Subscribe to Gizbot

ಮೊದಲ ಬಾರಿಗೆ ಗೂಗಲ್‌ಗೆ ಬಹುದೊಡ್ಡ ಸೋಲು!?..ಏನು?

Written By:

ಗೂಗಲ್ ಎಂದರೆ ಅದೃಷ್ಟ, ಅದೃಷ್ಟ ಎಂದರೆ ಗೂಗಲ್ ಎನ್ನುವ ಮಾತಿದೆ.!! ಆದರೆ, ಇಂಟರ್‌ನೆಟ್ ಲೋಕದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿರುವ ಗೂಗಲ್ ಏನೇ ಹೊರತಂದರೂ ಅದು ಅತ್ಯುತ್ತವಾಗಿಯೇ ಇರುತ್ತದೆ ಎನ್ನುವುದುದನ್ನು ಒಪ್ಪಬಹುದಾದರೂ ಅದಕ್ಕೂ ಕೂಡ ಸೋಲು ಎದುರಾಗಿದೆ!!

ಕಳೆದ ಎಂಟು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಗೂಗಲ್ ಪಿಕ್ಸೆಲ್ ಮತ್ತು ಗೂಗಲ್ ಪಿಕ್ಸೆಲ್ ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಚಾಪು ಮೂಡಿಸುವಲ್ಲಿ ವಿಫಲವಾಗಿವೆ. ಬಿಡುಗಡೆಯಾದ ಸಮಯದಿಂದ ಇಲ್ಲಿವರೆಗೂ ಕೇವಲ 1 ಮಿಲಿಯನ್ ( 10 ಲಕ್ಷ) ಸ್ಮಾರ್ಟ್‌ಫೋನ್ ಮಾರಾಟವಾಗಿವೆ ಎಂದು ವರದಿಯೊಂದು ಹೇಳಿದೆ.!

ಮೊದಲ ಬಾರಿಗೆ ಗೂಗಲ್‌ಗೆ ಬಹುದೊಡ್ಡ ಸೋಲು!?..ಏನು?

ಬಹುತೇಕ ಇದೇ ಮೊದಲ ಬಾರಿಗೆ ಗೂಗಲ್ ಇಂತಹ ಸೂಲು ಅನುಭವಿಸಿದೆ ಎನ್ನಲಾಗಿದ್ದುದೆ. ಹಾಗಾದರೆ ವರದಿಯಲ್ಲಿ ಏನೇನಿದೆ? ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಫೆಲ್ ಆಗಿದ್ದೇಕೆ? ಎಂಬ ಎಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಪಿಕ್ಸೆಲ್ ಲಾಂಚರ್ ಆಪ್'!!

'ಪಿಕ್ಸೆಲ್ ಲಾಂಚರ್ ಆಪ್'!!

ಇನ್ನು ಈ ಬಗ್ಗೆ ಗೂಗಲ್ ಎಲ್ಲಿಯೂ ಕೂಡ ಅಫಿಷಿಯಲ್ ಆಗಿ ಹೇಳಿಲ್ಲ. ಆದರೆ, ಗೂಗಲ್‌ನ 'ಪಿಕ್ಸೆಲ್ ಲಾಂಚರ್ ಆಪ್' ಡೌನ್‌ಲೋಡ್ ಆಗಿರುವ ಸಂಖ್ಯೆಯ ಮೇಲೆ ಈ ವರದಿಯು ಹೊರಬಿದ್ದಿದೆ. ಹಾಗಾಗಿ, ಗೂಗಲ್ ಪಿಕ್ಸೆಲ್ ಸರಣಿಯ ಸ್ಮಾರ್ಟ್‌ಪೊನ್‌ಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಫೇಲ್ ಆಗಿವೆ ಎನ್ನಬಹುದು.!

ಮೊಬೈಲ್‌ ಮಾರುಕಟ್ಟೆಯಲ್ಲಿ ಇಲ್ಲ ಬೆಲೆ!!

ಮೊಬೈಲ್‌ ಮಾರುಕಟ್ಟೆಯಲ್ಲಿ ಇಲ್ಲ ಬೆಲೆ!!

ಇಡೀ ಅಂತರ್ಜಾಲ ಪ್ರಪಂಚದಲ್ಲಿ ತನ್ನದೇ ಚಾಪು ಮೂಡಿಸಿರುವ ಗೂಗಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಾತ್ರ ಎಂದೂ ಚಾಪು ಮೂಡಿಸುತ್ತಿಲ್ಲ.! ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ರೂಪಿಸಿದರೂ ಸಹ ಚೀನಾ ಸ್ಮಾರ್ಟ್‌ಫೋನ್‌ಗಳ ಮುಂದೆ ಡಲ್ ಆಗಿದೆ.!!

ಗೂಗಲ್ ಫೋನ್ ಬೆಲೆ ಹೆಚ್ಚು!!

ಗೂಗಲ್ ಫೋನ್ ಬೆಲೆ ಹೆಚ್ಚು!!

ಗೂಗಲ್ ಕೇವಲ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಬಿಡುಗಡೆ ಮಾಡುತ್ತಿರುವುದು ಗೂಗಲ್ ಸ್ಮಾರ್ಟ್‌ಪೊನ್‌ಗಳು ಮಾರುಕಟ್ಟೆಯಲ್ಲಿ ಫೆಲ್ ಆಗುತ್ತಿರುವುದಕ್ಕೆ ಕಾರಣ ಇರಬಹುದು. ಹಾಗಾಗಿಯೇ, ಗೂಗಲ್ ಫೋನ್‌ಗಳು ಸಾಮಾನ್ಯಜನರನ್ನು ತಲುಪಿಲ್ಲ.!!

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬರುತ್ತಿವೆ.!!

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬರುತ್ತಿವೆ.!!

ಗೂಗಲ್ ಸಿಇಓ, ಭಾರತದ ಸಂಜಾತ ಸುಂದರ್‌ ಪಿಚೈ ಅವರು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ತಯಾರಿಸಲು ಗೂಗಲ್ ಮುಂದಾಗಿದೆ ಎಂದು ಹೆಳಿದ್ದರು. ಹಾಗಾಗಿ, ಮುಂದಿನ ದಿವಸಗಳಲ್ಲಿ ಗೂಗಲ್ ಕಡಿಮೆ ಬೆಲೆಗೆ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆ ಮಾಡಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
new report shows that Google managed to sell nearly 1 million Pixel and Pixel XL units since launch.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot