Home
ಸುದ್ದಿಜಾಲ

ಮೋದಿ ಖಡಕ್ ನಿರ್ಧಾರ: 28,000ಕ್ಕೂ ಹೆಚ್ಚು URL ಬ್ಲಾಕ್.. ಈ ರೀತಿ ಪೋಸ್ಟ್ ಮಾಡಿದ್ರೆ ನಿಮಗೂ ಇದೇ ಗತಿ!

ಸೋಶಿಯಲ್‌ ಮೀಡಿಯಾ ಬಳಕೆದಾರರೇ ಹುಷಾರು..! ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತೆ ಪೋಸ್ಟ್ ಮಾಡಿದರೆ ಶಿಕ್ಷೆ ಗ್ಯಾರಂಟಿ. ಹೌದು, ಕೇಂದ್ರ ಸರ್ಕಾರ ಸೋಶಿಯಲ್‌ ಮೀಡಿಯಾದಲ್ಲಿ 28,000ಕ್ಕೂ ಹೆಚ್ಚು ಯುಆರ್‌ಎಲ್‌ಗಳನ್ನು (URLs) ನಿರ್ಬಂಧಿಸಿದೆ. ಒಂದು ವರ್ಷದಲ್ಲಿ ಅತಿ ಹೆಚ್ಚು ಯುಆರ್‌ಎಲ್‌ ಬ್ಯಾನ್‌ ಆಗಿರುವುದು ದಾಖಲೆಯಾಗಿದೆ. ದೇಶದಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಯುಆರ್‌ಎಲ್‌ಗಳು ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಚಳುವಳಿಗಳು, ದ್ವೇಷ ಭಾಷಣ, ವಂಚನೆ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆಗಳಿಗೆ ಸಂಬಂಧಿಸಿದ ವಿಷಯವನ್ನು ಒಳಗೊಂಡಿವೆ.

ಹೌದು, ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟುಮಾಡುವ ವಿಷಯವನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಪೈಕಿ ಫೇಸ್‌ಬುಕ್ (Facebook) ಮತ್ತು ಎಕ್ಸ್‌ನಲ್ಲಿ (Twitter) ಹೆಚ್ಚು ಯುಆರ್‌ಎಲ್‌ಗಳನ್ನು ತೆಗೆದುಹಾಕಲಾಗಿದೆ. ಈ ಎರಡೂ ಪ್ಲಾಟ್‌ಫಾರ್ಮ್‌ಗಳಿಂದ 10 ಸಾವಿರಕ್ಕೂ ಹೆಚ್ಚು ಯುಆರ್‌ಎಲ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಎಚ್ಚರ! 28,000 URL ಬ್ಲಾಕ್.. ಈ ರೀತಿ ಪೋಸ್ಟ್ ಹಾಕಿದ್ರೆ ಶಿಕ್ಷೆ ಗ್ಯಾರಂಟಿ!

138 ವಾಟ್ಸಾಪ್ ಖಾತೆ ಬ್ಯಾನ್!

ಇದಲ್ಲದೆ ಯೂಟ್ಯೂಬ್ (YouTube), ಇನ್‌ಸ್ಟಾಗ್ರಾಮ್ (Instagram) ಮತ್ತು ವಾಟ್ಸಾಪ್‌ನಲ್ಲಿನ (WhatsApp) ಅನೇಕ ಖಾತೆಗಳು ಮತ್ತು ಯುಆರ್‌ಎಲ್‌ಗಳನ್ನು ಸಹ ತೆಗೆದುಹಾಕಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ಬಂಧಿಸಲಾದ ಯುಆರ್‌ಎಲ್‌ಗಳ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳ ಕಂಡುಬಂದಿದೆ. 2022ರಲ್ಲಿ 355 ಯುಆರ್‌ಎಲ್‌ಗಳನ್ನು ತೆಗೆದುಹಾಕಲಾಗಿತ್ತು. ಆದರೆ, ಈ ಸಂಖ್ಯೆ 2024 ರಲ್ಲಿ 1 ಸಾವಿರಕ್ಕಿಂತ ಹೆಚ್ಚಿದೆ. ಆಕ್ಷೇಪಾರ್ಹ ವಿಷಯವನ್ನು ಹಂಚಿಕೊಳ್ಳುತ್ತಿದ್ದ 138 ಖಾತೆಗಳನ್ನು ವಾಟ್ಸಾಪ್ ನಿರ್ಬಂಧಿಸಲಾಗಿದೆ. ಯೂಟ್ಯೂಬ್‌ನಲ್ಲಿ 540 ಮತ್ತು ಟೆಲಿಗ್ರಾಮ್‌ನಲ್ಲಿ (Telegram) 225 ಯುಆರ್‌ಎಲ್‌ಗಳನ್ನು ನಿರ್ಬಂಧಿಸಲಾಗಿದೆ.

ಯುಆರ್‌ಎಲ್‌ ನಿರ್ಬಂಧಕ್ಕೆ ಕಾರಣವೇನು?

ಹೆಚ್ಚಿನ ಸಂಖ್ಯೆಯ ಯುಆರ್‌ಎಲ್‌ಗಳು ಜನರನ್ನು ವಂಚನೆಗೊಳಪಡಿಸುವ ಇತರೆ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಿಗೆ ಕರೆದೊಯ್ಯುತ್ತವೆ. ಇವುಗಳಲ್ಲಿ ನಕಲಿ ಹೂಡಿಕೆ ಅವಕಾಶಗಳು, ವರ್ಕ್‌ ಫ್ರಮ್‌ ಹೋಂ ಕೆಲಸದ ಆಫರ್‌ಗಳು ಸೇರಿವೆ. ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಉತ್ತೇಜಿಸುವ 10,500 ಕ್ಕೂ ಹೆಚ್ಚು ಯುಆರ್‌ಎಲ್‌ಗಳಿವೆ. ಜೊತೆಗೆ, 2100 ಕ್ಕೂ ಹೆಚ್ಚು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (PFI) ಸೇರಿದ ಯುಆರ್‌ಎಲ್‌ಗಳನ್ನು ನಿಷೇಧಿಸಲಾಗಿದೆ. ಇದಲ್ಲದೆ, ರಾಷ್ಟ್ರ ವಿರೋಧಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯೊಡ್ಡುವ ಮೊಬೈಲ್ ಅಪ್ಲಿಕೇಶನ್‌ಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ.

URL ನಿರ್ಬಂಧಿಸಿರುವ ವಿವರಗಳು (ವರ್ಷವಾರು)

- ಫೇಸ್‌ಬುಕ್: 2022 ರಲ್ಲಿ 1743, 2023 ರಲ್ಲಿ 6074 ಮತ್ತು 2024 ರಲ್ಲಿ 3159
- ಎಕ್ಸ್‌: 2022 ರಲ್ಲಿ 3417, 2023 ರಲ್ಲಿ 3772 ಮತ್ತು 2024 ರಲ್ಲಿ 2950
- ಯೂಟ್ಯೂಬ್: 2022 ರಲ್ಲಿ 809, 2023 ರಲ್ಲಿ 862 ಮತ್ತು 2024 ರಲ್ಲಿ 540
- ಇನ್‌ಸ್ಟಾಗ್ರಾಮ್: 2022 ರಲ್ಲಿ 355, 2023 ರಲ್ಲಿ 814 ಮತ್ತು 2024 ರಲ್ಲಿ 1029
- ಟೆಲಿಗ್ರಾಮ್: ಒಟ್ಟು 225 ಯುಆರ್‌ಎಲ್‌ಗಳನ್ನು ನಿರ್ಬಂಧಿಸಲಾಗಿದೆ.

ಸರ್ಕಾರ ಈ ಕ್ರಮ ಕೈಗೊಂಡಿದ್ದೇಕೆ?

ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಕೇಂದ್ರ ಸರ್ಕಾರವು ಭಾರತದ ಸಾರ್ವಭೌಮತ್ವ ಮತ್ತು ಸಾರ್ವಜನಿಕ ಭದ್ರತೆಗೆ ಬೆದರಿಕೆಯೊಡ್ಡುವ ವಿಷಯಗಳನ್ನು ಒಳಗೊಂಡಿರುವ ಯುಆರ್‌ಎಲ್‌ಗಳ ಮೇಲೆ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕಾಗಿ ಗೃಹ ಸಚಿವಾಲಯವು ಐಟಿ ಕಾಯಿದೆಯ ಸೆಕ್ಷನ್ 69A ಅನ್ನು ಬಳಸಿದೆ. ಈ ಮೂಲಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಒಟ್ಟಾರೆ, ಕೇಂದ್ರ ಸರ್ಕಾರವು ದೇಶಕ್ಕೆ ಹಾನಿಕಾರಕವಾಗಿರುವ ಯುಆರ್‌ಎಲ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ಅಧಿಕಾರಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ದೇಶ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕ ಪೋಸ್ಟ್‌ಗಳನ್ನು ನಿರ್ಬಂಧಿಸುವ ಅಧಿಕಾರವನ್ನು ನೀಡಿದೆ. ಒಂದು ವೇಳೆ ನೀವು, ಸೋಶಿಯಲ್‌ ಮೀಡಿಯಾದಲ್ಲಿ ಈ ರೀತಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತೆ ಪೋಸ್ಟ್ ಮಾಡಿದರೆ ಕಢಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

Best Mobiles in India

English summary
Central Government blocks record 28,000 URLs in 2024; Facebook, X face maximum takedowns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+