Home
ಸುದ್ದಿಜಾಲ

ಅಪತ್ಕಾಲದಲ್ಲಿ ಕ್ಷಣಾರ್ಧದಲ್ಲಿ ಲೈವ್ ವಿಡಿಯೋ: ಗೂಗಲ್‌ನಿಂದ ಹೊಸ ವೈಶಿಷ್ಟ್ಯ!

ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಲು ಹೊಸದಾಗಿ 'Emergency Live Video' ಎಂಬ ವೈಶಿಷ್ಟ್ಯವನ್ನು ಪ್ರಕಟಿಸಿದೆ. ತುರ್ತು ಸಂದರ್ಭಗಳಲ್ಲಿ ನೈಜ ಪರಿಸ್ಥಿತಿಯನ್ನು ನೇರವಾಗಿ ಎಮರ್ಜೆನ್ಸಿ ತಂಡಕ್ಕೆ ತೋರಿಸುವ ಈ ವೈಶಿಷ್ಟ್ಯವು, ಗಾಯಾಳುವಿಗೆ ನೆರವು ತಲುಪುವ ವೇಗವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಅತಿ ಜಟಿಲ ಅಥವಾ ವಿವರಣೆ ಕಷ್ಟವಾಗುವ ಸಂದರ್ಭಗಳಲ್ಲಿ ಈ ಫೀಚರ್ ಬಳಕೆದಾರರಿಗೆ ದೊಡ್ಡ ಸಹಾಯವಾಗಲಿದೆ. ಹಾಗಾದರೆ, ಹೊಸ ಏನಿದು 'Emergency Live Video' ಫೀಚರ್?, ತುರ್ತು ಪರಿಸ್ಥಿತಿಯಲ್ಲಿ ಹೇಗೆ ಸಹಾಯಕ ಎಂಬುದನ್ನು ನೋಡೋಣ ಬನ್ನಿ.

ತುರ್ತು ಸಂದರ್ಭಗಳಲ್ಲಿ ನೇರ ವಿಡಿಯೋ ಹಂಚುವ ವ್ಯವಸ್ಥೆ
ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ, ಗೂಗಲ್ ತನ್ನ Emergency Live Video ವೈಶಿಷ್ಟ್ಯವನ್ನು ಯಾವುದೇ ಸೆಟಪ್ ಅವಶ್ಯಕತೆಗಳಿಲ್ಲದೆ ನಿರ್ಮಿಸಲಾಗಿದೆ ಎಂದು ಹೇಳಿದೆ. ಆಂಡ್ರಾಯ್ಡ್ ಬಳಕೆದಾರರು Emergency Live Video ವೈಶಿಷ್ಟ್ಯದ ಸಹಾಯದಿಂದ ಸ್ಕ್ರೀನ್ ಮೇಲೆ ಕಾಣುವ ಪ್ರಾಂಪ್ಟ್‌ನ್ನು ಒಪ್ಪಿಕೊಂಡ ತಕ್ಷಣ ಫೋನ್‌ನ ಕ್ಯಾಮೆರಾ ನೇರ ಪ್ರಸಾರ ಪ್ರಾರಂಭಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ, ನಿಖರವಾಗಿ ಏನಾಗುತ್ತಿದೆ ಎಂಬುದನ್ನು ವಿವರಿಸಲು ಕಷ್ಟವಾಗಬಹುದು. ಅದಕ್ಕಾಗಿಯೇ ನಾವು ಆಂಡ್ರಾಯ್ಡ್ Emergency Live Video ಅನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.

ELS ತಂತ್ರಜ್ಞಾನದಿಂದ ನಿಖರವಾದ ಸ್ಥಳ ಮಾಹಿತಿ
Emergency Live Video ವೈಶಿಷ್ಟ್ಯವು Android Emergency Location Service (ELS) ಮೇಲೆ ಆಧಾರಿತವಾಗಿದ್ದು, ಫೋನ್‌ನ GPS, Wi-Fi, ಸೆಲ್‌ ಟವರ್‌ಗಳು ಮತ್ತು ಇತರ ಸೆನ್ಸರ್‌ಗಳಿಂದ ವೇಗವಾಗಿ ಮತ್ತು ನಿಖರವಾಗಿ ಸ್ಥಳ ಮಾಹಿತಿ ಸಂಗ್ರಹಿಸುತ್ತದೆ. ELS ಈಗಾಗಲೇ ಅನೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸಕ್ರಿಯವಾಗಿದ್ದು, Google Play Services ಇರುವ Android 8 ಮತ್ತು ಮೇಲಿನ ಆವೃತ್ತಿಯ ಸಾಧನಗಳಲ್ಲಿ ಈ ಹೊಸ ಫೀಚರ್ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ತುರ್ತು ಕರೆ ಆರಂಭವಾದ ಕ್ಷಣದಲ್ಲೇ ವ್ಯವಸ್ಥೆ ಸ್ಥಳ ಮಾಹಿತಿಯನ್ನು ಹುಡುಕಲು ಪ್ರಾರಂಭಿಸುತ್ತದೆ, ಇದರಿಂದ ಎಮರ್ಜೆನ್ಸಿ ತಂಡಗಳು ಸಹಾಯ ಮಾಡಲು ಸಾಧ್ಯವಾಗುತ್ತದೆ.

ಅಪತ್ಕಾಲದಲ್ಲಿ ಕ್ಷಣಾರ್ಧದಲ್ಲಿ ಲೈವ್ ವಿಡಿಯೋ: ಗೂಗಲ್‌ನಿಂದ ಹೊಸ ವೈಶಿಷ್ಟ್ಯ!

ಬೇರೆ ಅಪ್ಲಿಕೇಶನ್ ಬಳಸುವ ಅವಶ್ಯಕತೆ ಇಲ್ಲ.
Emergency Live Video ವೈಶಿಷ್ಟ್ಯಕ್ಕೆ ಯಾವುದೇ ಬೇರೆ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಅವಶ್ಯಕತೆ ಇಲ್ಲ. ಬಳಕೆದಾರರು ತುರ್ತು ಸೇವೆಗೆ ಕರೆ ಮಾಡಿದಾಗ ಅಥವಾ ಟೆಕ್ಸ್ಟ್ ಕಳುಹಿಸಿದಾಗ, ಪರಿಸ್ಥಿತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಅಗತ್ಯವಿದೆ ಎಂದು ಡಿಸ್ಪ್ಯಾಚರ್ ನಿರ್ಧರಿಸಿದರೆ ಅವರು ಬಳಕೆದಾರರ ಫೋನ್‌ಗೆ ಲೈವ್ ವಿಡಿಯೋ ವಿನಂತಿ ಕಳುಹಿಸಬಹುದು.ಸ್ಕ್ರೀನ್ ಮೇಲೆ ಕಾಣುವ ಪ್ರಾಂಪ್ಟ್‌ನ್ನು ಒಪ್ಪಿಕೊಂಡ ತಕ್ಷಣ ಫೋನ್‌ನ ಕ್ಯಾಮೆರಾ ನೇರ ಪ್ರಸಾರ ಪ್ರಾರಂಭಿಸುತ್ತದೆ. ಗೂಗಲ್‌ ಪ್ರಕಾರ, ಈ ವಿಡಿಯೋ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಆಗಿರುವುದರಿಂದ ಗೌಪ್ಯತೆ ಮತ್ತು ಸುರಕ್ಷತೆ ಎರಡನ್ನೂ ಸಮಾನವಾಗಿ ಕಾಪಾಡಲಾಗಿದೆ. ಬಳಕೆದಾರರು ಯಾವಾಗ ಬೇಕಾದರೂ ಸ್ಟ್ರೀಮ್ ನಿಲ್ಲಿಸುವ ಹಕ್ಕನ್ನೂ ಹೊಂದಿದ್ದಾರೆ. ಈ ಈ ವೈಶಿಷ್ಟ್ಯವು ಈಗಾಗಲೇ ಇರುವ Car Crash Detection, Fall Detection ಮತ್ತು Satellite SOS ಮುಂತಾದ ಸುರಕ್ಷತಾ ಉಪಕರಣಗಳ ಜತೆಗೆ ಸೇರಿ ಆಂಡ್ರಾಯ್ಡ್ ಪರಿಸರವನ್ನು ಇನ್ನಷ್ಟು ಭದ್ರಗೊಳಿಸುತ್ತದೆ.

ಯಾವ ಪ್ರದೇಶಗಳಲ್ಲಿ ಲಭ್ಯ?
Google ಈ ವೈಶಿಷ್ಟ್ಯವನ್ನು ಪ್ರಾರಂಭಿಕವಾಗಿ ಅಮೇರಿಕಾದಲ್ಲಿ ಮತ್ತು ಜರ್ಮನಿ, ಮೆಕ್ಸಿಕೋ ದೇಶಗಳ ಕೆಲವು ಪ್ರದೇಶಗಳಲ್ಲಿ ಪರಿಚಯಿಸಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ರಾಷ್ಟ್ರಗಳಿಗೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸುತ್ತವೆ.

ತುರ್ತು ಸಂದರ್ಭಗಳಲ್ಲಿ ನಿಖರವಾಗಿ ಏನಾಗಿದೆ ಎಂಬುದನ್ನು ಶಬ್ದಗಳಲ್ಲಿ ವಿವರಿಸುವುದು ಕೆಲವೊಮ್ಮೆ ಅಸಾಧ್ಯವಾಗುತ್ತದೆ. ಉದಾಹರಣೆಗೆ, ಅಪಘಾತ, ಬೆಂಕಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಅಪಾಯಕಾರಿ ಪರಿಸರಗಳನ್ನು ವಿವರಿಸಲು ಸಮಯ ವ್ಯರ್ಥವಾಗಬಹುದು.ಈ ಸಂದರ್ಭದಲ್ಲಿ ಲೈವ್ ವಿಡಿಯೋ ಮೂಲಕ ಘಟನಾಸ್ಥಳದ ನೈಜ ಸ್ಥಿತಿ ಡಿಸ್ಪ್ಯಾಚರ್‌ಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ಅವರು ತಕ್ಷಣ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಸೂಕ್ತ ತಂಡಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಅಂತಿಮವಾಗಿ, ನೆರವು ತಲುಪುವ ಸಮಯ ಕಡಿಮೆಯಾಗುವುದರೊಂದಿಗೆ ಬದುಕುಳಿಯುವ ಸಾಧ್ಯತೆಯೂ ಹೆಚ್ಚುತ್ತದೆ. ಹಾಗಾಗಿ, ಇದೊಂದು ಅತ್ಯುತ್ತಮ ಫೀಚರ್ ಎಂದು ಹೇಳಬಹುದು. ನೈಜ ಬಳಕೆಗೆ ಬಂದ ನಂತರ ಈ ಕುರಿತು ನಮಗೆ ಮತ್ತಷ್ಟು ಮಾಹಿತಿಗಳು ದೊರೆಯುತ್ತವೆ.

Best Mobiles in India

English summary
Google says its new Emergency Live Video feature requires no setup at all. The moment Android users accept the on-screen prompt, their phone’s camera begins broadcasting live to emergency services.“In critical situations, describing what’s happening can be extremely difficult. That’s why we’re introducing Android Emergency Live Video,” Google explained.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+