Home
ಸುದ್ದಿಜಾಲ

‘ಭಾರತದ ಯುವ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಿದೆ ಗೂಗಲ್’

By Lekhaka

ಗೂಗಲ್ ಹೆಚ್ಚು ಭಾರತದ ಕಡೆಗೆ ಆಕರ್ಷಿತವಾಗುತ್ತಿದ್ದು, ಯುವ ವಿದ್ಯಾರ್ಥಿಗಳನ್ನು ಮೊಬೈಲ್ ಡೆವಲಪರ್ ಗಳನ್ನು ತರಬೇತಿಗೊಳಿಸುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಹೊಸ ಮಾದರಿಯ ಮೊಬೈಲ್ ಟೆಕ್ನಾಲಜಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಇಸಾಗಿತಯ.

‘ಭಾರತದ ಯುವ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಿದೆ ಗೂಗಲ್’

ಇಡೀ ದೇಶದಲ್ಲಿ ಒಟ್ಟು ಎರಡು ಮಿಲಿಯನ್ ಮೊಬೈಲ್ ಡೆವಲಪರ್ ಗಳನ್ನು ತರಬೇತುಗೊಳಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ ಎನ್ನಲಾಗಿದೆ. ದೇಶದಲ್ಲಿ 12 ರಾಜ್ಯಗಳ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಗೂಗಲ್ ಮುಂದಾಗಿದೆ.

ಈಗಾಗಲೇ ಭಾರತ ಜಾಗತೀಕ ಮಾರುಕಟ್ಟೆಯಲ್ಲಿ ಟೆಕ್ ಟ್ಯಾಲೆಂಟ್ ಗಳಿಂದಲೇ ಗುರುತಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಗೂಗಲ್ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.

ಇದಕ್ಕಾಗಿ ಮುಂದೆ ಭವಿಷ್ಯದಲ್ಲಿ ಮತ್ತಷ್ಟು ಹೊಸ ಟ್ಯಾಲೆಂಟ್ ಗಳು ಬೆಳಕಿಗೆ ಬರಲಿ ಎನ್ನುವ ಕಾರಣಕ್ಕೆ ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳನ್ನು ಮತ್ತಷ್ಟು ಚುರುಕುಗೊಳಿಸಲು ಈ ಮಾದರಿಯ ಕಾರ್ಯಕ್ರಮವನ್ನು ನಡೆಸಲು ಗೂಗಲ್ ಯೋಜನೆ ರೂಪಿಸಿದೆ.

ಇದಕ್ಕಾಗಿ ಗೂಗಲ್ ಡೆವಲಪರ್ ಸ್ಟೂಡೆಂಟ್ ಕ್ಲಬ್ ರೂಪಿಸಿದ್ದು, ವಿಶ್ವವಿದ್ಯಾನಿಲಯಗಳನ್ನು ಇದರಲ್ಲಿ ಭಾಗಿಯಾಗುವಂತೆ ಮಾಡುವ ಪ್ಲಾನ್ ಹೊಂದಿದೆ. ಇದು ಗೂಗಲ್ ಗೆ ಹೊಸ ಟ್ಯಾಲೆಂಟ್ ಗಳನ್ನು ಹುಡುಕಲು ಸಹಾಯವಾಗಲಿದೆ.

ಭಾರತದಲ್ಲಿ ಅಡಗಿರುವ ಜ್ಞಾನ ಸಂಪತ್ತನ್ನು ಹುಡುಕಿ ತೆಗೆಯುವ ಕಾರ್ಯವನ್ನು ಮಾಡಲು ಗೂಗಲ್ ಮುಂದಿಗೆ ಇದರಲ್ಲಿ ಯಶಸ್ವಿಯಾದರೆ ಮುಂದಿನ ದಿನದಲ್ಲಿ ಭಾರತಕ್ಕೆ ಜಾಗತಿಕವಾಗಿ ಹೆಚ್ಚಿನ ಬೆಲೆಯೂ ದೊರೆಯಲಿದ್ದು, ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ.

Best Mobiles in India

English summary
Google launched a day-long Mobile Developer Fest in Bengaluru to train young students in the latest mobile technologies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+