ಭಾರತದಲ್ಲಿ ಹೊಸದಾಗಿ Google AI Plus ಪ್ಲ್ಯಾನ್ ಲಾಂಚ್: ಬೆಚ್ಚಿಬಿತ್ತು ChatGPT!
ಗೂಗಲ್ ಭಾರತದಲ್ಲಿ ತನ್ನ ಹೊಸ AI ಚಂದಾದಾರಿಕೆ ಪ್ಲಾನ್ Google AI Plus ಅನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈಗಾಗಲೇ ಜೆಮಿನಿ ಅಪ್ಲಿಕೇಶನ್‌ನಲ್ಲಿ ಕಂಪನಿಯು Google AI Pro ಮತ್ತು Google AI Ultra ಎಂಬ ಎರಡು ಪ್ರೀಮಿಯಂ ಪ್ಲಾನ್ಗಳನ್ನು ನೀಡುತ್ತಿತ್ತು. ಹೊಸ AI Plus ಪ್ಲಾನ್ ಕಡಿಮೆ ದರದಲ್ಲಿ ಹೆಚ್ಚು ಸಾಮರ್ಥ್ಯ ನೀಡುವ ಭರವಸೆಯೊಂದಿಗೆ ಬಂದಿದೆ. ಮತ್ತು ಹತ್ತು ಹಲವು ವೈಶಿಷ್ಟ್ಯಗಳ ಜೊತೆಗೆ, ಆರಂಭಿಕ ಆಫರ್ ಬೆಲೆಯನ್ನು ಸಹ ಹೊಂದಿದೆ. ಹಾಗಾದರೆ, ಗೂಗಲ್ ಇಂದು ಪರಿಚಯಿಸಿರುವ ಹೊಸ Google AI Plus ಚಂದಾದಾರಿಕೆ ಹೇಗಿದೆ?, ಮತ್ತು ಏನೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ
ಕೈಗೆಟುಕುವ ದರದಲ್ಲಿ AI Plus!
Google ಹೊಸದಾಗಿ ಪರಿಚಯಿಸಿರುವ GoogleAI Plus ಪ್ಲಾನ್ ಮೊದಲ ಆರು ತಿಂಗಳು ₹199 ಪ್ರತಿ ತಿಂಗಳು, ನಂತರ ₹399 ಪ್ರತಿ ತಿಂಗಳು ಶುಲ್ಕಕ್ಕೆ ಲಭ್ಯವಾಗಲಿದೆ. AI ಸೇವೆಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಈ ಪ್ಲಾನ್ ತನ್ನ ದರಶ್ರೇಣಿಯಲ್ಲಿ ಅತ್ಯಂತ ಸ್ಪರ್ಧಾತ್ಮಕವಾಗಿದೆ.
Gemini 3 Proಕ್ಕೆ ಹೆಚ್ಚಿನ ಪ್ರವೇಶ
ಈ Google AI Plus ಹೊಸ ಪ್ಲಾನ್‌ನ ಪ್ರಮುಖ ಆಕರ್ಷಣೆ ಗೂಗಲ್‌ನ ಶಕ್ತಿಶಾಲಿ Gemini 3 Pro ಮಾದರಿಯ ಪ್ರವೇಶವಾಗಿದೆ. ಈ AI ಮಾದರಿಯು ಗಂಭೀರ ಸಂಶೋಧನೆ, ಉನ್ನತ ಗುಣಮಟ್ಟದ ವಿಶ್ಲೇಷಣೆ ಮತ್ತು ಜಟಿಲ ವಿಷಯ ರಚನೆಗೆ ಸಹಾಯಕವಾಗಲಿದೆ. ಬಳಕೆದಾರರು Deep Research ಸೇರಿದಂತೆ ಪ್ರೀಮಿಯಂ AI ವೈಶಿಷ್ಟ್ಯಗಳನ್ನು ಹೆಚ್ಚಿದ ಮಿತಿಯಲ್ಲಿ ಬಳಸಬಲ್ಲರು. ಇಷ್ಟೇ ಅಲ್ಲದೆ,
Nano Banana Pro ಮೂಲಕ ಚಿತ್ರ ರಚನೆ ಮತ್ತು ಎಡಿಟಿಂಗ್
Google AI Plus ಬಳಕೆದಾರರಿಗೆ Nano Banana Pro ಉಪಕರಣವೂ ಲಭ್ಯವಾಗುತ್ತದೆ. Gemini 3 Pro ಶಕ್ತಿಯನ್ನು ಬಳಸುವ ಈ ಟೂಲ್ ಪಠ್ಯವನ್ನು ಚಿತ್ರವಾಗಿಸಲು, ಚಿತ್ರಗಳನ್ನು ಸುಧಾರಿಸಲು ಮತ್ತು AI-ಆಧಾರಿತ ಕ್ರಿಯೇಟಿವ್ ಎಡಿಟಿಂಗ್ ಮಾಡಲು ಸಹಾಯಕವಾಗಿದೆ
ವೀಡಿಯೋ ಮತ್ತು ಕಂಟೆಂಟ್ ಜನರೇಶನ್‌ಗಾಗಿ 200 AI ಕ್ರೆಡಿಟ್ಗಳು
Google AI Plus ಚಂದಾದಾರಿಕೆಗೆ Flow ಮತ್ತು Whisk ಆಪ್ಗಳಲ್ಲಿ ಪ್ರತಿ ತಿಂಗಳು 200 AI ಕ್ರೆಡಿಟ್ಗಳು ಲಭ್ಯವಾಗಲಿದೆ. ಈ ಆಪ್ಗಳು Veo 3.1 Fast ಮಾದರಿಯನ್ನು ಬಳಸುತ್ತವೆ, ಇದು ಚಿಕ್ಕ ವೀಡಿಯೋಗಳು, ರೀಲ್ಸ್, ಸ್ಕ್ರಿಪ್ಟ್‌ಗಳು ಮತ್ತು ದೃಶ್ಯ ಕಂಟೆಂಟ್ ನಿರ್ಮಾಣವನ್ನು ಬಹಳ ವೇಗವಾಗಿ ಮಾಡುತ್ತದೆ.
NotebookLM ಗೆ ಹೆಚ್ಚುವರಿ AI ವೈಶಿಷ್ಟ್ಯಗಳು
AI Plus ಚಂದಾದಾರರು NotebookLM ನಲ್ಲಿ Audio Overviews, ಸಂಶೋಧನಾ ಮತ್ತು ಬರವಣಿಗೆಗೆ ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಉಚಿತ ಬಳಕೆದಾರರಿಗೆ ಇವು ಸೀಮಿತವಾಗಿರುವುದರಿಂದ, ಈ ಪ್ಲಾನ್ ಸಂಶೋಧಕರು ಮತ್ತು ಬರಹಗಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Google Docs, Gmail ಮತ್ತು Vids ನಲ್ಲಿ ನೇರ AI ನೆರವು
Gemini AI ಅನ್ನು Google Docs, Gmail ಮತ್ತು Google Vidsಗಳಲ್ಲಿ ನೇರವಾಗಿ ಬಳಸಬಹುದು. ಇದರಿಂದ ಇಮೇಲ್ ಬರವಣಿಗೆ, ಡಾಕ್ಯುಮೆಂಟ್ ಸಾರಾಂಶ, ಸ್ಕ್ರಿಪ್ಟ್ ರಚನೆ ಮತ್ತು ಹಲವಾರು ಕೆಲಸಗಳು ಕ್ಷಣಾರ್ಧದಲ್ಲಿ ಪೂರ್ಣಗೊಳ್ಳುತ್ತವೆ.
200GB ಕ್ಲೌಡ್ ಸ್ಟೋರೇಜ್
AI Plus ಪ್ಲಾನ್‌ನೊಂದಿಗೆ Google Photos, Drive ಮತ್ತು Gmailಗಾಗಿ 200GB ಕ್ಲೌಡ್ ಸ್ಟೋರೇಜ್ ಲಭ್ಯ. ಉಚಿತ ಬಳಕೆದಾರರಿಗೆ ಕೇವಲ 15GB ಮಾತ್ರ ಇರುವುದರಿಂದ, ಹೆಚ್ಚು ಡೇಟಾ ಸಂಗ್ರಹಿಸುವವರಿಗೆ ಇದು ಉಪಯುಕ್ತ.
ಉಚಿತ ಪ್ಲಾನ್ ಮತ್ತು ಪ್ರೀಮಿಯಂ ಪ್ಲಾನ್‌ಗಳ ಹೋಲಿಕೆ
ಉಚಿತ AI ಪ್ಲಾನ್‌ನೊಂದಿಗೆ ಬಳಕೆದಾರರು ಸೀಮಿತ Gemini, ಕಡಿಮೆ AI usage limits ಮತ್ತು 100 AI credits ಮಾತ್ರ ಪಡೆಯುತ್ತಾರೆ. AI Plus ನಲ್ಲಿ ಉತ್ತಮ ಮಾದರಿಗಳು, ದುಪ್ಪಟ್ಟು ಕ್ರೆಡಿಟ್ಗಳು ಮತ್ತು ಹೆಚ್ಚುವರಿ ಸ್ಟೋರೇಜ್ ದೊರೆಯುತ್ತದೆ. ಜೊತೆಗೆ AI Pro ಮತ್ತು AI Ultra ಪ್ಲಾನ್ಗಳಿಗಿಂತ ಕಡಿಮೆ ದರವನ್ನು ಹೊಂದಿದೆ. ಹೋಲಿಕೆಗಾಗಿ ನೋಡುವುದಾದರೆ,
AI Pro: ₹1,950 / ತಿಂಗಳು (1,000 AI ಕ್ರೆಡಿಟ್ಗಳು, 2TB ಸ್ಟೋರೇಜ್)
AI Ultra: ₹24,500 / ತಿಂಗಳು (25,000 ಕ್ರೆಡಿಟ್ಗಳು, 30TB ಸ್ಟೋರೇಜ್)
ಈ ಪ್ಲಾನ್ಗಳು ಡೆವಲಪರ್‌ಗಳು ಮತ್ತು ಹೈ-ಸೇಟ್ ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದ್ದರೂ, ಸಾಮಾನ್ಯ ಬಳಕೆದಾರರಿಗೆ AI Plus ಸಾಕಷ್ಟು ಸಮರ್ಥವಾಗಿದೆ.
ChatGPT Go ಗೆ ನೇರ ಸ್ಪರ್ಧಿ
Google AI Plus, ಭಾರತದಲ್ಲಿ ಈಗಾಗಲೇ ಉಚಿತವಾಗಿ ಲಭ್ಯವಿರುವ ChatGPT Go ಪ್ಲಾನ್‌ಗೆ ಸ್ಪರ್ಧಿಯಾಗಿರಲಿದೆ. ChatGPT Go GPT-5 ಆಧಾರಿತ ವಿಸ್ತರಿತ ಪ್ರವೇಶ ನೀಡುತ್ತದಾದರೂ, ಗೂಗಲ್ ನೀಡುವಂತಹ ಕ್ಲೌಡ್ ಸ್ಟೋರೇಜ್ ಅದರಲ್ಲಿಲ್ಲ.Google AI Plus ಭಾರತದಲ್ಲಿ AI ಬಳಕೆಯನ್ನು ಇನ್ನಷ್ಟು ಸುಲಭ ಮತ್ತು ಅಗ್ಗದ ದರದಲ್ಲಿ ಲಭ್ಯವಾಗುವಂತೆ ಮಾಡಿದೆ. Gemini 3 Pro ಪ್ರವೇಶ, ಹೆಚ್ಚಿದ AI ಕ್ರೆಡಿಟ್ಗಳು, NotebookLM ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು 200GB ಸ್ಟೋರೇಜ್ ಸಾಮಾನ್ಯ ಬಳಕೆದಾರರಿಂದ ಕಂಟೆಂಟ್ ಕ್ರಿಯೇಟರ್‌ಗಳವರೆಗೆ ಎಲ್ಲರಿಗೂ ಆಕರ್ಷಕ ಆಯ್ಕೆಯಾಗಬಹುದು.


Click it and Unblock the Notifications








