ಗೋಪ್ರೊ ಹೀರೋ 9 ಬ್ಲ್ಯಾಕ್‌ ಕ್ಯಾಮೆರಾ ಬಿಡುಗಡೆ! ಕಲರ್‌ಫುಲ್‌ ಡಿಸ್‌ಪ್ಲೇ ವಿಶೇಷ!

|

ಕ್ಯಾಮೆರಾ ಲೋಕ ಇಂದು ಸಾಕಷ್ಟು ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಆಪ್ಡೇಟ್ ಆದಂತೆ ದೊಡ್ಡ ಗಾತ್ರದ ಕ್ಯಾಮೆರಾದಿಂದ ಹಿಡಿದು ಪ್ಯಾಕೆಟ್‌ ಸೈಜಿನ್ ಕ್ಯಾಮೆರಾಗಳ ವರೆಗೂ ಸಾಕಷ್ಟು ಬದಲಾವಣೆ ಆಗಿದೆ. ಈಗಾಗಲೇ ಹಲವು ವೈವಿಧ್ಯಮಯ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದೀಗ ಗೋಪ್ರೋ ಸಂಸ್ಥೆ ತನ್ನ ಹೊಸ ಗೋಪ್ರೊ ಹೀರೋ 9 ಬ್ಲ್ಯಾಕ್‌ ಅನ್ನು ಬಿಡುಗಡೆ ಮಾಡಿದೆ. ಇದು 2020ರ ಗೋಪ್ರೊದ ಪ್ರಮುಖ ಆಕ್ಷನ್ ಕ್ಯಾಮೆರಾ ಮತ್ತು ಹೆಚ್ಚಿನ ರೆಸಲ್ಯೂಶನ್ ಸೆನ್ಸಾರ್‌ ಒಳಗೊಂಡ ಕ್ಯಾಮೆರಾ ಆಗಿದೆ ಎಂದು ಹೇಳಲಾಗಿದೆ. ಇದು ಕೂಡ ಪ್ಯಾಕೆಟ್‌ ಸೈಜಿನ ಗಾತ್ರದಲ್ಲಿ ಬರಲಿದ್ದು, ಪ್ರವಾಸಕ್ಕೆ ಹೊರಡುವಾಗ ಅತ್ಯುತ್ತಮ ಆಯ್ಕೆಯಾಗಿದೆ.

ಗೋಪ್ರೊ

ಹೌದು, ಗೋಪ್ರೊ ಸಂಸ್ಥೆ ತನ್ನ ಹೊಸ ಆಕ್ಷನ್ ಕ್ಯಾಮೆರಾ ಗೋಪ್ರೊ ಹೀರೋ 9 ಬ್ಲ್ಯಾಕ್ ಅನ್ನು ಪರಿಚಯಿಸಿದೆ. ಇದು ಹಗುರ ಗಾತ್ರವನ್ನ ಹೊಂದಿರುವುದರಿಂದ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇನ್ನು ಈ ಕ್ಯಾಮೆರಾ ದೊಡ್ಡ ಗಾತ್ರದ ಬ್ಯಾಟರಿಯನ್ನು ಹೊಂದಿದ್ದು, ಲೆನ್ಸ್‌ ಕವರ್‌ ಅನ್ನು ತೆಗೆಯಬಹುದಾಗಿದೆ. ಅಲ್ಲದೆ ಇದರ ಮುಂಭಾಗದ ಫೇಸ್‌ ಕಲರ್ ಎಲ್ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಗೋಪ್ರೊ ಈ ವರ್ಷ ತನ್ನ ಮುಖ್ಯ ಹೀರೋ ಲೈನ್ ಅನ್ನು ಮಾತ್ರ ಆಪ್ಡೇಟ್ ಮಾಡಿದೆ. ಅಲ್ಲದೆ ಕಳೆದ ವರ್ಷದಿಂದ ಗೋಪ್ರೊ ಮ್ಯಾಕ್ಸ್ ಕಂಪನಿಯ 360 ಡಿಗ್ರಿ ಕ್ಯಾಮೆರಾವಾಗಿದ್ದು, ಹೀರೋ 9 ಬ್ಲ್ಯಾಕ್ ಹೊಸ ಮ್ಯಾಕ್ಸ್ ಲೆನ್ಸ್ ಮೋಡ್ ಸೇರಿದಂತೆ ಗೋಪ್ರೊ ಮೋಡ್ಸ್‌ನೊಂದಿಗೆ ಹೊಂದಿಕೊಳ್ಳಲಿದೆ. ಇನ್ನುಳಿದಂತೆ ಈ ಕ್ಯಾಮೆರಾದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೋಪ್ರೊ ಹೀರೋ 9 ಬ್ಲ್ಯಾಕ್

ಗೋಪ್ರೊ ಹೀರೋ 9 ಬ್ಲ್ಯಾಕ್ ಆಕ್ಷನ್‌ ಕ್ಯಾಮೆರಾ ಹೊಸ 23.6 ಮೆಗಾಪಿಕ್ಸೆಲ್ ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿಯಂತೆ GP1 ಪ್ರೊಸೆಸರ್ ಹೊಂದಿದೆ. ಇನ್ನು ಕ್ಯಾಮೆರಾದಲ್ಲಿ ಈಗ 5K 30FPS ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೆ 20 ಮೆಗಾಪಿಕ್ಸೆಲ್ ಸ್ಟಿಲ್‌ಗಳನ್ನು ಸೆರೆಹಿಡಿಯಬಹುದಾಗಿದೆ. ಇನ್ನು ಈ ಕ್ಯಾಮೆರಾ ಫ್ರಂಟ್‌ ಸೈಡ್‌ ಕಲರ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ನಿಮ್ಮ ಕಡೆಗೆ ಕ್ಯಾಮೆರಾವನ್ನು ಫೋಕಸ್‌ ಮಾಡಿದಾಗಿ ಫ್ರೇಮಿಂಗ್‌ ಶಾಟ್‌ಗಳಿಗೆ ಉಪಯುಕ್ತವಾಗಲಿದೆ. ಇನ್ನು ಹೀರೋ 8 ಬ್ಲ್ಯಾಕ್‌ಗೆ ಹೋಲಿಸಿದರೆ ಹೀರೋ 9 ಬ್ಲ್ಯಾಕ್ ದೊಡ್ಡ ಗಾತ್ರದ ಬ್ಯಾಟರಿಯನ್ನು ಹೊಂದಿದೆ.

ಗೋಪ್ರೊ ಹೀರೋ 9 ಬ್ಲ್ಯಾಕ್

ಇನ್ನು ಗೋಪ್ರೊ ಹೀರೋ 9 ಬ್ಲ್ಯಾಕ್‌ನಲ್ಲಿ ಹೊಸ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನ ಅಳವಡಿಸಲಾಗಿದೆ. ಇವುಗಳಲ್ಲಿ ಹೈಪರ್‌ಸ್ಮೂತ್ 3.0 ಅನ್ನು ಅಳವಡಿಸಲಾಗಿದೆ. ಇದು ಸುಧಾರಿತ ಸ್ಥಿರೀಕರಣ ಮತ್ತು 5K ಸೇರಿದಂತೆ ಎಲ್ಲಾ ರೆಸಲ್ಯೂಷನ್‌ಗಳಲ್ಲಿ ಬೂಸ್ಟ್ ಮೋಡ್ ಅನ್ನು ಬಳಸುವ ಸಾಮರ್ಥ್ಯವನ್ನು ನೀಡುತ್ತದೆ. ಅಲ್ಲದೆ ಈ ಹೊಸ ಟೈಮ್‌ವರ್ಪ್ 3.0 ಮೋಡ್ ಈಗ ನಿಮ್ಮ ಹೈಪರ್‌ಲ್ಯಾಪ್ಸ್ ವೀಡಿಯೊಗಳನ್ನು ರಿಯಲ್‌-ಟೈಂನ ವೇಗಕ್ಕೆ ಆಡಿಯೊ ಅಥವಾ slow-motion ಆಯ್ಕೆಗೂ ಅನುಮತಿಸುತ್ತದೆ.

ಗೋಪ್ರೊ ಹೀರೋ 9 ಬ್ಲ್ಯಾಕ್‌ ಕ್ಯಾಮೆರಾ

ಗೋಪ್ರೊ ಹೀರೋ 9 ಬ್ಲ್ಯಾಕ್‌ ಕ್ಯಾಮೆರಾ ಲೀನಿಯರ್ + ಹರೈಸನ್ ಲೆವೆಲಿಂಗ್ ಆಯ್ಕೆಯನ್ನು ನೀಡಿದ್ದು, ಇದು ಕ್ಯಾಮೆರಾದಲ್ಲಿಯೇ ಹಾರಿಜಾನ್ ಲೆವೆಲಿಂಗ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ಕ್ಯಾಮೆರಾದಲ್ಲಿ ಲೆನ್ಸ್ ಕವರ್ ತೆಗೆದುಹಾಕುವ ಆಯ್ಕೆಯನ್ನು ಹೊಂದಿದೆ. ಅಲ್ಲದೆ ಹೊಸ ಮ್ಯಾಕ್ಸ್ ಲೆನ್ಸ್ ಮೋಡ್‌ನೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾದ ಅವಕಾಶವನ್ನು ಸಹ ನೀಡಲಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾ ಮ್ಯಾಕ್ಸ್ ಹೈಪರ್‌ಸ್ಮೂತ್ ಸ್ಥಿರೀಕರಣ ಮತ್ತು ಹಾರಿಜಾನ್ ಲಾಕ್ ಫೀಚರ್ಸ್‌ಗಳ ಲಾಭವನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಕ್ಯಾಮೆರಾ

ಇನ್ನು ಈ ಕ್ಯಾಮೆರಾ ಒಂದೇ ಮೈಕ್ರೊ ಎಸ್ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಚಾರ್ಜಿಂಗ್‌ ಅನ್ನು ಹೊಂದಿದೆ. ಸದ್ಯ ಗೋಪ್ರೊ ಹೀರೋ 9 ಬ್ಲ್ಯಾಕ್ ಕ್ಯಾಮೆರಾ ಭಾರತದಲ್ಲಿ 49,500ರೂ ಬೆಲೆಯನ್ನು ಹೊಂದಿದ್ದು, ಅಕ್ಟೋಬರ್ ಅಂತ್ಯದಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
GoPro Hero 9 Black has been launched. It's GoPro's flagship action camera for 2020 and features a higher resolution sensor, larger battery, removable lens cover, and a front-facing colour LCD display.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X