ಪೈರೇಟ್ ವೆಬ್ಸೈಟ್ ಗಳಿಗೆ ಗೂಗಲ್ ಎಫೆಕ್ಟ್

Posted By: Varun
ಪೈರೇಟ್ ವೆಬ್ಸೈಟ್ ಗಳಿಗೆ ಗೂಗಲ್ ಎಫೆಕ್ಟ್

ಜಗತ್ತಿನಲ್ಲಿ ಯಾವುದರ ಬಗ್ಗೆ ಡೌಟ್ ಇದ್ದರೂ ನಾವು ಮೊದಲು ಕಂಪ್ಯೂಟರ್ ಮುಂದೆ ಕೂತು ಟೈಪ್ ಮಾಡುವುದು google ಅಂತ. ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಅಷ್ಟರ ಮಟ್ಟಿಗೆ ಫೇಮಸ್ ಆಗಿದ್ದು, ಸರ್ಚ್ ಎಂದರೆ ಗೂಗಲ್, ಗೂಗಲ್ ಎಂದರೆ ಸರ್ಚ್ ಅಂದರೆ ಅತಿಶಯೋಕ್ತಿ ಏನಲ್ಲ.

ಈ ರೀತಿ ಇರೋದ್ರಿಂದ ಗೂಗಲ್ ನಲ್ಲಿ ನೈತಿಕವಾದದ್ದು, ಅನೈತಿಕವಾದದ್ದು, ಕಾನೂನು ಬಾಹಿರವಾದದ್ದು, ಈ ರೀತಿ ಎಲ್ಲವನ್ನೂ ಹುಡುಕುವ ಜನ ಇದ್ದಾರೆ. ಅದರಲ್ಲೂ ಮನರಂಜನೆಗೆ ಸಂಬಂಧಿಸಿದ ವಿಷಯಗಳು ಕೃತಿಸ್ವಾಮ್ಯತೆ (copyright) ಹೊಂದಿದ್ದು ಅದನ್ನು ಕಾನೂನು ಬಾಹಿರ ಮಾಡುವ ಕೆಲಸವನ್ನು ಸಾಕಷ್ಟು ಪೈರೇಟೆಡ್ ವೆಬ್ಸೈಟ್ ಗಳು ಮಾಡುತ್ತವೆ. ಅದು ಹಾಡು ಇರಬಹುದು, ವೀಡಿಯೋ ಇರಬಹುದು ಅಥವಾ ಚಲನಚಿತ್ರವೇ ಇರಬಹುದು.

ಈ ರೀತಿಯ ವೆಬ್ಸೈಟ್ ಗಳು ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಇದ್ದು, ಬಿಟ್ಟಿಯಾಗಿ ಡೌನ್ಲೋಡ್ ಮಾಡುವ ಅವಕಾಶ ಒದಗಿಸಿ ನಿರ್ಮಾಪಕರಿಗೆ ಕೋಟ್ಯಾಂತರ ರುಪಾಯಿ ನಷ್ಟವನ್ನು ಉಂಟು ಮಾಡುತ್ತವೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಜವಾಬ್ದಾರಿಯುತ ಸರ್ಚ್ ಎಂಜಿನ್ ಆಗಿರುವ ಗೂಗಲ್ ಈ ರೀತಿ ವೆಬ್ಸೈಟ್ ಗಳಿಗೆ ಸರ್ಚ್ ಎಂಜಿನ್ ಮೂಲಕ ಕಡಿವಾಣ ಹಾಕಲು ನಿರ್ಧರಿಸಿದೆ.

ಪೈರಸಿ ವಿಶ್ವದಾದ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಹಲವಾರು ಕನ್ನಡ ಚಿತ್ರಗಳೂ ಇಂಟರ್ನೆಟ್ ನಲ್ಲಿ ಸುಲಭವಾಗಿ ಸಿಗುವಂತೆ ಮಾಡಿವೆ ಕೆಲವು ವೆಬ್ಸೈಟುಗಳು.

ಒಟ್ಟಾರೆಯಾಗಿ ಗೂಗಲ್ ತೆಗೆದುಕೊಂಡಿರುವ ಈ ನಿರ್ಧಾರವನ್ನು ಹಾಲಿವುಡ್ ಸ್ವಾಗತಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot