ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಳಿಸಲಿರುವ ಗೂಗಲ್

By Shwetha
|

ತನ್ನ ಹುಟುಕಾಟ ಎಂಜಿನ್‌ಗಳಲ್ಲಿ ಬಳಕೆದಾರರು ಹುಡುಕಾಡಿದ ವಿಷಯಗಳನ್ನು ಹಾಗೆಯೇ ಕಾಪಿಡುವ ಗೂಗಲ್ ಇಂಕ್ ತನ್ನ ನಿಯಮವನ್ನು ಕೊಂಚ ಸಡಿಲಿಸಬೇಕೆಂಬ ನ್ಯಾಯಾಲಯದ ಬೇಡಿಕೆಯನ್ನು ಅಂಗೀಕರಿಸಿದೆ.

ಗೂಗಲ್ ಅನ್ನು ಬಳಸುವ ಬಳಕೆದಾರ ಆಗ್ರಹಿಸಿದಲ್ಲಿ ಗೂಗಲ್ ಆ ವಿಷಯವನ್ನು ತೆಗೆದುಹಾಕಬೇಕೆಂದು ಕೋರ್ಟ್ ಆದೇಶಿಸಿದ್ದು ಗೂಗಲ್ ಅದನ್ನು ಹಾಗೆಯೇ ಪಾಲಿಸಬೇಕಾದ ತೀರ್ಮಾನಕ್ಕೆ ಬಂದಿದೆ. ಬಳಕೆದಾರರಿಗೆ ಗೂಗಲ್‌ನಲ್ಲಿ ಈ ಅಗತ್ಯತೆಯನ್ನು ಮುಂದಿಡುವ ಹಕ್ಕಿದ್ದು ಅದನ್ನು ಈಡೇರಿಸಿಕೊಡಬೇಕೆಂದು ಕೋರ್ಟ್ ಹೇಳಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಳಿಸಲಿರುವ ಗೂಗಲ್

ನ್ಯಾಯಾಲಯದ ಅನುಷ್ಟಾನಕ್ಕೆ ಬದ್ಧವಾಗಿ ಗೂಗಲ್ ಕಾರ್ಯನಿರ್ವಹಿಸಬೇಕೆಂದು ಕೋರ್ಟ್ ತಿಳಿಸಿದೆ. ಗೂಗಲ್ ಮೊದಲು ಈ ರೀತಿಯ ನಿಯಮವನ್ನು ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಬಳಕೆದಾರರು ಹುಡುಕಾಡುವ ಪದಗಳನ್ನು ಸರ್ಚ್ ಎಂಜಿನ್ ಹೊಂದಿರುವುದಕ್ಕೆ ಗೂಗಲ್ ಜವಬ್ದಾರನಲ್ಲ ಮತ್ತು "ರೈಟ್ ಟು ಬಿ ಫಾರ್‌ಗಟನ್" ಕಾಯ್ದೆ ಗೂಗಲ್‌ಗೆ ಅನ್ವಯವಾಗುವುದಿಲ್ಲ ಎಂದು ಅದು ವಾದ ಮಾಡಿತ್ತು.

ಬಳಕೆದಾರರು ಹುಡುಕಾಡುವ ಪದಗಳು ಅವರಿಗೆ ಸಂಬಂಧಪಟ್ಟದ್ದಾಗಿರುತ್ತದೆ ಅವರು ಹುಡುಕುವ ಪದಗಳಿಗೆ ಮಾಹಿತಿಯನ್ನು ಕೊಡಲು ಮಾತ್ರ ನಾವು ಬದ್ಧರು ಎಂಬ ವಾದವನ್ನು ಅದು ಮಂಡಿಸಿತ್ತು. ಆದರೆ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ವಿಷಯವನ್ನು ಗೂಗಲ್ ತನ್ನಲ್ಲಿ ಇಟ್ಟುಕೊಂಡದ್ದರಿಂದ ಅದು ಇನ್ನೊಂದು ಪತ್ರಿಕೆಗೆ ಆಹಾರವಾಯಿತೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಈ ದಾವೆಯು ತುಂಬಾ ಬಲವಾಗಿದ್ದರಿಂದ ಮತ್ತು ನ್ಯಾಯಾಲಯ ಗೂಗಲ್‌ಗೆ ಅದರ ತಪ್ಪಿನ ಅರಿವನ್ನು ಮಾಡಿಸಿದ್ದರಿಂದ ಈ ತೀರ್ಮಾನವನ್ನು ಕೊನೆಗೂ ಗೂಗಲ್ ಒಪ್ಪಬೇಕಾಯಿತು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X