Home
ಸುದ್ದಿಜಾಲ

ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಸೇರಲಿದೆ ಹೊಸ ಫೀಚರ್ಸ್‌! ಇದರಿಂದ ನಿಮಗೆ ಲಾಭ ಗ್ಯಾರಂಟಿ!

ಇಂದಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ ಸರ್ಚ್‌ ಮಾಡೋದು ಸಾಮಾನ್ಯವಾಗಿದೆ. ಅಷ್ಟರ ಮಟ್ಟಿಗೆ ಗೂಗಲ್‌ ಸರ್ಚ್‌ ಎಲ್ಲಾ ವಯೋಮಾನದವರನ್ನು ಸೆಳೆದಿದೆ. ಇನ್ನು ಗೂಗಲ್‌ ಕೂಡ ಸರ್ಚ್‌ ಇಂಜಿನ್‌ ದೈತ್ಯ ಎನಿಸಿಕೊಂಡಿದ್ದು, ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ.

ಹೌದು, ಗೂಗಲ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಖ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಎಐ ಚಾಟ್‌, ವೀಡಿಯೊ ಕ್ಲಿಪ್‌ ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ. ಇನ್ನು ಈ ಫೀಚರ್ಸ್‌ಗಳು ಸದ್ಯದಲ್ಲೇ ನಡೆಯಲಿರುವ ಗೂಗಲ್‌ನ ವಾರ್ಷಿಕ I/O ಡೆವಲಪರ್ ಈವೆಂಟ್‌ನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಹಾಗಾದ್ರೆ ಗೂಗಲ್‌ ಸರ್ಚ್‌ ಸೇರಲಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಸೇರಲಿದೆ ಹೊಸ ಫೀಚರ್ಸ್‌! ಇದರಿಂದ ಲಾಭ ಗ್ಯಾರಂಟಿ!

ಗೂಗಲ್‌ ತನ್ನ ಸರ್ಚ್‌ ಇಂಜಿನ್‌ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿರುಸುವುದಕ್ಕೆ ಪ್ರಯತ್ನಿಸುತ್ತಲೇ ಇದೆ. ಇದಕ್ಕೆ ತಕ್ಕಂತೆ ಇನ್ನ ಪ್ಲಾಟ್‌ಫಾರ್ಮ್‌ ಅನ್ನು ಹೆಚ್ಚು "ದೃಶ್ಯ, ಲಘು, ವೈಯಕ್ತಿಕ ಮತ್ತು ಮಾನವ" ಮಾಡಲು ಪ್ಲಾನ್‌ ಮಾಡಿದೆ. ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಎಐ ಚಾಟ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಭಾರಿ ಸದ್ದು ಮಾಡುತ್ತಿರುವ ಚಾಟ್‌ಜಿಪಿಟಿಗೆ ಸೆಡ್ಡು ಹೊಡೆಯುವ ಪ್ಲಾನ್‌ ಇದಾಗಿದೆ.

ಗೂಗಲ್‌ ಇದೀಗ ಇಂದಿನ ಯುವಜನತೆಯ ಅವಸರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕಾಗಿ ಇನ್ಮುಂದೆ ಗೂಗಲ್‌ ಸರ್ಚ್‌ ಸಾಕಷ್ಟು ಬದಲಾವಣೆಗೆ ಸಾಕ್ಷಿಯಾಗಲಿದೆ. ಅದರಂತೆ Google AI ಪ್ರೋಗ್ರಾಂನೊಂದಿಗೆ ಸಂವಾದಗಳನ್ನು ನಡೆಸಲು ಬಳಕೆದಾರರಿಗೆ ಅವಕಾಶ ನೀಡುವ ಹೊಸ ಫೀಚರ್ಸ್‌ ನೀಡಲಿದೆ ಎನ್ನಲಾಗಿದೆ. ಇದಕ್ಕೆ "Magi" ಎಂಬ ಯೋಜನೆಯ ಕೋಡ್ ಹೆಸರು ನೀಡಲಾಗಿದೆ. ಅಂದರೆ ಹೊಸ ಎಐ ಚಾಟ್‌ ಬಳಕೆದಾರರಿಗೆ ಪರಿಣಾಮಕಾರಿ ಸರ್ಚ್‌ಗೆ ಅವಕಾಶ ನೀಡಲಿದೆ.

ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಸೇರಲಿದೆ ಹೊಸ ಫೀಚರ್ಸ್‌! ಇದರಿಂದ ಲಾಭ ಗ್ಯಾರಂಟಿ!

ಇದಲ್ಲದೆ ಗೂಗಲ್‌ ಬಳಕೆದಾರರಿಗೆ ನೆರವಾಗಲು ಹೊಸ ಅಪ್‌ಡೇಟ್‌ ಪ್ರಕಟಿಸಿದೆ. ಸಂಸ್ಥೆಯು ನೂತನವಾಗಿ ಪಾಸ್‌ಕೀ (Passkeys) ಫೀಚರ್ ಪರಿಚಯಿಸಿದೆ. ಈ ಪಾಸ್‌ಕೀಗಳು ಪಾಸ್‌ವರ್ಡ್‌ಗಳಿಗೆ ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತ ಪರ್ಯಾಯವಾಗಿದೆ ಎಂದು ಗೂಗಲ್‌ ತಿಳಿಸಿದೆ. ಪಾಸ್‌ವರ್ಡ್‌ ಇಲ್ಲದೇ, ಗೂಗಲ್‌ ಖಾತೆ ಪ್ರವೇಶಿಸಲು ಬಳಕೆದಾರರಿಗೆ ಇದು ನೆರವಾಗಲಿದೆ.

ಗೂಗಲ್‌ನ ಈ ಹೊಸ ಫೀಚರ್ ಎಲ್ಲಾ ಗೂಗಲ್‌ ಬಳಕೆದಾರರಿಗೆ ಲಭ್ಯವಿದ್ದು, ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೂ ಲಭ್ಯ. ಅಂದಹಾಗೆ ಪಾಸ್‌ಕೀಗಳೊಂದಿಗೆ, ಮುಖ ಅಥವಾ ಫಿಂಗರ್‌ಪ್ರಿಂಟ್ ಗುರುತಿಸುವಿಕೆ ಅಥವಾ ಪಿನ್ ಕೋಡ್ ಮೂಲಕ ಬಳಕೆದಾರರು ಗುರುತನ್ನು ಪರಿಶೀಲಿಸುವ ಮೂಲಕ ಗೂಗಲ್‌ ಖಾತೆಗಳನ್ನು ಪ್ರವೇಶಿಸಬಹುದಾಗಿದೆ. ಪಾಸ್‌ಕೀ (Passkeys) ತಂತ್ರಜ್ಞಾನವನ್ನು ಬಳಸಿಕೊಂಡು ಬಳಕೆದಾರರು ಮೊದಲ ಬಾರಿಗೆ ಲಾಗ್ ಇನ್ ಮಾಡಿದಾಗ ಕೀ ಜೋಡಿಯನ್ನು ರಚಿಸಲಾಗುತ್ತದೆ. ಒಂದು ಕೀ ಬಳಕೆದಾರರ ಡಿವೈಸ್‌ನಲ್ಲಿ ಸಂಗ್ರಹವಾಗುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ. ಆದರೆ ಇನ್ನೊಂದು ಕೀಲಿಯನ್ನು ಸೇವೆಯ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ.

ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಸೇರಲಿದೆ ಹೊಸ ಫೀಚರ್ಸ್‌! ಇದರಿಂದ ಲಾಭ ಗ್ಯಾರಂಟಿ!

ಎರಡು ಕೀಗಳು ಹೊಂದಿಕೆಯಾದಾಗ, ಲಾಗಿನ್ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಕೀಯನ್ನು ಅನ್‌ಲಾಕ್ ಮಾಡಲು ಮತ್ತು ಶೇರ್‌ ಮಾಡಲು, ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯವಿರುವ ಬಯೋಮೆಟ್ರಿಕ್ಸ್ ಅಥವಾ ಇತರ ದೃಢೀಕರಣ ವಿಧಾನಗಳನ್ನು ಬಳಸಬಹುದು. ನೂತನ ಪಾಸ್‌ಕೀಗಳು ಸಾಂಪ್ರದಾಯಿಕ ಪಾಸ್‌ವರ್ಡ್‌ಗಳಿಂದ ಪ್ರತ್ಯೇಕಿಸುವ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಪಾಸ್‌ಕೀಗಳು, ಪಾಸ್‌ವರ್ಡ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತವೆ ಹಾಗೂ ಬಳಕೆದಾರರು ಅವುಗಳನ್ನು ನೆನಪಿಟ್ಟುಕೊಳ್ಳಬೇಕಾಗಿಲ್ಲ.

ಪಾಸ್‌ಕೀಗಳನ್ನು ಬಳಕೆದಾರರ ಡಿವೈಸ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು ಹ್ಯಾಂಡ್‌ಶೇಕ್ ಪ್ರೋಟೋಕಾಲ್ ಅನ್ನು ಬಳಸಿಕೊಂಡು ವೆಬ್ ಸರ್ವರ್‌ನೊಂದಿಗೆ ಹೊಂದಾಣಿಕೆಯಾಗುತ್ತದೆ ಮತ್ತು ನೀವು ಬಯೋಮೆಟ್ರಿಕ್ಸ್ ಅಥವಾ ಅಂತಹುದೇ ಭದ್ರತಾ ಕ್ರಮಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಬಹುದು.

Best Mobiles in India

English summary
Google search get new AI chat feature soon: details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+