ಗೂಗಲ್‌ನಿಂದ ಕಿಟ್‌ಕ್ಯಾಟ್ ಅಪ್‌ಡೇಟ್ ಗೂಗಲ್ ನೆಕ್ಸಸ್‌ಗೆ

Written By:

ಗೂಗಲ್ ತನ್ನ ನೆಕ್ಸಸ್ ಡಿವೈಸ್‌ಗಳಿಗೆ ಆಂಡ್ರಾಯ್ಡ್ 4.4.3 ಅನ್ನು ಅಪ್‌ಡೇಟ್ ಮಾಡುವುದಾಗಿ ಈ ಮುಂಚೆಯೇ ತಿಳಿಸಿತ್ತು. ನೆಕ್ಸಸ್, ಮೋಟೋರೋಲಾ ಮತ್ತು ಗೂಗಲ್ ಪ್ಲೇ ಸ್ಮಾರ್ಟ್‌ಫೋನ್‌ಗಳು ಈ ಹಿಂದಯೇ ಈ ನವೀಕರಣವನ್ನು ಪಡೆದುಕೊಂಡಿತ್ತು. ಆದರೆ ಗೂಗಲ್ ತನ್ನ ಹೊಸ ಅನ್ವೇಷಣೆಯನ್ನು ಇನ್ನೂ ಮುಂದುವರಿಸಿದ್ದು ತನ್ನ ಡಿವೈಸ್‌ಗಳಿಗೆ ಹೊಸ ನವೀಕರಣಗಳನ್ನು ಅಪ್‌ಡೇಟ್ ಮಾಡುವ ಯೋಜನೆಯಲ್ಲಿದೆ.

ನೆಕ್ಸಸ್ 4, ನೆಕ್ಸಸ್ 5, ನೆಕ್ಸಸ್ 7 ಮತ್ತು ನೆಕ್ಸಸ್ 10 ನಂತಹ ಆಂಡ್ರಾಯ್ಡ್ ಮಾಡೆಲ್‌ಗಳಿಗೆ ಆಂಡ್ರಾಯ್ಡ್ 4.4.4 ನವೀಕರಣವನ್ನು ಅಪ್‌ಡೇಟ್ ಮಾಡುವ ಯೋಜನೆಯನ್ನು ಗೂಗಲದ ಹಮ್ಮಿಕೊಂಡಿದೆ. ಇದು ಇನ್ನೊಂದು ಭದ್ರತಾ ನವೀಕರಣವಾಗಿದ್ದು ಈ ಹಿಂದಿನ ನವೀಕರಣದಂತೆ ವೈಶಿಷ್ಟ್ಯಗಳನ್ನು ಹೊಂದಿ ಆಕರ್ಷಣೀಯವಾಗಿದೆ.

ನೆಕ್ಸಸ್ ಡಿವೈಸ್‌ಗಳಿಗೆ ಗೂಗಲ್ ಬಂಪರ್ ಕೊಡುಗೆ

ಇಲ್ಲಿ ನಾವು ನಮೂದಿಸಿರುವ ಸ್ಮಾರ್ಟ್‌ಫೋನ್‌ಗಳು ಈ ಅಪ್‌ಡೇಟ್ ಅನ್ನು ಕೂಡಲೇ ಪಡೆಯಲಿದ್ದು ಗೂಗಲ್ ಡೆವಲಪರ್ಸ್ ವೆಬ್‌ಸೈಟ್‌ನಿಂದ ಇದನ್ನು ನಿಮಗೆ ಡೌನ್‌ಲೋಡ್ ಮಾಡಬಹುದಾಗಿದೆ. ಇದು ನಿಮ್ಮ ಡಿವೈಸ್ ಅನ್ನು ಸ್ವಚ್ಛ ಮಾಡಿದ್ದು ಹ್ಯಾಂಡ್‌ಸೆಟ್ ಅನ್ನು ಅಪಾಯಗಳಿಂದ ರಕ್ಷಿಸಲಿದೆ.

ನಿಮ್ಮ ಫೋನ್‌ನಲ್ಲಿ ಸಂಬಂಧಪಟ್ಟಿರದ ಕೆಲವು ಬಗ್‌ಗಳು ಮತ್ತು ದೋಷಗಳನ್ನು ಈ ಭದ್ರತಾ ನವೀಕರಣ ಹೊಂದಿಸಲಿದ್ದು ಫೋನ್ ಅನ್ನು ಅಪ್‌ಡೇಟ್ ಮಾಡಲಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot