ಅತಿದೊಡ್ಡ ಮಾಹಿತಿ ಸೋರಿಕೆ ಹಗರಣದಿಂದ ಗೂಗಲ್ ಪ್ಲಸ್ ಸೇವೆ ಸ್ಥಬ್ಧ..!
ಗೂಗಲ್ ತನ್ನ ಗೂಗಲ್ + ಸಾಮಾಜಿಕ ಜಾಲತಾಣವನ್ನು ಮುಚ್ಚಲಾಗುವ ಬಗ್ಗೆ ಖಾತ್ರಿ ನೀಡಿದೆ. ಫೇಸ್ ಬುಕ್ ಗೆ ಸ್ಪರ್ಧಾತ್ಮಕವಾಗಿ ಬಿಡುಗಡೆಗೊಂಡ ಇದು ನಿರೀಕ್ಷೆಯ ಪರಿಣಾಮವನ್ನುಂಟು ಮಾಡುವಲ್ಲಿ ವಿಫಲವಾಯಿತು. ಆದರೆ ಇದರಲ್ಲಿ ದೊಡ್ಡ ಸುದ್ದಿ ಗೂಗಲ್ + ಕೊನೆಗೊಳ್ಳುತ್ತಿದೆ ಎಂಬುದಲ್ಲ ಬದಲಾಗಿ 5,00,000 ಅಕೌಂಟ್ ಗಳ ಡಾಟಾ ಸೋರಿಕೆಯ ಸಮಸ್ಯೆಯನ್ನು ಎದುರಿಸುತ್ತಿರುವುದರ ಕಾರಣದಿಂದಾಗಿ ಅನಿವಾರ್ಯವಾಗಿ ಕೊನೆಗೊಳಿಸಲಾಗುತ್ತಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳುವಂತೆ 2018 ರ ಮಾರ್ಚ್ ನಲ್ಲಿ ಗೂಗಲ್ ಒಂದು ಸಾಫ್ಟ್ ವೇರ್ ಬಗ್ ನ್ನು ತನ್ನ ಎಪಿಐ ನಲ್ಲಿ ಗಮನಿಸಿದೆ. ಇದು 2015 ರಿಂದಲೂ ಅಲ್ಲಿತ್ತು ಎಂಬುದು ಕೂಡ ತಿಳಿದಿದೆ. ಕಂಪೆನಿಯು ಇದನ್ನು ವರದಿ ಮಾಡುವಂತೆ ನಿರ್ಧರಿಸಿತು. ಆದರೆ ಗೂಗಲ್ ನ ಕಾನೂನು ಮತ್ತು ನೀತಿ ತಂಡದಿಂದ ವಿಮರ್ಷೆಗೆ ಒಳಪಡಿಸಲಾಯಿತು. ಸಮಸ್ಯೆಯನ್ನು ವರದಿ ಮಾಡದಿರುವಂತೆ ನಿರ್ಧರಿಸಲಾಯಿತು ಮತ್ತು ಸಿಇಓ ಸುಂದರ್ ಪಿಚೈ ಈ ನಿರ್ಧಾರವನ್ನು ಲೂಪ್ ನಲ್ಲಿ ಇಟ್ಟಿದ್ದರು.

ಗೂಗಲ್ ಈ ವಿಚಾರವನ್ನು ಸಾರ್ವಜನಿಕವಾಗಿ ತಿಳಿಸುವುದರಿಂದಾಗಿ ಫೇಸ್ ಬುಕ್ ನ ಕ್ಯಾಂಬ್ರಿಡ್ಜ್ ಅನಾಲಟಿಕಲ್ ಹಗರಣದೊಂದಿಗೆ ಹೋಲಿಕೆ ಮಾಡಲಾಗುತ್ತದೆ ಎಂದು ಭಾವಿಸಿತು. ಇದೀಗ ಕಂಪೆನಿಯು ಬ್ಲಾಗ್ ಪೋಸ್ಟ್ ನಲ್ಲಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದೆ ಮತ್ತು ಹೆಚ್ಚು ಟೀಕೆ ಮತ್ತು ಪರಿಶೀಲನೆಗೆ ಒಳಪಡುತ್ತಿದೆ. ಇದೀಗ ಯಾವೆಲ್ಲ ಖಾತೆಗಳು ಈ ಪ್ರಭಾವಕ್ಕೆ ಒಳಪಟ್ಟಿದೆ ಎಂಬುದು ಕೂಡ ತಿಳಿದಿಲ್ಲ.

ಏನಾಗಿದೆ?
ಇದೀಗ ಗೂಗಲ್ + ಶಟ್ ಡೌನ್ ಆಗುತ್ತಿದೆ. ಆದರೆ ಅದು ಕೇವಲ ಕನ್ಸ್ಯೂಮರ್ ವರ್ಷನ್ ಮಾತ್ರ. ಎಂಟರ್ಪ್ರೈಸ್ ವರ್ಷನ್ ಹಾಗೆಯೇ ಮುಂದುವರಿಯುತ್ತದೆ. ಒಂದು ಎಪಿಐ ಗೂಗಲ್ ಪ್ಲಸ್ ನಲ್ಲಿ ಭದ್ರತಾ ವೈಫಲ್ಯಕ್ಕೆ ಒಳಪಟ್ಟಿತು. ಒಂದು ಬಗ್ ಬಳಕೆದಾರರ ಪ್ರೊಫೈಲ್ ಫೀಲ್ಡ್ ಗೆ ಡೆವಲಪರ್ ಗಳಿಗೆ ಆಕ್ಸಿಸ್ ನೀಡಿದೆ. ಆದರೆ ಇದು ಪಬ್ಲಿಕ್ ಆಕ್ಸಿಸ್ ಗೆ ಅವಕಾಶ ನೀಡುತ್ತಿರಲಿಲ್ಲ.
ಹಾಗಾಗಿ ಈ ವೈಫಲ್ಯದಿಂದಾಗಿ ಕೆಲವು ಡಾಟಾಗಳು ಕೇವಲ ಸ್ನೇಹಿತರು ಮತ್ತು ಅವರ ನಿರ್ಧಿಷ್ಟ ಸರ್ಕಲ್ ನಲ್ಲಿರಬೇಕಾದ ಆಕ್ಸಿಸ್ ಕೆಲವು ಆಪ್ ಡೆವಲಪರ್ ಗಳ ಕೈಸೇರುವಂತಾಯಿತು. ಆದರೆ ಇದೀಗ ಗೂಗಲ್ ಹೇಳುವಂತೆ ಕೇವಲ ಹೆಸರು, ಇಮೇಲ್ ಅಡ್ರೆಸ್, ಲಿಂಗ, ವಯಸ್ಸು ಈ ಫೀಲ್ಡ್ ಗಳು ಮಾತ್ರ ಭದ್ರತಾ ವೈಫಲ್ಯ ಎದುರಿಸಿವೆಯೇ ಹೊರತು ಗೂಗಲ್ + ಪೋಸ್ಟ್ ಗಳು, ಮೆಸೇಜ್ ಗಳು, ಗೂಗಲ್ ಅಕೌಂಟ್ ಡಾಟಾ ಮತ್ತು ಫೋನ್ ನಂಬರ್ ಅಥವಾ ಸಿ ಸ್ಯೂಟ್ ಕಟೆಂಟ್ ಗಳು ಭದ್ರವಾಗಿವೆ ಎಂದು ತಿಳಿಸಿದೆ.
ಕಂಪೆನಿಯು ಮಾರ್ಚ್ 2018 ರಲ್ಲಿ ಈ ಬಗ್ ನ್ನು ಗುರುತಿಸಿದೆ ಮತ್ತು ಯಾವುದೇ ಡೆವಲಪರ್ ಗಳು ಈ ಡಾಟಾಗಳನ್ನು ತಪ್ಪಾಗಿ ಬಳಸಿಕೊಂಡಿಲ್ಲ ಎಂದು ಹೇಳುತ್ತಿದೆ.

ಎಷ್ಟು ಮಂದಿ ಬಳಕೆದಾರರು ಇದರ ಪರಿಣಾಮಕ್ಕೆ ಒಳಪಟ್ಟಿದ್ದಾರೆ?
ಗೂಗಲ್ ಈ ಎಪಿಐ ನ ಎರಡು ವಾರದ ಡಾಟಾಗಳನ್ನು ಮಾತ್ರ ಇಟ್ಟುಕೊಳ್ಳುತ್ತದೆ. ಹಾಗಾಗಿ ಎಷ್ಟು ಬಳಕೆದಾರರ ಅಕೌಂಟ್ ಇದರ ಪರಿಣಾಮಕ್ಕೆ ಒಳಪಟ್ಟಿದೆ ಎಂದು ಹೇಳಲಾಗುತ್ತಿಲ್ಲ.ಆದರೆ ಕಂಪೆನಿಯ ಲೆಕ್ಕಾಚಾರದ ಪ್ರಕಾರ ಸುಮಾರು 5,00,000 ಅಕೌಂಟ್ ಗಳು ಈ ಬಗ್ಗಿನ ಪರಿಣಾಮಕ್ಕೆ ಒಳಪಟ್ಟಿರುವ ಸಾಧ್ಯತೆ ಇದೆ.
ಸುಮಾರು 438 ಅಪ್ಲಿಕೇಷನ್ ಗಳನ್ನು ಈ ಎಪಿಐನಲ್ಲಿ ಬಳಸಲಾಗುತ್ತದೆ.ಅಷ್ಟೇ ಅಲ್ಲದೆ ಗೂಗಲ್ ಹೇಳುವ ಪ್ರಕಾರ ಈ ಬಗ್ ಬಗ್ಗೆ ಯಾವುದೇ ಡೆವಲಪರ್ ಗೂ ಕೂಡ ತಿಳಿದಿರಲಿಲ್ಲ ಹಾಗಾಗಿ ಯಾವುದೇ ಪ್ರೊಫೈಲ್ ಡಾಟಾಗಳನ್ನು ತಪ್ಪಾಗಿ ಬಳಸಿರುವುದರ ಬಗ್ಗೆ ದಾಖಲೆಗಳಿಲ್ಲ ಎಂದು ಹೇಳುತ್ತಿದೆ.

ಆಪ್‌ನಲ್ಲಿ ಹಂಚಲಾಗಿರುವ ಡಾಟಾಗಳು ಏನಾಗುತ್ತದೆ?
ಈಗಾಗಲೇ ಗೂಗಲ್ ಈ ಸಮಸ್ಯೆಯನ್ನು ಪರಿಹರಿಸಿದಂತೆ ಕಾಣುತ್ತಿದೆ. ಪ್ರತಿಯೊಬ್ಬರ ಅಕೌಂಟಿನಲ್ಲೂ ಹೆಚ್ಚಿನ ಭದ್ರತಾ ಫೀಚರ್ ಗಳನ್ನು ಅಳವಡಿಸಲಾಗಿದೆ. ಆಪ್ ಆಕ್ಸಿಸ್ ನ್ನು ನಿಮ್ಮ ಗೂಗಲ್ ಅಕೌಂಟಿಗೆ ನೀಡಿದಾಗ ಭವಿಷ್ಯದಲ್ಲಿ ನೀವು ಹಂಚಿಕೊಳ್ಳಲು ಇಚ್ಛೆ ಪಡುವ ಡಾಟಾಗಳ ಮೇಲೆ ಹೆಚ್ಚಿನ ಕಂಟ್ರೋಲ್ ನ್ನು ನೀಡಲಾಗಿರುತ್ತದೆ. ಪ್ರತಿಯೊಂದು ಪರ್ಮಿಷನ್ ಗೂ ಸಪರೇಟ್ ಆಗಿರುವ ಅಪ್ರೂವಲ್ ನ್ನು ಬಳಕೆದಾರರು ನೀಡಬೇಕಾಗುತ್ತದೆ. ಹಾಗಾಗಿ ಡಾಟಾಗಳು ಸೇಫ್ ಆಗಿ ಇರಲಿವೆ.

ಜಿಮೇಲ್ ಮತ್ತು ಥರ್ಡ್ ಪಾರ್ಟಿ ಆಪ್ ಗಳ ಆಕ್ಸಿಸ್ ಗೆ ಏನಾಗುತ್ತದೆ?
ಇನ್ನು ಮುಂದೆ ಅಂದರೆ ಮುಂದಿನ ವರ್ಷದ ಜುಲೈ ನಿಂದ ಥರ್ಡ್ ಪಾರ್ಟಿ ಆಪ್ ಡೆವಲಪರ್ ಗಳು ಜಿಮೇಲ್ ಗೆ ಬರುವ ಪ್ರೈಮ್ ಮೆಸೇಜ್ ಗಳನ್ನು ಓದಬೇಕಾಗುತ್ತದೆ. ಬಳಕೆದಾರರಿಗೆ ಉತ್ತಮ ಸೇವೆ ಮತ್ತು ಪ್ರೊಡಕ್ಟ್ ನ್ನು ನೀಡಲು ಥರ್ಡ್ ಪಾರ್ಟಿ ಡೆವಲಪರ್ ಗಳಿಗೆ ಕೆಲವು ವಿಚಾರಗಳಿಗೆ ಪರ್ಮಿಷನ್ ನೀಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆಂಡ್ರಾಯ್ಡ್ ನಲ್ಲಿ ಕಾಲ್ ಲಾಗ್,ಎಸ್ಎಂಎಸ್ ನಲ್ಲಿ ಲಿಮಿಟಿಂಗ್ ಆಪ್ಸ್ :
ಗೂಗಲ್ ಈಗ ಅಂತಿಮವಾಗಿ ಆಂಡ್ರಾಡ್ ನಲ್ಲಿ ಆಪ್ಸ್ ಗಳ ಕಾಲ್ ಲಾಗ್ ಮತ್ತು ಎಸ್ಎಂಎಸ್ ಡಾಟಾಗಳ ಬಗ್ಗೆ ಜಾಗರೂಕವಾಗಿದೆ. ಬಳಕೆದಾರರು ಆಪ್ ಗಳ ಆಕ್ಸಿಸ್ ಗಾಗಿ ಪರ್ಮಿಷನ್ ನೀಡಿದಾಗ ಯಾವುದೇ ತಪ್ಪು ಬಳಕೆ ಆಗದಿರುವಂತೆ ನೋಡಿಕೊಳ್ಳಲು ಕ್ರಮ ತೆಗೆದುಕೊಳ್ಳುವುದಕ್ಕೆ ಗೂಗಲ್ ಮುಂದಾಗುತ್ತಿದೆ. ಆದರೆ ಇದು ಯಾವಾಗ ಕಾರ್ಯಗತಗೊಳ್ಳಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

ನಿಮ್ಮ ಅಕೌಂಟನ್ನು ಸೆಕ್ಯೂರ್ ಆಗಿ ಇಟ್ಟುಕೊಳ್ಳುವುದು ಹೇಗೆ ?
ಬಳಕೆದಾರರು ಗೂಗಲ್ ಅಕೌಂಟ್ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಗೂಗಲ್ ಪ್ಲಸ್ ಪ್ರೊಫೈಲ್ ನ್ನು ತೆರೆದು ಜಿ+ ಅಕೌಂಟ್ ಇನ್ಫರ್ಮೇಷನ್ ನ್ನು ಡಿಲೀಟ್ ಮಾಡಬಹುದು. ಗೂಗಲ್ ಪ್ಲಸ್ ಪ್ರೊಫೈಲ್ ನಲ್ಲಿ ಸೆಟ್ಟಿಂಗ್ಸ್ ಆಯ್ಕೆಯನ್ನು ಎಡಭಾಗದಲ್ಲಿ ಗಮನಿಸುತ್ತೀರಿ ಮತ್ತು ಅದರ ಕೆಳಗೆ ನೋಟಿಫಿಕೇಷನ್ ಟ್ಯಾಬ್ ಇರುತ್ತದೆ. ಸ್ಕ್ರೋಲ್ ಡೌನ್ ಮಾಡಿದರೆ ಕೆಳಭಾಗದಲ್ಲಿ ಗೂಗಲ್ + ಪ್ರೊಫೈಲ್ ಡಿಲೀಟ್ ಮಾಡಲು ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಗೂಗಲ್ ನಿಮಗೆ ಮತ್ತೊಮ್ಮೆ ಸೈನ್ ಇನ್ ಆಗುವುದಕ್ಕೆ ಕೇಳುತ್ತದೆ. ನಂತರ ನಿಮಗೆ ಗೂಗಲ್+ ಅಕೌಂಟ್ ನ್ನು ಡಿಲೀಟ್ ಮಾಡಲು ಆಯ್ಕೆ ಇರುತ್ತದೆ.
ಜಿ+ ನ್ನು ಯುಟ್ಯೂಬ್ ಅಕೌಂಟ್ ಜೊತೆಗೆ ಲಿಂಕ್ ಕೂಡ ಮಾಡಲಾಗಿದೆ. ಹಾಗಾಗಿ ಅದು ಕೂಡ ನಿಮ್ಮ ಡಾಟಾಗಳ ಮೇಲೆ ಸ್ವಲ್ಪ ಮಟ್ಟಿಗಿನ ಪರಿಣಾಮವನ್ನುಂಟು ಮಾಡುತ್ತದೆ. ಗೂಗಲ್ ಪೇಜ್ ನಲ್ಲಿ ತಿಳಿಸಿರುವಂತೆ ನಿಮ್ಮ ಕೆಲವು ಡಾಟಾಗಳು ಹಾಗೆಯೇ ಉಳಿಯುತ್ತದೆ ಮತ್ತು ಕೆಲವು ಡಾಟಾಗಳು ಡಿಲೀಟ್ ಆಗುತ್ತದೆ ಮತ್ತು ಕನ್ವರ್ಟ್ ಆಗುತ್ತದೆ. ಕೆಲವು ಆಕ್ಸಿಸ್ ಮತ್ತು ಸರ್ವೀಸ್ ಫಂಕ್ಷನಾಲಿಟಿಗಳನ್ನು ನೀವು ಕಳೆದುಕೊಳ್ಳಬೇಕಾಗಬಹುದು. ನಿಮ್ಮ ಯುಟ್ಯೂಬ್ ಚಾನಲ್ ನಲ್ಲಿ ವೀಡಿಯೋಗಳು ಮತ್ತು ಪ್ಲೇಲಿಸ್ಟ್ ಗಳು ಹಾಗೆಯೇ ಉಳಿಯಲಿದೆ. ಯುಟ್ಯೂಬ್ ಆಕ್ಸಿಸ್ ಹಾಗೆಯೇ ಮುಂದುವರಿಯಲಿದೆ. ಇತರೆ ಕೆಲವು ಕಂಟೆಂಟ್ ಗಳು ಡಿಲೀಟ್ ಆಗುತ್ತದೆ.


Click it and Unblock the Notifications








