Home
ಸುದ್ದಿಜಾಲ

ಹದಿಹರೆಯದವರ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟ ಗೂಗಲ್‌!

ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ ಸರ್ಚ್‌ ಮಾಡೊದು ಸಾಮಾನ್ಯ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಜನಮಾನಸದಲ್ಲಿ ಅಚ್ಚೊತ್ತಿದೆ. ಇನ್ನು ಗೂಗಲ್‌ ಕೂಡ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಇದೀಗ ಗೂಗಲ್‌ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ತನ್ನ ಸೇವೆಗಳಲ್ಲಿ ಹದಿಹರೆಯದವರ ಗೌಪ್ಯತೆ ರಕ್ಷಣೆಯನ್ನು ಸುಧಾರಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ 18 ಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಉದ್ದೇಶಿತ ಜಾಹೀರಾತನ್ನು ಸೀಮಿತಗೊಳಿಸುತ್ತಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಹದಿಹರೆಯದ ಬಳಕೆದಾರರ ಗೌಪ್ಯತೆ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೀಗ ಅದರ ಮುಂದುವರೆದ ಭಾಗವಾಗಿ 18 ಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಉದ್ದೇಶಿತ ಜಾಹೀರಾತನ್ನು ಸೀಮಿತಗೊಳಿಸುವುದಕ್ಕೆ ಮುಂದಾಗಿದೆ. ಹದಿಹರೆಯದವರನ್ನು ವಯಸ್ಸು, ಲಿಂಗ ಮತ್ತು ಆಸಕ್ತಿಗಳ ಬಗ್ಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಜಾಹೀರಾತುಗಳನ್ನು ನಿರ್ಬಂಧಿಸುವುದನ್ನು ಆರಂಭಿಸುವುದಾಗಿ ಹೇಳಿದೆ. ಹಾಗಾದ್ರೆ ಗೂಗಲ್‌ ಹದಿಹರೆಯದವರ ಸುರಕ್ಷತೆಗಾಗಿ ಯಾವೆಲ್ಲಾ ಕ್ರಮ ಕೈಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಹದಿಹರೆಯದವರ ಸುರಕ್ಷತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಿದೆ. ಇದಕ್ಕಾಗಿ ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು ಹದಿಹರೆಯದವರನ್ನು ಅವರ ವಯಸ್ಸು, ಲಿಂಗ ಮತ್ತು ಆಸಕ್ತಿಗಳ ಬಗ್ಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಜಾಹೀರಾತುಗಳನ್ನು ನಿರ್ಬಂಧಿಸುವುದನ್ನು ಆರಂಭಿಸುವುದಾಗಿ ಹೇಳಿದೆ. ಫೇಸ್‌ಬುಕ್ ಇಂಕ್‌ನ ಇನ್‌ಸ್ಟಾಗ್ರಾಮ್ ಇತ್ತೀಚೆಗೆ 18 ವರ್ಷದೊಳಗಿನ ಬಳಕೆದಾರರನ್ನು ಗುರಿಯಾಗಿಸುವುದರ ವಿರುದ್ಧ ಇದೇ ರೀತಿಯ ನೀತಿಯನ್ನು ಅನುಸರಿಸಿದೆ.

ವೀಡಿಯೋ

ಇನ್ನು ವೀಡಿಯೋ ಸೈಟ್ ಯೂಟ್ಯೂಬ್, ಸ್ಟ್ಯಾಂಡರ್ಡ್ ಸರ್ಚ್, ಗೂಗಲ್ ಅಸಿಸ್ಟೆಂಟ್, ಲೊಕೇಶನ್ ಹಿಸ್ಟರಿ, ಗೂಗಲ್ ಪ್ಲೇ ಸ್ಟೋರ್ ಮತ್ತು ಶಿಕ್ಷಣಕ್ಕಾಗಿ ಗೂಗಲ್ ವರ್ಕ್‌ಸ್ಪೇಸ್‌ನಾದ್ಯಂತ ಗೌಪ್ಯತೆ ಬದಲಾವಣೆಗಳನ್ನು ಯೋಜಿಸುತ್ತಿದೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ಯೂಟ್ಯೂಬ್‌ನಲ್ಲಿ, ಕಂಪನಿಯು ಪೂರ್ವನಿಯೋಜಿತವಾಗಿ 13 ರಿಂದ 17 ವರ್ಷ ವಯಸ್ಸಿನ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಖಾಸಗಿಯನ್ನಾಗಿ ಮಾಡಲಿದೆ. ಸ್ವಯಂಚಾಲಿತ ಗೌಪ್ಯತೆ ಸೆಟ್ಟಿಂಗ್ ಎಂದರೆ ಆ ಬಳಕೆದಾರರ ವೀಡಿಯೊಗಳನ್ನು ಅವರು ಅಥವಾ ಅನುಮೋದಿತ ವೀಕ್ಷಕರು ಮಾತ್ರ ವೀಕ್ಷಿಸಬಹುದು.

ವೀಡಿಯೊ

ಅಲ್ಲದೆ, ಈ ಹದಿಹರೆಯದವರು ತಮ್ಮ ವೀಡಿಯೊಗಳನ್ನು ಸಾರ್ವಜನಿಕವಾಗಿ ನೋಡಲು ಅನ್‌ಲಾಕ್ ಮಾಡಲು ಸಾಧ್ಯವಾಗುತ್ತದೆ. ಯೂಟ್ಯೂಬ್, ಪೂರ್ವನಿಯೋಜಿತವಾಗಿ, ಕಿರಿಯ ಬಳಕೆದಾರರಿಗೆ ವಿರಾಮ ತೆಗೆದುಕೊಳ್ಳಲು ಮತ್ತು ಮಲಗುವ ವೇಳೆಗೆ ನಿದ್ರಿಸಲು ಹಾಗೂ ಸತತ ವೀಡಿಯೊಗಳ ಆಟೋಪ್ಲೇ ಅನ್ನು ನಿಷ್ಕ್ರಿಯಗೊಳಿಸಲು ಜ್ಞಾಪನೆಗಳನ್ನು ಒಳಗೊಂಡಿರುತ್ತದೆ. ಸರ್ಚ್‌ನಲ್ಲಿ 13 ರಿಂದ 18 ವರ್ಷ ವಯಸ್ಸಿನ ಬಳಕೆದಾರರಿಗೆ ಸ್ಪಷ್ಟ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಗೂಗಲ್ ತನ್ನ ಸುರಕ್ಷಿತ ಹುಡುಕಾಟದ ವೈಶಿಷ್ಟ್ಯವನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ. ಈ ವೈಶಿಷ್ಟ್ಯವು ಸ್ಮಾರ್ಟ್ ಪರದೆಗಳಲ್ಲಿ ಗೂಗಲ್ ಅಸಿಸ್ಟೆಂಟ್‌ಗೆ ಅನ್ವಯಿಸುತ್ತದೆ.

ಗೂಗಲ್

ಗೂಗಲ್ ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್‌ಗೆ ಹೊಸ ಡೇಟಾ ಸಂಗ್ರಹ ನೀತಿ ಪುಟಗಳನ್ನು ಸೇರಿಸುವುದಾಗಿ ಹೇಳಿದೆ, ಕಳೆದ ವರ್ಷ ಪ್ರಾರಂಭವಾದ ಆಪಲ್ ಇಂಕ್ ಫೀಚರ್ಸ್‌ಅನ್ನು ಪ್ರತಿಬಿಂಬಿಸುತ್ತದೆ. ಸಿಲಿಕಾನ್ ವ್ಯಾಲಿಯಲ್ಲಿ ಇತ್ತೀಚೆಗೆ ಆನ್‌ಲೈನ್ ಸೇವೆಗಳಲ್ಲಿನ ಮಕ್ಕಳ ರಕ್ಷಣೆಯು ಹೆಚ್ಚಿನ ಗಮನವನ್ನು ಗಳಿಸಿದೆ. ಆಪಲ್ ಕಳೆದ ವಾರ ತನ್ನ ಸಂದೇಶಗಳ ಅಪ್ಲಿಕೇಶನ್‌ನಲ್ಲಿ ಹೊಸ ಚಿತ್ರಗಳನ್ನು ಮತ್ತು ಐಕ್ಲೌಡ್ ಫೋಟೋ ಲೈಬ್ರರಿಗಳಿಗೆ ಮಕ್ಕಳ ಸ್ಪಷ್ಟವಾದ ಅಥವಾ ನಿಂದನೀಯ ಚಿತ್ರಗಳನ್ನು ಅಪ್ಲೋಡ್ ಮಾಡುವುದರ ವಿರುದ್ಧ ಪ್ರೊಟೆಕ್ಷನ್‌ ಅನ್ನು ಘೋಷಿಸಿದೆ.

Best Mobiles in India

English summary
Google said it will begin blocking advertising that targets teenagers based on data compiled about their age, gender and interests.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+