ಯವಿರುವ ಹೆಚ್ಚುವರಿ ಸಂದರ್ಭವನ್ನು ತೋರಿಸುತ್ತದೆ. ಉದ್ಯೋಗ ಪಟ್ಟಿಗಳು ಅಥವಾ ಸ್ಥಳೀಯ ವ್ಯವಹಾರ ಪಟ್ಟಿಗಳಂತಹ ವಿವಿಧ ರೀತಿಯ ಮಾಹಿತಿಯನ್ನು ಸಂಘಟಿಸಲು ಗೂಗಲ್ ಒದಗಿಸುವ ಮಾಹಿತಿಯನ್ನು ನೀಡಲಿದೆ. ಹೆಚ್ಚುವರಿಯಾಗಿ, ಹೆಚ್‌ಟಿಟಿಪಿಎಸ್ ಪ್ರೋಟೋಕಾಲ್‌ನ ಬಳಕೆಯ ಆಧಾರದ ಮೇಲೆ ಸೈಟ್‌ಗೆ ಬಳಕೆದಾರರ ಸಂಪರ್ಕವು ಸುರಕ್ಷಿತವಾಗಿದೆಯೇ ಎಂದು ಈ ಫೀಚರ್ಸ್‌ ತಿಳಿಸಿಕೊಡಲಿದೆ. ಇದು ವೆಬ್‌ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.

Best Mobiles in India

English summary
google search can now give more information about a website.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+