ಗೂಗಲ್‌ಗೆ ಇತಿಹಾಸದಲ್ಲೇ ಅತೀ ಡೊಡ್ಡ ಸಂಕಷ್ಟ: ಆಂಡ್ರಾಯ್ಡ್ ಬಳಕೆದಾರರಿಗೆ ಶಾಕ್....!
ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ iOSಗೆ ಸೆಡ್ಡು ಹೊಡೆಯುವ ಸಲುವಾಗಿ ಸ್ಮಾರ್ಟ್‌ಫೋನ್ ತಯಾರಕರಿಗೆ ಉಚಿತವಾಗಿ ತನ್ನ ಆಂಡ್ರಾಯ್ಡ್ OS ಅನ್ನು ಬಳಕೆ ಮಾಡಿಕೊಳ್ಳಲು ಅನುಮತಿಯನ್ನು ನೀಡಿದ್ದ ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗ ತಾನು ಮಾಡಿದ ತಪ್ಪಿನಿಂದಾಗಿ 5 ಬಿಲಿಯನ್ ಡಾಲರ್ ಮೊತ್ತದ ದಂಡವನ್ನು ಪಾವತಿ ಮಾಡಬೇಕಾಗಿದೆ. ಭಾರತೀಯ ರೂಪಾಯಿಗಳಲ್ಲಿ ಇದು ರೂ.3,43,87,50,00,000.00 ಆಗಲಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಪ್ರಮಾಣದ ದಂಡ ಎಂದು ಬಣ್ಣಿಸಲಾಗಿದೆ.

ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣ ಯಶಸ್ಸು ಗಳಿಸುವ ಸಲುವಾಗಿ ಮತ್ತು ಏಕಸ್ವಾಮ್ಯತೆಯನ್ನು ಹೊಂದುವ ನಿಟ್ಟಿನಲ್ಲಿ ಆಂಡ್ರಾಯ್ಡ್ OS ಅನ್ನು ಉಚಿತ ಬಳಕೆಗೆ ನೀಡಿದ ಗೂಗಲ್ ಗುಟ್ಟು ತನಿಖೆಯಲ್ಲಿ ಬಯಲಾಗಿದ್ದು, ಇದರಿಂದಾಗಿ ಯುರೋಪಿಯನ್ ನಿಯಂತ್ರಕರು ದಾಖಲೆಯ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ. ಮುಂದೆ ಯಾವುದೇ ಕಂಪನಿಗಳು ಈ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲು ಮುಂದಾಗಬಾರದು ಎನ್ನುವುದು ಈ ಕ್ರಮದ ಹಿಂದಿರುವ ಸತ್ಯ ಸಂಗತಿ.

ಏಕೆ ದಂಡ:
ಅಮೆರಿಕಾ ಮೂಲದ ಆಲ್ಘಾಬಿಟ್ ಎನ್ನುವ ದೈತ್ಯ ಕಂಪನಿಯ ಅಂಗವಾಗಿರುವ ಗೂಗಲ್ ಇಂದು ಪ್ರಪಂಚದಲ್ಲಿಯೇ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿದೆ ಎಂದರೆ ತಪ್ಪಾಗುತ್ತಿಲ್ಲ. ಇಂದು ಯಾವುದೇ ವಿಚಾರವನ್ನು ಕೇಳಿದರು ಸಹ ಪ್ರತಿಯೊಬ್ಬರು ಹುಡುಕುವುದು ಗೂಗಲ್ ನಲ್ಲಿಯೇ. ಇಷ್ಟು ಪ್ರಮಾಣದಲ್ಲಿ ಬೇಡಿಕೆಯನ್ನು ಮತ್ತು ಅನಿವಾರ್ಯತೆಯನ್ನು ಸೃಷ್ಠಿಸಿಕೊಳ್ಳಲು ಗೂಗಲ್ ನಡೆಸುತ್ತಿದ್ದ ಹಿಂಬಾಗಿಲಿನ ಕ್ರಮಕ್ಕೆ ದಂಡವನ್ನು ವಿಧಿಸಲಾಗಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್:
ಗೂಗಲ್ ಉಚಿತವಾಗಿ ನೀಡುವ ಆಂಡ್ರಾಯ್ಡ್ ಅನ್ನು ಬಳಕೆ ಮಾಡಿಕೊಂಡು ಸ್ಮಾರ್ಟ್‌ಫೋನ್ ನಿರ್ಮಾಣ ಮಾಡಬೇಕಿದ್ದ ಸಂದರ್ಭದಲ್ಲಿ ಗೂಗಲ್ ತಯಾರಕರೊಂದಿಗೆ 'ಎಕ್ಸ್‌ಕ್ಲೂಸಿವ್ ಒಪ್ಪಂದ'ವೊಂದನ್ನು ಮಾಡಿಕೊಳ್ಳುತಿತ್ತು. ಇದರಿಂದಾಗಿ ಗೂಗಲ್‌ಗೆ ಸಾಕಷ್ಟು ಪ್ರಮಾಣದಲ್ಲಿ ಲಾಭವಾಗುತಿತ್ತು. ಇದರಿಂದಾಗಿಯೇ ಗೂಗಲ್ ಆಂಡ್ರಾಯ್ಡ್ OS ಅನ್ನು ಉಚಿತವಾಗಿಯೇ ಬಳಕೆ ನೀಡಿತ್ತು.

ಹೇಗೆ ಆದಾಯ:
ಹೀಗೆ ತನ್ನ ಆಂಡ್ರಾಯ್ಡ್ ಅನ್ನು ಬಳಕೆ ಮಾಡಿಕೊಂಡು ಸ್ಮಾರ್ಟ್‌ಫೋನ್ ತಯಾರಿಸುವ ಕಂಪನಿಗಳು ಕಡ್ಡಾಯವಾಗಿ ಗೂಗಲ್ ಆಪ್‌ಗಳನ್ನು ಮೊದಲೆ ಇನ್ಸ್ಟಾಲ್ ಮಾಡಿರಬೇಕು. ಇದರೊಂದಿಗೆ ತನ್ನ ಸರ್ಚ್ ಇಂಜಿನ್ ಅನ್ನು ಡಿಫಾಲ್ಟ್ ಆಗಿ ಇಡಲೇ ಬೇಕು ಎನ್ನುವಂತೆ ಒತ್ತಾಯವನ್ನು ಹೇರುತಿತ್ತು.

ಮೂರು ವರ್ಷ ತನಿಖೆ:
ಯೂರೋಪಿಯನ್ ಯೂನಿಯನ್ (EU) ಗೂಗಲ್ ವಿರುದ್ಧ ಕೇಳಿ ಬಂದಿದ್ದ ಆರೋಪದ ವಿರುದ್ಧ ಮೂರು ವರ್ಷಗಳ ಕಾಲ ತನಿಖೆಯನ್ನು ನಡೆಸಿದೆ ಎನ್ನಲಾಗಿದೆ. ಮೂರು ವರ್ಷಗಳ ಕಾಲ ನಡೆದ ಸುದೀರ್ಘ ತನಿಖೆಯಲ್ಲಿ ಸಾಕಷ್ಟು ಪ್ರಮಾಣ ವಿಷಯಗಳು ಆಚೆ ಬಂದಿದೆ.

ಮಾರುಕಟ್ಟೆಯಲ್ಲಿ ಏಕಸ್ವಾಮ್ಯ:
ಸರ್ಚ್ ಮಾರುಕಟ್ಟೆಯಲ್ಲಿ ಗೂಗಲ್ ಏಕಚಕ್ರಾಧಿಪತ್ಯವನ್ನು ಸ್ಥಾಪಿಸುವ ಸಲುವಾಗಿ ಈ ಮಾದರಿಯ ಕ್ರಮಕ್ಕೆ ಮುಂದಾಗಿತ್ತು. ಇದು ಹಲವು ದಿನಗಳ ಹಿಂದೆ ಬಳೆಕಿಗೆ ಬಂದಿದೆ ಎನ್ನಲಾಗಿದ್ದು, ಇದರ ಕುರಿತು ತನಿಖೆ ನಡೆಸಿದಾಗ ಮಾಹಿತಿಯೂ ಹೊರಬಂದಿದ್ದು, ಇದರಿಂದಾಗಿ ಬೇರೆ ಸರ್ಚ್ ಇಂಜಿನ್‌ಗಳ ಬೇಡಿಕೆಯೂ ಕಡಿಮೆಯಾಗಿತ್ತು ಎನ್ನುವದು ಗಮನಿಸ ಬೇಕಾದ ಅಂಶ.

ಬದಲಾಯಿಸಬೇಕು:
ಮೊಬೈಲ್ ಬಳಕೆದಾರರಿಗೆ ಗೂಗಲ್ ಉತ್ಪನ್ನಗಳನ್ನು ತಲುಪಿಸುವುದಕ್ಕಾಗಿ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದವನ್ನು ನಿಲ್ಲಿಸಲು 90 ದಿನಗಳ ಕಾಲವಧಿಯನ್ನು ನೀಡಲಾಗಿದೆ. ಇದನ್ನು ಗೂಗಲ್ ಬದಲಾಯಿಸಲೇ ಬೇಕಾಗಿದೆ.

ಆಂಡ್ರಾಯ್ಡ್ ಬಳಕೆಗೆ ದರ:
ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ OS ಬಳಕೆಯ ಮೇಲೆ ದರವನ್ನು ವಿಧಿಸುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸಹ ಪೇಯ್ಡ್ ಆಗುವದರಿಂದ ಬಳಕೆದಾರರು ಹೆಚ್ಚಿನ ಪ್ರಮಾಣದ ದರವನ್ನು ಪಾವತಿಸಬೇಕಾಗಬಹುದು.

ದಂಡ ಗೂಗಲ್‌ಗೆ ಲೆಕ್ಕಕಿಲ್ಲ:
ಗೂಗಲ್ ಮಾಡುತ್ತಿರುವ ಅಕ್ರಮವನ್ನು ತಡೆಯುವ ಸಲುವಾಗಿ ವಿಧಿಸಿರುವ ದಂಡದ ಪ್ರಮಾಣ ಸಾಮಾನ್ಯರಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿದೆ. ಆದರೆ ಇದು ಗೂಗಲ್ ಪಾಲಿಗೆ ದೊಡ್ಡದಲ್ಲ. ಕೇಲವ 18 ದಿನಗಳಲ್ಲಿ ಇಷ್ಟು ಪ್ರಮಾಣದ ಹಣವು ಗೂಗಲ್ ಖಾತೆಗೆ ಬಂದು ಸೇರಲಿದೆ ಎನ್ನಲಾಗಿದೆ.


Click it and Unblock the Notifications








