Home
ಸುದ್ದಿಜಾಲ

ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಲೆಂಡರ್ ಕಣ್ಮರೆಯಾಗುತ್ತೆ: ಗೂಗಲ್‌ ನೀಡಿದ ಎಚ್ಚರಿಕೆ ಏನು?

ಗೂಗಲ್ (Google) ಈಗಾಗಲೇ ಸಾಕಷ್ಟು ಆಪ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ನೀಡುತ್ತಾ ಬರುತ್ತಿದೆ. ಇದರೊಂದಿಗೆ ಈಗಾಗಲೇ ನೀಡಿರುವ ಸೇವೆಗಳಿಗೆ ಕತ್ತರಿಯನ್ನೂ ಸಹ ಹಾಕಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್ ತನ್ನ ಕ್ಯಾಲೆಂಡರ್ (Google Calendar) ಅಪ್ಲಿಕೇಶನ್ ಬಳಸುವ ಆಂಡ್ರಾಯ್ಡ್ ಬಳಕೆದಾರರಿಗೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ.

ಹೌದು, ಗೂಗಲ್ ಕ್ಯಾಲೆಂಡರ್ ಆಂಡ್ರಾಯ್ಡ್, ಐಫೋನ್ ಮತ್ತು ಪಿಸಿ ಬಳಕೆದಾರರಿಗೆ ಪ್ರಮುಖ ಕ್ಯಾಲೆಂಡರ್ ಆಪ್‌ ಆಗಿದ್ದು, ನಿತ್ಯವೂ ಬಳಕೆದಾರರು ಇದನ್ನು ಬಳಕೆ ಮಾಡುತ್ತಾರೆ.ಆದರೆ ಈ ಆಪ್‌ ಬಗ್ಗೆ ಈಗ ಗೂಗಲ್‌ ಗಂಭೀರ ಎಚ್ಚರಕೆ ನೀಡಿದೆ. ಈ ಮೂಲಕ ನಿತ್ಯವೂ ಈ ಆಪ್‌ ಬಳಕೆ ಮಾಡುವವರು ಶಾಕ್‌ ಆಗುವಂತೆ ಆಗಿದೆ. ಹಾಗಿದ್ರೆ, ಏನಿದು ಎಚ್ಚರಿಕೆ?, ಗೂಗಲ್‌ ಯಾಕೆ ಈಗ ಈ ಹೇಳಿಕೆ ನೀಡಿದೆ ಅನ್ನೋದನ್ನು ತಿಳಿಸಿಕೊಟ್ಟಿದ್ದೇವೆ ಓದಿರಿ.

ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಲೆಂಡರ್ ಕಣ್ಮರೆಯಾಗುತ್ತೆ...

ಗೂಗಲ್‌ ಕ್ಯಾಲೆಂಡರ್‌ನಲ್ಲಿ ಸಮಸ್ಯೆ: ಗೂಗಲ್‌ ಕ್ಯಾಲೆಂಡರ್‌ನಲ್ಲಿ ಸಮಸ್ಯೆ ನಿರ್ಮಾಣ ಆಗಿದೆ ರಂದು ತಿಳಿದುಬಂದಿದೆ. ಅಂದರೆ, ಈವೆಂಟ್‌ಗಳನ್ನು ರಚಿಸುವುದು, ಸಭೆಗಳನ್ನು ನಿಗದಿಪಡಿಸುವುದು ಮತ್ತು ಜ್ಞಾಪನೆಗಳನ್ನು ಹೊಂದಿಸುವುದು ಸೇರಿದಂತೆ ಮುಂತಾದ ಕಾರ್ಯಗಳನ್ನು ಸರಳ ರೀತಿಯಲ್ಲಿ ನಿರ್ವಹಿಸಲು ನಿಮಗೆ ಅನುಮತಿಸುವ ಕಾರ್ಯದಲ್ಲಿ ಸಮಸ್ಯೆ ಎದುರಾಗಿದೆಯಂತೆ.

ನೀವು ಇನ್ನೂ ಹಳೆಯ ಆವೃತ್ತಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೆ, ಕ್ಯಾಲೆಂಡರ್ ಆಪ್‌ ಬೆಂಬಲ ಶೀಘ್ರದಲ್ಲೇ ನಿಲ್ಲಲಿದೆ. ಅಂದರೆ ನೀವು ಆಂಡ್ರಾಯ್ಡ್‌ 8.0 ಅಥವಾ ಹೆಚ್ಚಿನ ಆವೃತ್ತಿಯನ್ನು ಹೊಂದಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಕ್ಯಾಲೆಂಡರ್ ಆಪ್‌ನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಅನ್ನುವುದು ನಿಮ್ಮ ಗಮನಕ್ಕೆ ಇರಲಿ.

ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಲೆಂಡರ್ ಕಣ್ಮರೆಯಾಗುತ್ತೆ...

ಆದದರೆ ಮೊದಲೇ ತಿಳಿಸಿದಂತೆ ನೀವು ಆಂಡ್ರಾಯ್ಡ್‌ 7.1 ಅಥವಾ ಕೆಳಗಿನ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುತ್ತಿದ್ದರೆ ಅಥವಾ ಟ್ಯಾಬ್ಲೆಟ್‌ ಬಳಕೆ ಮಾಡುತ್ತಿದ್ದರೆ ಇನ್ಮುಂದೆ ಗೂಗಲ್‌ ಕ್ಯಾಲೆಂಡರ್ ಸೇವೆ ಸಿಗುವುದಿಲ್ಲ. ಜೊತೆಗೆ ವರದಿಗಳ ಪ್ರಕಾರ, ಹಳೆಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಳ ಅಡಿಯಲ್ಲಿ ಗೂಗಲ್ ಕ್ಯಾಲೆಂಡರ್ ಬೆಂಬಲವನ್ನು ಕೈಬಿಡಲು ಮುಖ್ಯ ಕಾರಣ ಏನೆಂದರೆ ಭದ್ರತಾ ಕಾಳಜಿಯಾಗಿದೆ.

ಆಂಡ್ರಾಯ್ಡ್‌ಗಳ ಹಳೆಯ ಆವೃತ್ತಿಗಳು ಹೊಸ ಆವೃತ್ತಿಗಳಂತೆ ನಿಯಮಿತ ನವೀಕರಣಗಳನ್ನು ಪಡೆಯುವುದಿಲ್ಲ. ವಿಶೇಷವಾಗಿ ಭದ್ರತಾ ನವೀಕರಣಗಳನ್ನು ಇವು ಪಡೆಯುತ್ತಿಲ್ಲ. ಇದರಿಂದಾಗಿ ಹಳೆಯ ಆವೃತ್ತಿಗಳು ಹ್ಯಾಕಿಂಗ್ ಮತ್ತು ಡೇಟಾ ನಷ್ಟದಂತಹ ಆನ್‌ಲೈನ್ ದಾಳಿಗಳಿಗೆ ಹೆಚ್ಚು ಗುರಿಯಾಗುತ್ತವೆ. ಈ ಮೂಲಕ ನಿಮ್ಮ ಖಾಸಗಿ ಡೇಟಾಗೆ ಕುತ್ತು ಬರುವುದಲ್ಲದೇ ಗೂಗಲ್‌ಗೂ ಸಹ ಇದು ತಲೆನೋವು ಉಂಟು ಮಾಡಲಿದೆ.

ಆದರೆ, ಹೊಸ ಆಂಡ್ರಾಯ್ಡ್ ಆವೃತ್ತಿಗಳು ಈ ರೀತಿಯ ಸಮಸ್ಯೆಗಳನ್ನು ಬಳಕೆದಾರರಿಗೆ ನೀಡುವುದಿಲ್ಲ. ಅದರಲ್ಲೂ ಕಾಲಕಾಲಕ್ಕೆ ಓಎಸ್‌ ಅಪ್‌ಡೇಟ್‌ಗಳು ಮತ್ತು ಭದ್ರತಾ ನವೀಕರಣಗಳನ್ನು ಇವು ಪಡೆದುಕೊಳ್ಳುತ್ತವೆ. ಅದರಲ್ಲೂ ವರ್ಧಿತ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಮುಖ್ಯವಾಗಿ ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದಂತಹ ಸಮಸ್ಯೆಗಳು ಇಲ್ಲಿ ಕಾಣಿಸುವುದೇ ಇಲ್ಲ. ಪರಿಣಾಮ ನೀವು ಹಳೆಯ ಓಎಸ್ ಅನ್ನು ಬಳಸುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ ಗೂಗಲ್‌ ಕ್ಯಾಲೆಂಡರ್ ಆಪ್‌ಗಾಗಿ ಆಟೋ -ಅಪ್‌ಡೇಟ್ ಫೀಚರ್ಸ್‌ ಅನ್ನು ಆಫ್ ಮಾಡಿ.

ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಲೆಂಡರ್ ಕಣ್ಮರೆಯಾಗುತ್ತೆ...

ಇದನ್ನು ಮಾಡುವುದರಿಂದ ನಿಮ್ಮ ಅಸ್ತಿತ್ವದಲ್ಲಿರುವ ಗೂಗಲ್‌ ಕ್ಯಾಲೆಂಡರ್ ಆಪ್‌ ನವೀಕರಣವನ್ನು ಪಡೆದರೂ ಅದನ್ನು ನವೀಕರಿಸಲಾಗುವುದಿಲ್ಲ. ನೀವು ಅದನ್ನು ಬಳಸುವುದನ್ನು ಮುಂದುವರಿಸಬಹುದು. ಆದರೆ, ಈ ವಿಧಾನವು ದೊಡ್ಡ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತಿರಲಿ. ಎರಡನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಳೆಯ ಓಎಸ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಿ.

Best Mobiles in India

English summary
If you are using a smartphone with an older version of the Android operating system, the Calendar app support will stop soon. As a result, Google suggested updating the OS.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+