ಬರಲಿದೆ ಗೂಗಲ್‌ನ ರಿಯಲ್ ಟೈಮ್ ಅನುವಾದ ಅಪ್ಲಿಕೇಶನ್
ಹುಡುಕಾಟ ಎಂಜಿನ್ ದೈತ್ಯ ಗೂಗಲ್ ಭಾಷೆಯನ್ನು ಪತ್ತೆಹಚ್ಚಿ ತನ್ನ ಅನುವಾದ ಅಪ್ಲಿಕೇಶನ್‌ನಿಂದ ಅದನ್ನು ಸರಿಯಾದ ರೀತಿಯಲ್ಲಿ ಅನುವಾದಿಸುವ ಪ್ರಮುಖವಾದ ಯೋಜನೆಯ ತಯಾರಿಯಲ್ಲಿದೆ. ಇನ್ನು ಮೊಬೈಲ್‌ನಲ್ಲಿ ಗೂಗಲ್ ಅನುವಾದ ಅಪ್ಲಿಕೇಶನ್ ಬಳಸುತ್ತಿರುವ ಹೆಚ್ಚಿನ ಬಳಕೆದಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಇದನ್ನು ಸದ್ಯದಲ್ಲೇ ನಿವಾರಿಸುವ ಭರವಸೆಯನ್ನು ಕಂಪೆನಿ ಬಳಕೆದಾರರಿಗೆ ನೀಡಿದೆ. ಒಬ್ಬ ವ್ಯಕ್ತಿ ಏನು ಹೇಳಿದ್ದಾನೆ ಎಂಬುದನ್ನು ಅರಿತುಕೊಳ್ಳಲು ರೆಕಾರ್ಡಿಂಗ್ ಮಾಡುವವರೆಗೆ ಕಾದು ನಂತರವಷ್ಟೇ ವ್ಯಕ್ತಿಯ ಭಾಷೆಯನ್ನು ತಿಳಿದುಕೊಳ್ಳಬೇಕಾಗುತ್ತಿತ್ತು.
ಇದನ್ನೂ ಓದಿ: ಉತ್ತಮ ಅತ್ಯುತ್ತಮ ವಾಟ್ಸಾಪ್ ವೈಶಿಷ್ಟ್ಯಗಳಿವು
ಆದರೆ ಹೊಸ ನವೀಕರಣವು ವ್ಯಕ್ತಿಯ ಧ್ವನಿ ಮತ್ತು ಭಾಷೆಯನ್ನು ತುರ್ತಾಗಿ ಗುರುತಿಸುತ್ತದೆ ಮತ್ತು ಅವರು ಆಸೆಪಟ್ಟ ಭಾಷೆಗೆ ಇದನ್ನು ಅನುವಾದಿಸುತ್ತದೆ. ಅಪ್ಲಿಕೇಶನ್ ಚಾಲನೆಯಲ್ಲಿರುವಾಗ ಫೋನ್ ಅನ್ನು ಹಿಡಿದುಕೊಳ್ಳುವುದು ಮಾತ್ರ ಬಳಕೆದಾರರ ಕೆಲಸವಾಗಿದೆ.

ಜಪಾನ್‌ನ ಡೊಕೊಮೊ ತನ್ನ ಫೋನ್‌ನಲ್ಲಿ ಈ ಫೀಚರ್ ಅನ್ನು ಒಮ್ಮೆ ಪ್ರದರ್ಶಿಸಿತ್ತು. ಈ ಅಂಶವನ್ನು ಈ ಮುಂಚೆಯೂ ಬಳಸಲಾಗಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಸುಲಭವಾಗಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ವಿಸ್ತಾರವಾದ ಕ್ಲೌಡ್ ಅನುವಾದ ಅನುವಾದ ತಂತ್ರಜ್ಞಾನವನ್ನು ಇದು ಬಳಸುವುದರಿಂದ ಹೆಚ್ಚುವರಿ ಭದ್ರತಾ ಅಪಾಯಗಳನ್ನು ಇದು ತಂದೊಡ್ಡುವುದಿಲ್ಲ.
ಗೂಗಲ್ ಸಂವಾದಗಳನ್ನು ಪ್ರತ್ಯೇಕ ಫೈಲ್‌ಗಳಲ್ಲಿ ಬೇರ್ಪಡಿಸುತ್ತದೆ, ಇದರಿಂದಾಗಿ ಮೊಬೈಲ್ ಹ್ಯಾಕರ್‌ಗಳು ಅಥವಾ ಸೈಬರ್ ಕ್ರೈಮ್ ಅಪರಾಧಿಗಳು ಬಳಕೆದಾರರ ಯಾವುದೇ ಡೇಟಾವನ್ನು ಪಡೆದುಕೊಳ್ಳಲಾಗುವುದಿಲ್ಲ.


Click it and Unblock the Notifications








