ಇನ್ಮುಂದೆ ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಬೀದಿಯನ್ನು 360ಡಿಗ್ರಿಯಲ್ಲಿ ನೋಡಬಹುದು!
ಗೂಗಲ್ ಮ್ಯಾಪ್‌ನ ಜನಪ್ರಿಯ ಫೀಚರ್ಸ್‌ಗಳಲ್ಲಿ ಸ್ಟ್ರೀಟ್ ವ್ಯೂ ಆಯ್ಕೆಯು ಕೂಡ ಒಂದಾಗಿದೆ. ಭದ್ರತೆಯ ಕಾರಣಗಳಿಂದಾಗಿ ಭಾರತದಲ್ಲಿ ಬ್ಯಾನ್ ಆಗಿದ್ದ ಈ ಫೀಚರ್ಸ್ ಕಳೆದ ವರ್ಷದಿಂದ ಲಭ್ಯವಾಗುತ್ತಿದೆ. ಇದೀಗ ಈ ಫೀಚರ್ಸ್ ಭಾರತದ ನಗರ ಪ್ರದೇಶಗಳು ಮಾತ್ರವಲ್ಲದೆ ಎಲ್ಲಾ ಕಡೆಗಳಲ್ಲಿಯೂ ಕೂಡ ಲಭ್ಯವಾಗುತ್ತಿದೆ.
ಹೌದು, ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ಸ್ ಇದೀಗ ನಿಮ್ಮ ಹಳ್ಳಿಗಳಲ್ಲಿಯೂ ಕೂಡ ಲಭ್ಯವಾಗಲಿದೆ. ಇದರಿಂದ ನಿಮ್ಮ ಮನೆ, ಊರು, ತಾಲೊಕು, ಜಿಲ್ಲಾ ಕೇಂದ್ರಗಳ ಸ್ಥಳಗಳನ್ನು ಸ್ಟ್ರೀಟ್ ವ್ಯೂ ಮೂಲಕ ನೋಡಬಹುದಾಗಿದೆ. ಸ್ಟ್ರೀಟ್ ವ್ಯೂ ಫೀಚರ್ಸ್ ನಿಮಗೆ 360 ಡಿಗ್ರಿ ವ್ಯೂ ಅನ್ನು ನೀಡಲಿದೆ. ಹಾಗಾದ್ರೆ ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸುವುದು ಹೇಗೆ? ಈ ಆಯ್ಕೆಯು ನಿಮ್ಮ ಹಳ್ಳಿಗಳಲ್ಲಿ ಎಂದಿನಿಂದ ಲಭ್ಯವಾಗಲಿದೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಷ್ಟು ದಿನ ಭಾರತದಲ್ಲಿ ಬೆಂಗಳೂರು ಸೇರಿದಂತೆ ಕೆಲವೇ ಕೆಲವು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಗೂಗಲ್ ಸ್ಟ್ರೀಟ್ ವ್ಯೂ ಎಲ್ಲೆಡೆ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ಭಾರತದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಸ್ಟ್ರೀಟ್ ಅನ್ನು 360 ಡಿಗ್ರಿ ವೀಕ್ಷಣೆ ಮಾಡಬಹುದು. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿನ ಹೆಚ್ಚಿನ ಸ್ಥಳಗಳು 360-ಡಿಗ್ರಿ ವೀಕ್ಷಣೆಯ ಆಯ್ಕೆಗಳನ್ನು ಹೊಂದಿದ್ದರೆ, ಕೆಲವು ಸ್ಥಳಗಳು ಸ್ಥಿರ ಚಿತ್ರಗಳ ಮೂಲಕ ವೀಕ್ಷಣೆ ಮಾಡುವ ಅವಕಾಶ ಹೊಂದಿವೆ.
ಗೂಗಲ್ ಮ್ಯಾಪ್‌ನಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ಸ್ ಮೊಬೈಲ್ ಮತ್ತು ವೆಬ್ ಆವೃತ್ತಿ ಎರಡರಲ್ಲೂ ಕೂಡ ಲಭ್ಯವಿದೆ. ಆದರೆ ಮೊಬೈಲ್ ಆವೃತ್ತಿಗಿಂತ ವೆಬ್ ಆವೃತ್ತಿಯಲ್ಲಿ ಹೆಚ್ಚುವರಿ ಫೀಚರ್ಸ್‌ಗಳನ್ನು ;ಪಡೆದುಕೊಂಡಿದೆ. ಅಂದರೆ ವೆಬ್ ಆವೃತ್ತಿಯಲ್ಲಿ ನಿಮಗೆ ನೀವು ನಿರ್ದಿಷ್ಟ ಫೋಟೋವನ್ನು ತೆಗೆದ ತಿಂಗಳು ಮತ್ತು ವರ್ಷವನ್ನು ತೋರಿಸುತ್ತದೆ. ಅಲ್ಲದೆ ವೆಬ್ ಆವೃತ್ತಿಯು ಸ್ಥಿರತೆಯನ್ನು ತೋರಿಸುವ 'ಅನ್ವೇಷಿಸಿ' ಫೀಚರ್ಸ್ ಅನ್ನು ಹೊಂದಿದ್ದು, ಹತ್ತಿರದ ಸ್ಥಳಗಳ 360-ಡಿಗ್ರಿ ವ್ಯೂ ಅನ್ನು ನೀಡಲಿದೆ.

ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸುವುದು ಹೇಗೆ?
ವೆಬ್‌ಸೈಟ್ ಮೂಲಕ ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಪ್ರವೇಶಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಮೊದಲಿಗೆ ಗೂಗಲ್ ಮ್ಯಾಪ್ಸ್ ಅನ್ನು ತೆರೆಯಿರಿ
* ಇದರಲ್ಲಿ ನೀವು ವ್ಯೂ ಮಾಡಬೇಕಾದ ಸ್ಥಳವನ್ನು ಸರ್ಚ್ ಮಾಡಿ
* ಇದೀಗ ಸ್ಕ್ರೀನ್ ಕೆಳಗಿನ ಬಲ ಮೂಲೆಯಲ್ಲಿ ಹೋಗಿ, ಮತ್ತು ಸ್ಟ್ರೀ ವ್ಯೂ ಐಕಾನ್ ಮೇಲೆ ಕ್ಲಿಕ್ ಮಾಡಿ
* ನಂತರ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಲಭ್ಯವಿರುವ ಸ್ಥಳಗಳು ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ.
* ಇದೀಗ ಝೂಮ್ ಇನ್ ಮಾಡಿ ಮತ್ತು ನೀವು ಸ್ಟ್ರೀ ವ್ಯೂ ಮಾಡಲು ಬಯಸುವ ರಸ್ತೆಯ ಮೇಲೆ ಕ್ಲಿಕ್ ಮಾಡಿ
ನಿಮ್ಮ ಮನೆಯ ಹಾದಿಯನ್ನು ಕೂಡ ನೀವು ಆಯ್ಕೆ ಮಾಡಿಕೊಂಡು 360 ಡಿಗ್ರಿಯ ವ್ಯೂ ಅನ್ನು ಕಾಣಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಲು ಹೀಗೆ ಮಾಡಿ!
* ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಅಪ್ಲಿಕೇಶನ್ ಅಪ್ಡೇಟ್ ಮಾಡಿ ಮತ್ತು ತರೆಯಿರಿ.
* ಇದೀಗ ನಿಮ್ಮ ಆಸಕ್ತಿಯ ಸ್ಥಳವನ್ನು ಸರ್ಚ್ ಮಾಡಿ
* ನಂತರ ಮೇಲಿನ ಬಲ ಮೂಲೆಯಲ್ಲಿ, ಲೇಯರ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡಿ
* ಇದರಲ್ಲಿ ಸ್ಟ್ರೀಟ್ ವ್ಯೂ ಆಯ್ಕೆಮಾಡಿ
* ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಲಭ್ಯವಿರುವ ಸ್ಥಳಗಳು ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ
* ಅದರಲ್ಲಿ ನಿಮ್ಮ ಆಯ್ಕೆಯ ಸ್ಥಳವನ್ನು ಜೂಮ್ ಇನ್ ಮಾಡಿ ನೋಡಿ
* ಅಲ್ಲದೆ 360-ಡಿಗ್ರಿ ವೀಕ್ಷಣೆಯನ್ನು ಪಡೆಯಲು ಬಯಸಿದ ಬೀದಿಯ ಮೇಲೆ ಕ್ಲಿಕ್ ಮಾಡಿ ನೋಡಬಹುದು
ಇದಲ್ಲದೆ ಗೂಗಲ್ ತನ್ನ ಮ್ಯಾಪ್‌ನಲ್ಲಿ ನ್ಯಾವಿಗೇಷನ್ ಅನ್ನು ಹೆಚ್ಚು ಸುಲಭಗೊಳಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಅದರಂತೆ ಇತ್ತೀಚಿಗೆ ಇಮ್ಮರ್ಸಿವ್ ವ್ಯೂ, ನ್ಯಾವಿಗೇಟ್ ಮಾಡುವಾಗ 3D ವ್ಯೂ ಅನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ಇಮ್ಮರ್ಸಿವ್ ವ್ಯೂ ನಿಂದ ನಿಮ್ಮ ಗಮ್ಯಸ್ಥಾನದ ಸಂಪೂರ್ಣ ಮಾರ್ಗದ ವಿವರಗಳನ್ನು 3Dಯಲ್ಲಿ ನೀಡಲಿದೆ.


Click it and Unblock the Notifications








