ಫೇಸ್‌ಬುಕ್ ಮೇಲೆ ಎರಡನೇ ನೋಟಿಸ್ ಜಾರಿ!..ಗಡುವು ನೀಡಿತು ಕೇಂದ್ರಸರ್ಕಾರ!!
ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್‌ನ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾ ಮತ್ತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಕೇಂದ್ರ ಸರ್ಕಾರ ಎರಡನೇ ನೋಟಿಸ್ ಜಾರಿ ಮಾಡಿದೆ. ಮೇ10ರ ಒಳಗಾಗಿ ಮೇ10ರ ಒಳಗಾಗಿ ಮತ್ತೊಮ್ಮೆ ವಿವರಣೆ ನೀಡುವಂತೆ ಬುಧವಾರ ಗಡುವು ನೀಡಲಾಗಿದೆ.
ಭಾರತ ಸರ್ಕಾರವು ಈ ಮೊದಲು ನೀಡಿದ್ದ ನೋಟಿಸ್‌ಗೆ ಈ ತಿಂಗಳ ಮೊದಲ ವಾರದಲ್ಲಿ ಎರಡೂ ಸಂಸ್ಥೆಗಳು ಉತ್ತರ ನೀಡಿದ್ದವು. ಆದರೆ ಈ ಮೊದಲು ನೀಡಿದ್ದ ನೋಟಿಸ್‌ಗೆ ಕೇಂಬ್ರಿಜ್ ಅನಲಿಟಿಕಾ ನೀಡಿದ್ದ ವಿವರಣೆ ಸಾಕಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಬಳಕೆದಾರರ ವೈಯಕ್ತಿಕ ಮಾಹಿತಿ ಬಗ್ಗೆ ಮತ್ತಷ್ಟು ಪೂರಕ ಮಾಹಿತಿಗಳನ್ನು ಕೇಳಿಕೊಂಡಿದೆ.

ಭವಿಷ್ಯದಲ್ಲಿ ಭಾರತೀಯ ಫೇಸ್‌ಬುಕ್ಬಳಕೆದಾರರ ವೈಯಕ್ತಿಕ ಮಾಹಿತಿ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಫೇಸ್‌ಬುಕ್‌ಗೆ ಸೂಚಿಸಿದ್ದು, ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ಮೇ10ರ ಒಳಗಾಗಿ ಸಂಪೂರ್ಣ ವಿವರಣೆ ನೀಡುವಂತೆ ಎರಡೂ ಸಂಸ್ಥೆಗಳಿಗೆ ಗಡುವು ನೀಡಿದೆ.
ಭಾರತೀಯ ಮತದಾರರ ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ? ಈ ಒಂದು ಮಾಹಿತಿ ದುರ್ಬಳಕೆ ತಡೆಯಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಬಳಕೆದಾರರ ಮಾಹಿತಿ ರಕ್ಷಣೆಗಾಗಿ ಯಾವ ಕ್ರಮಗಳನ್ನು ಫೇಸ್‌ಬುಕ್ ಕೈಗೊಂಡಿದೆ? ಎಂಬ ಪ್ರಶ್ನೆಗಳನ್ನು ಭಾರತ ಸರ್ಕಾರ ಫೇಸ್‌ಬುಕ್‌ಗೆ ಕೇಳಿದೆ ಎಂದು ಹೇಳಲಾಗಿದೆ.

ಈ ಮೊದಲು ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವಾಲಯ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ನೀಡಿದ್ದ ನೋಟಿಸ್ ಮೊದಲ ನೋಟಿಸ್‌ಗೆ ಉತ್ತರಿಸಿದ್ದ ಫೇಸ್‌ಬುಕ್, 5.62 ಲಕ್ಷ ಭಾರತೀಯ ಬಳಕೆದಾರ ಮಾಹಿತಿ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿತ್ತು ಮತ್ತು ಭಾರತೀಯ ಬಳಕೆದಾರರಿಗೆ ಹೆಚ್ಚು ಸುರಕ್ಷತೆ ಒದಗಿಸುವುದಾಗಿ ತಿಳಿಸಿತ್ತು.


Click it and Unblock the Notifications








