ಗೂಗಲ್‌ನ ಸ್ವಯಂಚಾಲಿತ ಕಾರು ಇನ್ನು 5 ವರ್ಷಗಳಲ್ಲಿ

Written By:

ಚಾಲಕರಿಲ್ಲದೆ ಸ್ವಯಂ ಚಾಲನೆಯಾಗುವ ಕಾರುಗಳ ಪರಿಕಲ್ಪನೆಗೆ ಗೂಗಲ್ ಅಡಿಪಾಯವನ್ನು ಈಗಾಗಲೇ ಹಾಕಿದ್ದು ಯೋಜನೆಯನ್ನು 2020 ರ ಒಳಗೆ ಮುಗಿಸುವ ಯೋಚನೆಯಲ್ಲಿದೆ. ಈ ಸೆಲ್ಫ್ ಡ್ರೈವಿಂಗ್ ಕಾರ್ ಪ್ರೊಜೆಕ್ಟ್‌ನ ನಿರ್ದೇಶಕ ಗೂಗಲ್‌ನ ಕ್ರಿಸ್ ಆರ್ಮ್‌ಸನ್ ಯೋಜನೆ ಮತ್ತು ಕಾರಿನ ತಯಾರಿಕೆಯಲ್ಲಿ ಒಪ್ಪಂದ ಮಾಡಿಕೊಂಡಿರುವ ಪಾಲುದಾರರ ಮಾಹಿತಿಯನ್ನು ನೀಡಿದೆ.

ಗೂಗಲ್‌ನ ಸ್ವಯಂಚಾಲಿತ ಕಾರು ಇನ್ನು 5 ವರ್ಷಗಳಲ್ಲಿ

ಮೊದಲಿಗೆ ಈ ಕಾರುಗಳನ್ನು ಸ್ಯಾನ್ ಫ್ರಾನಿಸ್ಕೋದಲ್ಲಿ ಪ್ರದರ್ಶಿಸಿದ್ದು, ಇದೀಗ ಕಂಪೆನಿಯು ಡೆಟ್ರಾಯ್ಟ್‌ಗೂ ವಿಸ್ತರಣೆಯಾಗುವ ಸಾಧ್ಯತೆಯಲ್ಲಿದೆ. ಗೂಗಲ್ ಕ್ಯಾಲಿಫೋರ್ನಿಯಾದಲ್ಲಿ ಈ ಕಾರುಗಳ ಪರೀಕ್ಷೆಯನ್ನು ನಡೆಸಲಿದ್ದು, ಕಾರು ಬಳಸುವವರಿಗೆ ಡ್ರೈವರ್ ರಹಿತ ಸ್ವಯಂಚಾಲಿತ ಕಾರು ವರದಾನವಾಗಿ ಪರಿಣಮಿಸಲಿದೆ.

ಮುಂದಿನ ಐದು ವರ್ಷಗಳ ಒಳಗಾಗಿ ಈ ಸ್ವಯಂಚಾಲಿತ ಕಾರಿನ ಯೋಜನೆಯನ್ನು ಗೂಗಲ್ ಪೂರ್ಣಗೊಳಿಸಲಿದ್ದು ಆದಷ್ಟು ಬೇಗನೇ ಸ್ವಯಂಚಾಲಿತ ಕಾರು ಕಾರು ಪ್ರಿಯರ ಮನೆಬಾಗಿಲನ್ನು ತಲುಪಲಿದೆ.

English summary
Google wants driverless vehicles to be ready for production by 2020 and is talking to some of the biggest automakers in the industry to help make that reality, according to reports.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot