ಭಾರತದ ಮಾರುಕಟ್ಟೆಯಲ್ಲಿ ಗೋಕಿ ವೈಟಲ್ 3.0 ಸ್ಮಾರ್ಟ್ ಬ್ಯಾಂಡ್ ಬಿಡುಗಡೆ!
ಟೆಕ್ ವಲಯದಲ್ಲಿ ಸಾಕಷ್ಟು ಹೊಸ ಮಾದರಿಯ ಸ್ಮಾರ್ಟ್ ಪ್ರಾಡಕ್ಟ್‌ಗಳಿಗೆನೂ ಭರವಿಲ್ಲ. ಪ್ರತಿನಿತ್ಯವೂ ಹೊಸ ಮಾದರಿಯ ಪ್ರಾಡಕ್ಟ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇರುತ್ತವೆ. ಇನ್ನು ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗೆ ವಿಶಾಲವಾಗಿದೆಯೋ ಹಾಗೇಯೇ ಸ್ಮಾರ್ಟ್ ಬ್ಯಾಂಡ್ ಮಾರುಕಟ್ಟೆ ಕೂಡ ವಿಶಾಲವಾಗಿದೆ. ಹಲವು ವೈವಿಧ್ಯಮಯ ಸ್ಮಾರ್ಟ್ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಲಬ್ಯವಿವೆ. ಸದ್ಯ ಇದೀಗ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್ ಬ್ಯಾಂಡ್ ಅನ್ನು ಗೋಕಿ ಕಂಪೆನಿ ಪರಿಚಯಿಸಿದೆ.

ಹೌದು, ಸ್ಮಾರ್ಟ್ ಬ್ಯಾಂಡ್ ತಯಾರಕ ಗೋಕಿ ಕಂಪೆನಿ ತನ್ನ ಹೊಸ ಗೋಕಿ ವೈಟಲ್ 3.0 ಸ್ಮಾರ್ಟ್ ಬ್ಯಾಂಡ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ ಹೊಸ ಮಾದರಿಯ ಫಿಟ್‌ನೆಸ್ ಆಧಾರಿತ ವೇರಿಯೆಬಲ್ ಡಿವೈಸ್ ಆಗಿದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ ಹೃದಯ ಬಡಿತ, ರಕ್ತದೊತ್ತಡ ಮತ್ತು ನಿದ್ರೆಯನ್ನು ಪತ್ತೆಹಚ್ಚುವ ಮತ್ತು ಅಳೆಯುವಂತಹ ಫೀಚರ್ಸ್‌ಗಳನ್ನ ಒಳಗೊಂಡಿದೆ. ಅಷ್ಟೇ ಅಲ್ಲ COVID-19 ರೋಗಲಕ್ಷಣಗಳನ್ನು ಪತ್ತೆಹಚ್ಚಬಲ್ಲ ಸಾಮರ್ಥ್ಯ ಹೊಂದಿರುವ ವೈಟಲ್ 3.0 ಬ್ಯಾಂಡ್ ದೇಹದ ಉಷ್ಣತೆಯನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದಕೊಳ್ಳೋಣ ಬನ್ನಿರಿ.

ಗೋಕಿ ವೈಟಲ್ 3.0 ಸ್ಮಾರ್ಟ್ ಬ್ಯಾಂಡ್ ಕಲರ್ ಡಿಸ್‌ಪ್ಲೇಯನ್ನ ಹೊಂದಿದ್ದು, ಇದು ವಾಟರ್ ಫ್ರೂಪ್ ವ್ಯವಸ್ಥೆಯನ್ನ ಹೊಂದಿದೆ. ಅಲ್ಲದೆ ಬಳಕೆದಾರರು ಸ್ಮಾರ್ಟ್ ಬ್ಯಾಂಡ್‌ನಲ್ಲಿ ಇತರ ನೋಟಿಫೀಕೇಶನ್‌ಗಳ ಜೊತೆಗೆ ಸಂದೇಶಗಳು, ಕರೆಗಳನ್ನು ಸಹ ಸ್ವೀಕರಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ ಗೋಕಿ ವೈಟಲ್ 3.0 ಬ್ಯಾಂಡ್ ಅನ್ನು ಗೋಕಿ ಅಪ್ಲಿಕೇಶನ್ ಮೂಲಕ ಸಹ ನಿರ್ವಹಿಸಬಹುದು ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್ ಹಾರ್ಟ್‌ಬೀಟ್ ರೇಟಿಂಗ್, ರಕ್ತದೊತ್ತಡ, ನಿದ್ರೆಯನ್ನು ಪತ್ತೆ ಹತ್ತುವ ಫೀಚರ್ಸ್‌ಗಳನ್ನ ಹೊಂದಿದೆ.

ಇದಲ್ಲದೆ ಇನ್ನು ಹೆಚ್ಚುವರಿಯಾಗಿ, ಹಂತಗಳು, ದೂರ ಮತ್ತು ಸುಟ್ಟ ಕ್ಯಾಲೊರಿಗಳಂತಹ ದೈನಂದಿನ ಚಟುವಟಿಕೆಗಳನ್ನು ಪತ್ತೆಹಚ್ಚಲು ಸ್ಮಾರ್ಟ್ ಬ್ಯಾಂಡ್ ಸಮರ್ಥವಾಗಿದೆ. ಇದರ ಜೊತೆಗೆ ದೇಹದ ಪ್ರಮುಖ ತಾಪಮಾನವನ್ನು ಕಂಡುಹಿಡಿಯಬಲ್ಲ ಉಷ್ಣ ಸಂವೇದಕವು ಈ ಬ್ಯಾಂಡ್‌ನ ಪ್ರಮುಖ ಫೀಚರ್ಸ್ ಆಗಿದೆ. ಅಲ್ಲದೆ ತಾಪಮಾನದ ವ್ಯಾಪ್ತಿಯು 77 ಡಿಗ್ರಿ ಫ್ಯಾರನ್‌ಹೀಟ್‌ನಿಂದ 113 ಡಿಗ್ರಿ ಫ್ಯಾರನ್‌ಹೀಟ್‌ನಿಂದ +/- 0.3-ಡಿಗ್ರಿ ಫ್ಯಾರನ್‌ಹೀಟ್‌ನ ನಿಖರತೆಯೊಂದಿಗೆ ಇರುತ್ತದೆ. ಈ ಫೀಚರ್ಸ್ ಹೊಮದಿರುವುದರಿಂದ COVID-19ನ ಆರಂಭಿಕ ರೋಗಲಕ್ಷಣವನ್ನು ಕಂಡುಹಿಡಿಯಲು ಅವಕಾಶವಿದೆ ಎನ್ನಲಾಗ್ತಿದೆ.

ಇನ್ನು ಗೋಕಿ ವೈಟಲ್ 3.0 ಭಾರತದಲ್ಲಿ 3,999 ರೂ.ಬೆಲೆಯನ್ನ ಹೊಂದಿದ್ದು, ಈ ಸ್ಮಾರ್ಟ್ ಬ್ಯಾಂಡ್ ಪ್ರಸ್ತುತ ಗೋಕಿ ಇಂಡಿಯಾ ಸೈಟ್‌ನಲ್ಲಿ ಪ್ರೀ ಬುಕಿಂಗ್ ಮಾಡಬಹುದಾಗಿದೆ. ಇದಲ್ಲದೆ ವೈಟಲ್ 3.0 ಶೀಘ್ರದಲ್ಲೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿದೆ.


Click it and Unblock the Notifications




