Home
ಸುದ್ದಿಜಾಲ

ಯೂಟ್ಯೂಬ್ ಸ್ಟುಡಿಯೋಗಾಗಿ ಗೂಗಲ್ ನಿಂದ ಸ್ಮಾರ್ಟ್ ರಿಪ್ಲೇ ಫೀಚರ್ಸ್‌ ಬಿಡುಗಡೆ!

ಸರ್ಚ್‌ ಇಂಜಿನ್‌ ದೈತ್ಯ ಎನಿಸಿಕೊಂಡಿರುವ ಗೂಗಲ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವಾರು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕಾಲಕ್ಕೆ ತಕ್ಕಂತೆ ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಒಂದನ್ನ ಪರಿಚಯಿಸಿದೆ. ಸದ್ಯ ಯೂಟ್ಯೂಬ್ ಸ್ಟುಡಿಯೋದಲ್ಲಿ ಸ್ಮಾರ್ಟ್ ರಿಪ್ಲೇಗಾಗಿ ಗೂಗಲ್ ತನ್ನ ಈ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಇದು ಯೂಟ್ಯೂಬ್ ಕ್ಲಿಪ್‌ಗಳ ಅಡಿಯಲ್ಲಿರುವ ಕಾಮೆಂಟ್‌ಗಳನ್ನು ವಿಶ್ಲೇಷಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಯುಟ್ಯೂಬ್‌ ಸ್ಟುಡಿಯೋದಲ್ಲಿ ಸ್ಮಾರ್ಟ್‌ರಿಪ್ಲೇಗೆ ಅನುಕೂಲಕರವಾಗಿದೆ. ಇನ್ನು ಈ ಫೀಚರ್ಸ್‌ ಯುಟ್ಯೂಬ್‌ ಕ್ಲಿಪ್‌ಗಳ ಆಧಾರದ ಮೇಲೆ ಸಂಭವನೀಯ ಉತ್ತರಗಳನ್ನು ನೀಡುತ್ತದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಏನು ಇದರ ಕಾರ್ಯನಿರ್ವಹಣೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳಣ ಬನ್ನಿರಿ.

ಗೂಗಲ್

ಗೂಗಲ್ ತನ್ನ ಪ್ಲಾರ್ಟ್‌ಫಾರ್ಮ್‌ಗಳೆಲ್ಲವನ್ನು ಏಕೀಕರಣಗೊಳಸಿರೋದು ನಿಮಗೆಲ್ಲಾ ತಿಳಿದೆ ಇದೆ. ಆದರೆ ಪ್ಲಾಟ್‌ಫಾರ್ಮ್‌ನೊಳಗಿನ ಕಾಮೆಂಟ್‌ಗಳು Gmail ನಿಂದ ಭಿನ್ನವಾಗಿರುವುದರಿಂದ YouTube ಗಾಗಿ ಸ್ಮಾರ್ಟ್‌ರಿಪ್ಲೇ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇನ್ನು ಈ ಫೀಚರ್ಸ್‌ನಲ್ಲಿರುವ ಭಾಷಾ ಸಂಸ್ಕರಣಾ ಮಾದರಿಯು ಹೆಚ್ಚು ಸಂಕೀರ್ಣವಾದ ಮಾದರಿಗಳು, ಎಮೋಜಿಗಳು, ಸಂಕ್ಷಿಪ್ತ ಪದಗಳು, ಆಡುಭಾಷೆ, ವಿರಾಮಚಿಹ್ನೆಯ ಅಸಮಂಜಸ ಬಳಕೆ ಮತ್ತು ಇತರ ಗುಣಲಕ್ಷಣಗಳಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಈ ಹೊಸ ಫೀಚರ್ಸ್‌ ತನ್ನ ಕಾಮೆಂಟ್‌ಗಳಲ್ಲಿ ವಿವಿಧ ಭಾಷೆಗಳ ಬಳಕೆಯನ್ನು ಬೆಂಬಲಿಸುತ್ತದೆ ಮತ್ತು ಇದು ಭಾಷೆಯ ಮಾದರಿಗಳನ್ನು ಗುರುತಿಸುತ್ತದೆ ಹಾಗೂ ಅದನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಲಾಗ್ತಿದೆ.

ಯೂಟ್ಯೂಬ್‌

ಸದ್ಯ ಯೂಟ್ಯೂಬ್‌ಗಾಗಿ ನಿರ್ಮಿಸಲಾದ ನವೀಕರಿಸಿದ ಸ್ಮಾರ್ಟ್‌ರಿಪ್ಲೇಯನ್ನು ಯೂಟ್ಯೂಬ್ ಸ್ಟುಡಿಯೋದಲ್ಲಿ ಕಾರ್ಯಗತಗೊಳಿಸಲಾಗಿದೆ. ಇದು ಕ್ರಿಯೆಟರ್ಸ್‌, ತಮ್ಮ ವೀಕ್ಷಕರೊಂದಿಗೆ ಹೆಚ್ಚು ಸುಲಭವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಮಾದರಿಯು ಕಂಪ್ಯೂಟೇಶನಲ್ ಪರಿಣಾಮಕಾರಿಯಾದ ಸ್ವಯಂ-ಗಮನ ಜಾಲದ ಮೂಲಕ ಕಾಮೆಂಟ್ ಮತ್ತು ಪ್ರತ್ಯುತ್ತರ ಪ್ರಾತಿನಿಧ್ಯವನ್ನು ನೀಡಲಿದೆ. ಇದು ಮೊದಲ ಅಡ್ಡ-ಭಾಷಾ ಮತ್ತು ಅಕ್ಷರ ಬೈಟ್ ಆಧಾರಿತ ಸ್ಮಾರ್ಟ್ ರಿಪ್ಲೇ ಮಾದರಿಯನ್ನು ಸಹ ಪ್ರತಿನಿಧಿಸುತ್ತದೆ ಎಂದು ಕಂಪನಿಯು ತನ್ನ ಗೂಗಲ್ ಎಐ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಸ್ಮಾರ್ಟ್ ರಿಪ್ಲೇ

ಇನ್ನು ಈ ಸ್ಮಾರ್ಟ್ ರಿಪ್ಲೇ ಮೆಸಿನ್‌ ಲರ್ನಿಂಗ್‌ ಅನ್ನು ಆಧರಿಸಿದೆ ಮತ್ತು ಆದ್ದರಿಂದ ಬದಲಾದ ಉತ್ತರಗಳ ಮಾತುಗಳಿಗೆ ಈ ಕೆಳಗಿನ ಉತ್ತರಗಳನ್ನು ಅಳವಡಿಸುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಎಲ್ಲಾ ಬಳಕೆದಾರರ ಕಾಮೆಂಟ್‌ಗಳಿಗೆ ಈ ಕಾರ್ಯವು ಲಭ್ಯವಿರುವುದಿಲ್ಲ ಎನ್ನಲಾಗ್ತಿದೆ. ಇದಲ್ಲದೆ ಸ್ಮಾರ್ಟ್ ರಿಪ್ಲೇಯ ಈ ಸುಧಾರಿತ ಮತ್ತು ನವೀಕರಿಸಿದ ಆವೃತ್ತಿಯು ಎರಡು ಸಂದರ್ಭಗಳಲ್ಲಿ ಮಾತ್ರ ಸಲಹೆಗಳನ್ನು ನೀಡುತ್ತದೆ. ಮೊದಲನೆಯದು, ಕ್ರಿಯೆಟರ್ಸ್‌ ಬಳಕೆದಾರರ ಕಾಮೆಂಟ್‌ಗೆ ಪ್ರತಿಕ್ರಿಯಿಸುವ ಸಾಧ್ಯತೆಯಿರುವಾಗ, ಮತ್ತು ಎರಡನೆಯದು, ಮಾಡೆಲ್ ಮಾಡಿದ ಕಾಮೆಂಟ್‌ಗೆ ಸಂವೇದನಾಶೀಲ ಮತ್ತು ನಿರ್ದಿಷ್ಟ ಪ್ರತಿಕ್ರಿಯೆ ನೀಡುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿರುವಾಗ ಮಾತ್ರ ಬಲಸಲ್ಪಡುತ್ತದೆ. ಇದಲ್ಲದೆ ಯೂಟ್ಯೂಬ್‌ಗಾಗಿ ಸ್ಮಾರ್ಟ್‌ರಿಪ್ಲೇ ಪ್ರಸ್ತುತ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿದೆ ಎಂದು ಗೂಗಲ್ ಉಲ್ಲೇಖಿಸಿದೆ. ಆದಾಗ್ಯೂ, ಭವಿಷ್ಯದಲ್ಲಿ ಹೆಚ್ಚಿನ ಭಾಷೆಗಳಿಗೆ ಇದನ್ನು ಸಕ್ರಿಯಗೊಳಿಸುವ ಬಗ್ಗೆ ನಿರೀಕ್ಷಿಸಲಾಗಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
SmartReply makes it easy for YouTube Creators to connect with their community. However, there were some difficulties with its development.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+