ಗೂಗಲ್ ಟ್ರಾನ್ಸ್‌ಲೆಟ್‌ನಲ್ಲಿ ಹೊಸ ಫೀಚರ್ಸ ಪರಿಚಯಿಸಿದ ಗೂಗಲ್!
ನಿಮಗೆ ಯಾವುದೇ ವಿಚಾರ ಬಗ್ಗೆ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೆ ಗೂಗಲ್ ಸರ್ಚ್ ಇಂಜಿನ್. ಅಷ್ಟರ ಮಟ್ಟಿಗೆ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಅಷ್ಟೇ ಅಲ್ಲ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್ ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ.

ಹೌದು, ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಗೂಗಲ್ ಟ್ರಾನ್ಸ್‌ಲೆಟ್‌ನಲ್ಲಿ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಗೂಗಲ್ ಟ್ರಾನ್ಸ್‌ಲೆಟ್ ಅಪ್ಲಿಕೇಶನ್ ಟ್ರಾನ್ಸ್‌ಸ್ಕ್ರಿಪ್ಟ್ ಎಂಬ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಒಂದು ಭಾಷಣವನ್ನು ಮತ್ತೊಂದು ಭಾಷೆಗೆ ನೇರ ಭಾಷಾಂತರಿಸುತ್ತದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ.

ಅಲ್ಲದೆ ಈ ಹೊಸ ಫೀಚರ್ಸ್ ನಿಮ್ಮ ಪ್ರಬಂಧ ಅಥವಾ ಭಾಷಣ ಅಥವಾ ಸ್ಪೀಚ್ ಅನ್ನು 8 ಭಾಷೆಗಳಿಗೆ ಬೆಂಬಲಸಿಲಿದೆ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಅಟ್ರಾನ್ಸ್‌ಲೆಟ್ ಅಪ್ಲಿಕೇಶನ್ ಇತ್ತೀಚಿನ ಆವೃತ್ತಿಯನ್ನು ನೀವು ಹೊಂದಿದ್ದರೆ ಟ್ರಾನ್ಸ್‌ಸ್ಕ್ರಿಪ್ಟ್ ಫೀಚರ್ಸ್ ನಿಮಗೆ ಲಭ್ಯವಾಗಲಿದೆ. ಇದನ್ನ ಗೂಗಲ್ ಪಿಕ್ಸೆಲ್ 4 ನೊಂದಿಗೆ ರೆಕಾರ್ಡರ್ ಅಪ್ಲಿಕೇಶನ್ ಜೊತೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಈ ಟ್ರಾನ್ಸ್‌ಸ್ಕ್ರಿಪ್ಟ್ ಫೀಚರ್ಸ್ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ಇನ್ನು ಈ ಫೀಚರ್ಸ್ ನ ವಿಶೇಷತೆಯ ಬಗ್ಗೆ ಗೂಗಲ್ ತನ್ನ ಅಧಿಕೃತ ಟ್ವಿಟ್ಟರ್ ಬ್ಲಾಗ್‌ನಲ್ಲಿ ವಿವರಿಸಿದೆ. ಇದರ ಪ್ರಕಾರ ಯಾವುದೇ ಒಂದು ನಿರ್ದಿಷ್ಟ ಭಾಷೆಯ ಭಾಷಣವನ್ನ ಕೇಳುವುದು ಮತ್ತು ನಂತರ ಅದನ್ನು ಬೇರೆ ಬೇರೆ ಭಾಷೆಯಲ್ಲಿ ಅನುವಾದ ಮಾಡಿಕೊಡಲಿದೆ. ಅಲ್ಲದೆ ಗೂಗಲ್ ಬೆಂಬಲಿತ ಭಾಷೆಗಳಲ್ಲಿ ಇಂಗ್ಲಿಷ್, ಜರ್ಮನ್, ಹಿಂದಿ, ಫ್ರೆಂಚ್, ಪೋರ್ಚುಗೀಸ್, ಸ್ಪ್ಯಾನಿಷ್, ಥಾಯ್ ಮತ್ತು ರಷ್ಯನ್ ಭಾಷೆಗಳನ್ನು ಬೆಂಬಲಿಸಲಿದೆ.

ಪ್ರತಿಲೇಖನ ಫೀಚರ್ಸ್‌ಅನ್ನು ಬಳಸಲು, ನೀವು ಗೂಗಲ್ ಅನುವಾದದ ಇತ್ತೀಚಿನ ಆವೃತ್ತಿಯನ್ನು ಬಳಸಬೇಕಾಗಿದೆ. ಅಲ್ಲದೆ ‘ಕ್ಯಾಮೆರಾ' ಮತ್ತು ‘ಸಂಭಾಷಣೆ' ಆಯ್ಕೆಗಳೊಂದಿಗೆ ‘ಲಿಪ್ಯಂತರ' ಎಂಬ ಆಯ್ಕೆಯನ್ನು ನೀಡುತ್ತದೆ. ಲಿಪ್ಯಂತರವನ್ನು ಟ್ಯಾಪ್ ಮಾಡಿದ ನಂತರ ನೀವು ಡ್ರಾಪ್‌ಡೌನ್‌ನಿಂದ ಮೂಲ ಮತ್ತು ಗುರಿ ಭಾಷೆಯನ್ನು ಆರಿಸಬೇಕಾಗುತ್ತದೆ. ಅಲ್ಲದೆ ಬ್ಲಾಗ್ ಪ್ರಕಾರ, ಮೈಕ್ ಐಕಾನ್ ಟ್ಯಾಪ್ ಮಾಡುವ ಮೂಲಕ ನೀವು ಪ್ರತಿಲೇಖನವನ್ನು ಸ್ಟಾಪ್ ಮಾಡಬಹುದು. ಅಲ್ಲದೆ ಮೂಲ ಪ್ರತಿಲೇಖನವನ್ನು ನೋಡಲು, ಡಾರ್ಕ್ ಥೀಮ್ ಆಯ್ಕೆ ಮಾಡಲು ಮತ್ತು ಸೆಟ್ಟಿಂಗ್‌ಗಳ ಮೆನುಗೆ ಹೋಗುವ ಮೂಲಕ ಪಠ್ಯ ಗಾತ್ರವನ್ನು ಬದಲಾಯಿಸಲು ಅನುಮತಿಸುತ್ತದೆ.

ಇನ್ನು ಈಗಾಗ್ಲೆ ಗೂಗಲ್ ತನ್ನ ರೆಕಾರ್ಡರ್ ಆಪ್ ಅನ್ನು ಗೂಗಲ್ ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 xlಗಾಗಿ ಬಿಡುಗಡೆ ಮಾಡಿತ್ತು. ನಂತರದ ದಿನಗಳಲ್ಲಿ ಇದನ್ನು ಹಳೆಯ ಪಿಕ್ಸೆಲ್ ಫೋನ್‌ಗಳಲ್ಲಿಯೂ ಲಭ್ಯವಾಗಿತ್ತು. ಈಗ, ಆಂಡ್ರಾಯ್ಡ್ ಡಿವೈಸ್‌ಗೆ ಈ ಫೀಚರ್ಸ ಅನ್ನ ಅಧಿಕೃತವಾಗಿ ‘ಲಿಪ್ಯಂತರ' ಆಯ್ಕೆಯ ರೂಪದಲ್ಲಿ ತರಲಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ಡಿವೈಸ್‌ಗಳಲ್ಲೂ ಲಭ್ಯವಾಗಲಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿರುವಂತೆ ಎಲ್ಲಾ ಡಿವೈಸ್‌ಗಳಲ್ಲೂ ಲಭ್ಯವಾಗಲಿದೆ.


Click it and Unblock the Notifications








