ಗೂಗಲ್‌ನ ಅತಿಸಣ್ಣ ಕಂಪ್ಯೂಟರ್ ಕ್ರೋಮ್ ಬಿಟ್ ಮಾರುಕಟ್ಟೆಗೆ

By Shwetha
|

ಗೂಗಲ್‌ನ ಹೊಸ ಕಂಪ್ಯೂಟರ್ ಇನ್‌ಹೇಲರ್ ಗಾತ್ರದಲ್ಲಿದ್ದು ಇದನ್ನು ಕ್ರೋಮ್ ಬಿಟ್ ಎಂದು ಕರೆಯಲಾಗಿದೆ. ಅತ್ಯಂತ ಸಣ್ಣ ಕಂಪ್ಯೂಟರ್ ಎಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದೆ ಮತ್ತು ಈ ಬೇಸಿಗೆಗೆ ಇದು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.

ಗೂಗಲ್‌ನ ಅತಿಸಣ್ಣ ಕಂಪ್ಯೂಟರ್ ಕ್ರೋಮ್ ಬಿಟ್ ಮಾರುಕಟ್ಟೆಗೆ

ಗೂಗಲ್‌ನ ಪಾಲುದಾರಿಕೆಯೊಂದಿಗೆ ಅಸೂಸ್ ಇದನ್ನು ತಯಾರಿಸಿದ್ದು, ಇದು ಡಿಸ್‌ಪ್ಲೇಯನ್ನು ಹೊಂದಿಲ್ಲ. ಮತ್ತು ಕೀಬೋರ್ಡ್ ಇದರಲ್ಲಿಲ್ಲ. ಆದರೆ ಡಿಸ್‌ಪ್ಲೇ ಅಥವಾ ಯುಎಸ್‌ಬಿ ಮೂಲಕ ಮಾನಿಟರ್‌ಗೆ ಇದನ್ನು ಪ್ಲಗಿನ್ ಮಾಡಬಹುದಾಗಿದ್ದು ಇದನ್ನು ಕೀಬೋರ್ಡ್ ಜೊತೆಗೆ ಪೇರ್ ಮಾಡಬಹುದಾಗಿದೆ ಇದು ನಿಮಗೆ ಪೂರ್ಣ ಕ್ರೋಮ್ ಓಎಸ್ ಅನುಭವವನ್ನು ನೀಡಲಿದೆ.

ಗೂಗಲ್‌ನ ಅತಿಸಣ್ಣ ಕಂಪ್ಯೂಟರ್ ಕ್ರೋಮ್ ಬಿಟ್ ಮಾರುಕಟ್ಟೆಗೆ

ಇದೊಂದು ಫಂಕ್ಶನಲ್ ಕಂಪ್ಯೂಟರ್ ಎಂದರೆ ನೀವು ನಂಬಲೇಬೇಕು. 2ಜಿಬಿ RAM, 16 ಜಿಬಿ ಸಂಗ್ರಹಣಾ ಸಾಮರ್ಥ್ಯ, ವೈಫೈ ಬೆಂಬಲ ಇದರಲ್ಲಿದೆ. ಕಡಿಮೆ ದರದ, ಪೋರ್ಟೇಬಲ್ ಕ್ರೋಮ್‌ಬಿಟ್ ಬಳಕೆದಾರರ ಕಣ್ಮಣಿ ಎಂದೆನಿಸಿಕೊಳ್ಳುವ ಎಲ್ಲಾ ಲಕ್ಷಣವನ್ನು ಪಡೆದುಕೊಂಡಿದ್ದು ನಿಮಗಿದನ್ನು ಎಲ್ಲಿ ಬೇಕಾದರೂ ಬಳಸಬಹುದಾಗಿದೆ. ಆಧುನಿಕ ಆಪರೇಟಿಂಗ್ ಸಿಸ್ಟಮ್ ಎಂದು ಕರೆಯಿಸಿಕೊಳ್ಳುವ ಕ್ರೋಮ್ ಬಿಟ್ ಸಂಪೂರ್ಣ ಕ್ರೋಮ್ ಓಎಸ್ ಅನುಭವವನ್ನು ಇದು ಪಡೆದುಕೊಂಡಿದೆ ಎಂಬುದೇ ಇದರ ಧನಾತ್ಮಕ ಅಂಶವಾಗಿದೆ.

ಗೂಗಲ್‌ನ ಅತಿಸಣ್ಣ ಕಂಪ್ಯೂಟರ್ ಕ್ರೋಮ್ ಬಿಟ್ ಮಾರುಕಟ್ಟೆಗೆ
Best Mobiles in India

English summary
Google’s newest computer is about the size of an inhaler and could easily be mistaken for one were it not for its Chrome branding. It’s called the Chromebit and it will be one of the smallest computers on the market when it ships this summer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X