ಭಾರತೀಯ ಟೆಲಿಕಾಂ ಲೋಕದ ಮಹಾ ಸಮ್ಮಿಲನದ ವಿಶೇಷತೆಗಳು ಗೊತ್ತಾ..?

  By Avinash
  |

  ಕೇಂದ್ರ ಸರ್ಕಾರ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಕಂಪನಿಗಳ ಮಹಾ ಸಮ್ಮಿಲನಕ್ಕೆ ಒಪ್ಪಿಗೆ ಸೂಚಿಸಿದ್ದು, ಭಾರತದ ಅತಿದೊಡ್ಡ ನೆಟ್‌ವರ್ಕ್‌ ಪಟ್ಟದಿಂದ ಏರ್‌ಟೆಲ್ ಕೆಳಗಡೆ ಇಳಿದಿದೆ. ಭಾರತದ ಅತಿದೊಡ್ಡ ನೆಟ್‌ವರ್ಕ್‌ ಆಗಿ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಕಂಪನಿಗಳ ಮಹಾ ಸಮ್ಮಿಲನ ಆಯ್ಕೆಯಾಗಿದೆ.

  ಭಾರತೀಯ ಟೆಲಿಕಾಂ ಲೋಕದ ಮಹಾ ಸಮ್ಮಿಲನದ ವಿಶೇಷತೆಗಳು ಗೊತ್ತಾ..?

  ಹೌದು, ಎರಡು ಕಂಪನಿಗಳ ಸಮ್ಮಿಲನದಿಂದ ಭಾರತದ ಟೆಲಿಕಾಂ ಲೋಕದಲ್ಲಿ ಮತ್ತೊಂದು ಕ್ರಾಂತಿಯಾಗಲಿದ್ದು, ಏರ್‌ಟೆಲ್ ಮತ್ತು ಜಿಯೋಗೆ ತೀವ್ರ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ. ಗ್ರಾಹಕರನ್ನು ಸೆಳೆಯಲು ಪ್ಲಾನ್ ಮಾಡಿರುವ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಮಹಾ ಸಮ್ಮಿಲನ ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಭಾರತದ ಅತಿದೊಡ್ಡ ನೆಟ್‌ವರ್ಕ್‌

  ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಮಹಾ ಸಮ್ಮಿಲನವು ಭಾರತದ ಅತಿದೊಡ್ಡ ನೆಟ್‌ವರ್ಕ್‌ ಆಗಿದ್ದು, 23 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಅದಲ್ಲದೇ ಭಾರತದ ಟೆಲಿಕಾಂ ಮಾರುಕಟ್ಟೆ ಷೇರುಗಳಲ್ಲಿ ಶೇ.35ರಷ್ಟು ಪಾಲನ್ನು ಹೊಂದಲಿದೆ.

  ಟೆಲಿಕಮ್ಯುನಿಕೇಷನ್ ಇಲಾಖೆಯಿಂದ ಒಪ್ಪಿಗೆ

  ಟೆಲಿಕಮ್ಯುನಿಕೇಷನ್ ಇಲಾಖೆಯು ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಮಹಾ ಸಮ್ಮಿಲನಕ್ಕೆ ಸ್ಟಾಂಪ್ ಒಪ್ಪಿಗೆ ನೀಡಿದೆ., ಎರಡು ಕಂಪನಿಗಳು ಒಂದು ಬಾರಿಯ ಸ್ಪೇಕ್ಟ್ರಮ್ ದರವಾದ ₹ 7,248.78 ಕೋಟಿಯನ್ನು ಪಾವತಿಸಿ ಅನುಮತಿ ಪಡೆದಿವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

  ಸ್ಥಿರ ಮಾರುಕಟ್ಟೆ

  ಮೇಗಾ ಡೀಲ್‌ನ್ನು ಖಚಿತ ಪಡಿಸಿರುವ ಟೆಲಿಕಾಂ ಕಾರ್ಯದರ್ಶಿ ಅರುಣ ಸುಂದರರಾಜನ್ ಟೆಲಿಕಾಂ ಲೋಕದಲ್ಲಿ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಇಂಡಿಯಾದ ಸಮ್ಮಿಲನದ ನಂತರವು ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಥಿರತೆ ಉಳಿಯುತ್ತದೆ ಎಂಬ ಭವಿಷ್ಯ ನುಡಿದಿದ್ದಾರೆ. ಟೆಲಿಕಾಂ ಸೆಕ್ಟರ್‌ನ್ನು ಮತ್ತಷ್ಟು ಶಕ್ತಗೊಳಿಸಲು ಮೂರು ಪ್ರಬಲ ಖಾಸಗಿ ಟೆಲಿಕಾಂ ಆಪರೇಟರ್‌ಗಳು ಹಾಗೂ ಒಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್‌ನೊಂದಿಗೆ ಸರ್ಕಾರ ಕಾರ್ಯನಿರತವಾಗಿದೆ ಎಂದು ಅರುಣಾ ಹೇಳಿದ್ದಾರೆ.

  ವೊಡಾಫೋನ್ ಐಡಿಯಾ ಲಿಮಿಟೆಡ್

  ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ನ ಬಿಗ್ ಮೆಗಾ ಡೀಲ್‌ನಿಂದ ಹೊಸ ಕಂಪನಿ ಅಸ್ತಿತ್ವಕ್ಕೆ ಬಂದಿದ್ದು, ವೊಡಾಫೋನ್ ಐಡಿಯಾ ಲಿಮಿಟೆಡ್ ಎಂದು ಹೆಸರಿಡಲಾಗಿದೆ. ಹೊಸ ಕಂಪನಿಯು 430 ಮಿಲಿಯನ್ ಗ್ರಾಹಕರನ್ನು ಹೊಂದುವ ಮೂಲಕ ಭಾರತದ ಅತಿದೊಡ್ಡ ನೆಟ್‌ವರ್ಕ್‌ ಆಗಲಿದೆ. ಪ್ರಸ್ತುತ ಭಾರತದ ಅತಿದೊಡ್ಡ ನೆಟ್‌ವರ್ಕ್‌ ಆಗಿರುವ ಭಾರ್ತಿ ಏರ್‌ಟೆಲ್‌ ಸದ್ಯ 344 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

  ಕುತೂಹಲದ ಪಯಣ

  ಆದಿತ್ಯಾ ಬಿರ್ಲಾ ಸಮೂಹದ ಛೇರ್‌ಮನ್ ಆಗಿರುವ ಕುಮಾರ್ ಮಂಗಲಮ್ ಬಿರ್ಲಾ ಮೇಗಾ ಡೀಲ್ ಖಚಿತಪಡಿಸಿದ್ದು, ಕುತೂಹಲ ಮತ್ತು ಆಕರ್ಷಕ ಪಯಣಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ನೈಜ ಕಾರ್ಯಗಳು ಈಗ ಪ್ರಾರಂಭವಾಗುತ್ತವೆ. ಏನಾಗುತ್ತೆ ಕಾದು ನೋಡಬೇಕು ಎಂದು ಹೊಸ ವೊಡಾಫೋನ್ ಐಡಿಯಾ ಲಿಮಿಟೆಡ್‌ನ ನಾನ್ ಎಕ್ಸಿಕುಟಿವ್ ಛೇರ್‌ಮನ್ ಆಗಿರುವ ಕುಮಾರ್ ಮಂಗಲಮ್ ಬಿರ್ಲಾ ಹೇಳಿದ್ದಾರೆ. ಐಡಿಯಾ ಸೆಲ್ಯುಲರ್ ಲಿಮಿಟೆಡ್ ಆದಿತ್ಯ ಬಿರ್ಲಾ ಸಮೂಹದ ಅಂಗಸಂಸ್ಥೆಯಾಗಿತ್ತು.

  ಕೆಲವೇ ವಾರಗಳಲ್ಲಿ ಕಾರ್ಯಾರಂಭ ಮಾಡಲಿದೆ ಹೊಸ ಕಂಪನಿ

  ವಿಲೀನ ಪ್ರಕ್ರಿಯೆ ಮುಗಿದಿದ್ದು, ಕೆಲವೇ ವಾರಗಳಲ್ಲಿ ಹೊಸ ಕಂಪನಿ ತನ್ನ ಕಾರ್ಯನಿರ್ವಹಣೆಯನ್ನು ಪ್ರಾರಂಭ ಮಾಡಲಿದೆ. ಆದರೆ, ಹೊಸ ಕಂಪನಿಯ ಬ್ರಾಂಡಿಂಗ್, ಜಾಹೀರಾತುಗಳ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿರ್ಲಾ ಹೇಳಿದರು.

  2017ರ ಮಾರ್ಚ್‌ನಲ್ಲಿಯೇ ಘೋಷಣೆ

  ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಕಂಪನಿಗಳು 2017ರ ಮಾರ್ಚ್‌ನಲ್ಲಿಯೇ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದ್ದವು. ಉಚಿತ ವಾಯ್ಸ್‌ ಕಾಲ್ ಮತ್ತು ಅಗ್ಗದ ದರದಲ್ಲಿ ಡೇಟಾ ನೀಡಿ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿದ್ದ ಮುಖೇಶ್ ಅಂಬಾನಿ ನೇತೃತ್ವದ ಜಿಯೋವನ್ನು ಎದುರಿಸಲು ಈ ಟೆಲಿಕಾಂ ಸಮ್ಮಿಲನ ನಡೆದಿದೆ ಎಂದರೆ ನಂಬಲೇಬೇಕು.

  ಟೆಲಿಕಾಂ ಇಲಾಖೆಗೆ ಬಿಗ್ ಆದಾಯ

  ಈ ಮೇಗಾ ಡೀಲ್‌ನಿಂದ ಸರ್ಕಾರಕ್ಕೆ ಉತ್ತಮ ಆದಾಯ ಬಂದಿರುವುದಂತೂ ಸತ್ಯ. ಟೆಲಿಕಾಂ ಇಲಾಖೆ ₹ 3,926.34 ಕೋಟಿ ನಗದು ಹಾಗೂ ₹ 3,342.44 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಎರಡು ಕಂಪನಿಗಳಿಗೆ ಸೂಚಿಸಿತ್ತು ಎನ್ನಲಾಗಿದ್ದು, ಭಾರೀ ಆದಾಯ ಸರ್ಕಾರದ ಖಜಾನೆ ಸೇರಿದೆ.

  ಯಾರದ್ದು ಎಷ್ಟು ‍ಷೇರು?

  ವೊಡಾಫೋನ್ ಐಡಿಯಾ ಲಿಮಿಟೆಡ್ ಹೊಸ ಕಂಪನಿಯಲ್ಲಿ ಶೇ. 45.1ರಷ್ಟು ಷೇರನ್ನು ವೊಡಾಫೋನ್ ಹೊಂದಿರಲಿದೆ. ಆದಿತ್ಯ ಬಿರ್ಲಾ ಗ್ರೂಪ್ 26 ರಷ್ಟು ಷೇರನ್ನು ಹೊಂದಿರಲಿದ್ದು, ಶೇ. 28.9 ರಷ್ಟು ಷೇರನ್ನು ಐಡಿಯಾ ಸೆಲ್ಯುಲರ್ ಹೊಂದಿರಲಿದ್ದು, ಆದಿತ್ಯ ಬಿರ್ಲಾ ಗ್ರೂಪ್ ಇನ್ನು ಶೇ. 9.5 ರಷ್ಟು ಷೇರುಗಳನ್ನು ಹೊಂದಬಹುದಾಗಿದೆ.

  ವಿಲೀನ ಮೌಲ್ಯ

  ಈ ಮೇಗಾ ಡೀಲ್‌ನಲ್ಲಿ ವೊಡಾಫೋನ್ ₹ 82,800 ಕೋಟಿ ವ್ಯವಹಾರ ಮೌಲ್ಯವನ್ನು ಹೊಂದಿದ್ದರೆ, ಐಡಿಯಾ ₹ 72,200 ಕೋಟಿ ವ್ಯವಹಾರ ಮೌಲ್ಯ ಹೊಂದಿರಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಸಮೂಹದ ಷೇರು ಪ್ರಮಾಣ ಸಮ ಆಗಿಲ್ಲದಿದ್ದರೆ, ವೊಡಾಫೋನ್ ತನ್ನ ಷೇರುಗಳನ್ನು ಕಡಿತಗೊಳಿಸುವ ನಿಯಮವನ್ನು ಒಪ್ಪಂದ ಒಳಗೊಂಡಿದೆ.

  ಕೊನೆಯ ಪ್ರಕ್ರಿಯೆ

  ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದಂತೆ ಎರಡು ಕಂಪನಿಗಳ ವಿಲೀನದ ಕೊನೆಯ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಲೇ ಕಂಪನಿ ನೊಂದಣಿ ಇಲಾಖೆಯಿಂದ ಸಮ್ಮತಿ ದೊರೆತಿದ್ದು, ವಿಲೀನದ ನಂತರ ಟೆಲಿಕಾಂ ನ್ಯಾಯಮಂಡಳಿ ಹಾಗೂ ಇತರ ನ್ಯಾಯಾಲಯಗಳ ನಿರ್ಧಾರಗಳನ್ನು ಅನುಸರಿಸಬೇಕಾಗುತ್ತದೆ.

  ಹೊಸ ಕಂಪನಿ ಸಿಇಒ

  ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಗೆ ನಾನ್ ಎಕ್ಸಿಕ್ಯೂಟಿವ್ ಛೇರ್‌ಮನ್ ಆಗಿ ಕುಮಾರ್ ಮಂಗಲಂ ಬಿರ್ಲಾ ಆಯ್ಕೆಯಾಗಿದ್ದರೆ, ಬಾಲೆಷ್ ಶರ್ಮಾ ಹೊಸ ಕಂಪನಿಯ ಹೊಸ ಸಿಇಒ ಆಗಿ ಆಯ್ಕೆಗೊಂಡಿದ್ದಾರೆ. ಇನ್ನು ಕೆಲವು ಹುದ್ದೆಗಳನ್ನು ಅಂತಿಮಗೊಳಿಸಿಲ್ಲ. ಆಗಸ್ಟ್‌ನಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ವಿಲೀನ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲಾಗುವುದು ಎಂದು ವೊಡಾಫೋನ್ ಸಿಇಒ ವಿಟ್ಟೋರಿಯಾ ಕೋಲಾವೋ ಹೇಳಿದ್ದಾರೆ.

  ಷರತ್ತು ಬದ್ಧ ಅನುಮತಿ

  ಭಾರತದಲ್ಲಿ ಸದ್ಯಕ್ಕೆ ಈ ಬಿಗ್ ವಿಲೀನಕ್ಕೆ ಟೆಲಿಕಾಂ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದ್ದು, ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲರ್‌ಗಳ ಸಮ್ಮಿಲನ ಪ್ರಕ್ರಿಯೆ ಆಗಸ್ಟ್‌ ವೇಳೆಗೆ ಸಂಪೂರ್ಣವಾಗಿ ಮುಕ್ತಾಯವಾಗಲಿದ್ದು, ಕೆಲವೇ ವಾರಗಳಲ್ಲಿ ಕಾರ್ಯಾರಂಭ ಮಾಡುತ್ತಿವೆ ಎಂದು ವಿಟ್ಟೊರಿಯಾ ಕೋಲಾಒ ಹೇಳಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Government clears Vodafone-Idea merger; to create India's largest telco. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more