ಗೂಗಲ್‌ನಿಂದ ಇಂಟರ್‌ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುವ ಹೊಸ ಅಪ್ಲಿಕೇಶನ್ ಲಾಂಚ್!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಈಗಗಾಲೇ ಹಲವು ಸೇವೆಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಸದ್ಯ ಇದೀಗ ಗೂಗಲ್ ತನ್ನ ಹೊಸ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದೆ. ಇದು ನಿಯರ್‌ಬೈ ಸ್ಮಾರ್ಟ್‌ಫೋನ್ ಮತ್ತು ಬಳಕೆದಾರರನ್ನು ಕನೆಕ್ಟ್ ಮಾಡಲು ಇದನ್ನು ಪರಿಚಯಿಸಲಾಗಿದೆ. ಇನ್ನು ಈ ಅಪ್ಲಿಕೇಶನ್ ಅನ್ನು "ವೈಫೈನಾನ್‌ಸ್ಕ್ಯಾನ್ ಅಪ್ಲಿಕೇಶನ್" ಎಂದು ಹೆಸರಿಸಲಾಗಿದೆ.

ಹೌದು, ಗೂಗಲ್ ನಿಯರ್‌ಬೈ ಸ್ಮಾರ್ಟ್‌ಫೋನ್‌ಗಳು ಮತ್ತು ಬಳಕೆದಾರರನ್ನು ಸಂಪರ್ಕದಲ್ಲಿಡಲು ವೈಫೈನಾನ್‌ಸ್ಕ್ಯಾನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಅಂತಿಮವಾಗಿ ಬಳಕೆದಾರರ ದಿನನಿತ್ಯದ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ "ವೈಫೈನಾನ್‌ಸ್ಕ್ಯಾನ್ ಅಪ್ಲಿಕೇಶನ್" ಡೆವಲಪರ್‌ಗಳಿಗೆ ಮೀಸಲಾಗಿದೆ ಆದ್ದರಿಂದ ಬಳಕೆದಾರರ ವೈಫೈ ಅವೇರ್‌ನೊಂದಿಗೆ ಪ್ರಯೋಗಿಸಬಹುದು. ಇನ್ನುಳಿದಂತೆ ಈ ಹೊಸ ಅಪ್ಲಿಕೇಶನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಹೊಸ ಅಪ್ಲಿಕೇಶನ್ ಪರಿಚಯಿಸಿದೆ. ಇದು ಹತ್ತಿರದಲ್ಲಿರುವ ಡಿವೈಸ್‌ಗಳ ಜೊತೆಗೆ ಫೈಲ್ ಹಾಗೂ ಡೇಟಾವನ್ನು ಶೇರ್ ಮಾಡಬಹುದು. ಗೂಗಲ್‌ನ ಆಂಡ್ರಾಯ್ಡ್ 8 ಮತ್ತು ನಂತರದ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ. ವೈಫೈ ಇಲ್ಲವೇ ಯಾವುದೇ ರೀತಿಯ ಇಂಟರ್‌ನೆಟ್ ಸಂಪರ್ಕವಿಲ್ಲದೆ ಡೇಟಾ ವರ್ಗಾಯಿಸಲು ಈ ಅಪ್ಲಿಕೇಶನ್ ಸಹಾಕರವಾಗಲಿದೆ. ಇನ್ನು ಈ ಅಪ್ಲಿಕೇಶನ್ ನೈಬರ್ ಅವರ್‌ನೆಸ್ ನೆಟ್‌ವರ್ಕಿಂಗ್ (NAN) ವೈಫೈ ಅವೇರ್ ಆಗಿದೆ. ಇದಲ್ಲದೆ ತಮ್ಮ ಸ್ಮಾರ್ಟ್‌ಫೋನ್ ಡೇಟಾವನ್ನು ಹತ್ತಿರದಲ್ಲಿರುವ ಮತ್ತೊಂದು ಸ್ಮಾರ್ಟ್‌ಫೋನ್ ಜೊತೆಗೆ ಹಂಚಿಕೊಳ್ಳಲು ಅಥವಾ ಕಿರು ಸಂದೇಶಗಳನ್ನು ಕಳುಹಿಸಲು ತನ್ನದೇ ಆದ ನೆಟ್‌ವರ್ಕ್ ಅನ್ನು ಕ್ರಿಯೆಟ್ ಮಾಡಲಿದೆ.

ಇನ್ನು ಈ ಅಪ್ಲಿಕೇಶನ್ ಬಳಸುವವರು ಮೊದಲ ಬಾರಿಗೆ ನೆಟ್‌ವರ್ಕ್‌ಗೆ ಲಾಗ್ ಇನ್ ಮಾಡದೆಯೇ ಡಾಕ್ಯುಮೆಂಟ್ ಅನ್ನು ಪ್ರಿಂಟರ್‌ಗೆ ಕಳುಹಿಸಬಹುದು. ಅಲ್ಲದೆ ರೆಸ್ಟೋರೆಂಟ್ ಮೆನುವನ್ನು ವೀಕ್ಷಿಸಿ ಮತ್ತು ರೆಸ್ಟೋರೆಂಟ್ ಮುಚ್ಚಿದಾಗಲೂ ಇಂಟರ್ನೆಟ್ ಸಂಪರ್ಕವಿಲ್ಲದೆ ಟಿಕೆಟ್ ಅನ್ನು ಕಾಯ್ದಿರಿಸಬಹುದು. ಜೊತೆಗೆ ಆಟೋಮೇಟ್ ಮತ್ತು ಟೈಮ್‌ಸ್ಟ್ಯಾಂಪ್ ಶಾಲೆಯ ಚೆಕ್-ಇನ್‌ಗಳು ಮತ್ತು ರೋಲ್-ಕಾಲ್ಗಳನ್ನು ಮಾಡಬಹುದು. ಇದಲ್ಲದೆ ಐಡೆಂಟಿಟಿಯನ್ನು ಪ್ರಸ್ತುತಪಡಿಸಲು ಸಹ ಇದು ಸಹಾಯಕವಾಗಲಿದೆ.

ಇದಲ್ಲದೆ ವೈಫೈನಾನ್‌ಸ್ಕ್ಯಾನ್ ಅಪ್ಲಿಕೇಶನ್ 15 ಮೀಟರ್ ಅಂತರದ ಫೋನ್‌ಗಳೊಂದಿಗೆ ಸುಮಾರು 1 ಮೀಟರ್ ನಿಖರತೆಯೊಂದಿಗೆ ದೂರ ಮಾಪನವನ್ನು ಪಡೆಯಲು ಸಾಧ್ಯವಿದೆ. ಪೀರ್-ಟು-ಪೀರ್ ಶ್ರೇಣಿ ಮತ್ತು ಡೇಟಾ ವರ್ಗಾವಣೆಯ ಅಭಿವೃದ್ಧಿಗೆ ಅನುವು ಮಾಡಿಕೊಡುವ ದೂರವನ್ನು ಅಳೆಯಬಹದು. ಅಲ್ಲದೆ ಶ್ರೇಣಿ ಅಳತೆಗಳನ್ನು ಮೌಲ್ಯೀಕರಿಸಲು ಡೆವಲಪರ್‌ಗಳು, ಒಇಎಂಗಳು ಮತ್ತು ಸಂಶೋಧಕರು ಈ ಉಪಕರಣವನ್ನು ಬಳಸಬಹುದು. ವೈಫೈ ಜಾಗೃತಿ / ನ್ಯಾನ್ ಎಪಿಐ ಆಧರಿಸಿ ನನ್ನ ಫೋನ್ ಮತ್ತು ಸಂದರ್ಭ-ಅರಿವುಳ್ಳ ಅಪ್ಲಿಕೇಶನ್‌ಗಳನ್ನು ಕಂಡುಹಿಡಿಯಬಹುದು.


Click it and Unblock the Notifications








