Subscribe to Gizbot

ಇನ್ನೆರಡು ತಿಂಗಳಿನಲ್ಲಿ 1,86,000 ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ !!

Written By:

ರಾಜ್ಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ 1,86,000 ವಿದ್ಯಾರ್ಥಿಗಳಿಗೆ ನವೆಂಬರ್ ತಿಂಗಳಲ್ಲಿ ಉಚಿತ ಲ್ಯಾಪ್‌ಟಾಪ್ ಸಿಗಲಿದೆ. ಈಗಾಗಲೇ ಸರ್ಕಾರದಿಂದ ಎಲ್ಲಾ ಅನುಮತಿ ದೊರೆತಿದ್ದು, ರಾಜ್ಯಸರ್ಕಾರ ಈಗಾಗಲೇ ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ.!! ಹಾಗಾಗಿ, ಇನ್ನೆರಡು ತಿಂಗಳಿನಲ್ಲಿ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ದೊರೆಯಲಿದೆ.!!

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ, ತಂತ್ರಜ್ಞಾನ ಯುಗದಲ್ಲಿ ವಿಧ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗಾಗಿ ಸರ್ಕಾರ ಬಹುಬೇಗ ಲ್ಯಾಪ್‌ಟಾಪ್ ಪೂರೈಸುವ ಕೆಲಸ ಮಾಡುತ್ತಿದೆ. ಹಾಗಾಗಿ, ವಿಧ್ಯಾರ್ಥಿಗಳಿಗೆ ನವೆಂಬರ್ ವೇಳೆಗೆ ಲ್ಯಾಪ್‌ಟಾಪ್ ಅನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.!!

ಇನ್ನೆರಡು ತಿಂಗಳಿನಲ್ಲಿ 1,86,000 ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ !!

ಇನ್ನು ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಸರ್ಕಾರದ ಯೋಜನಾ ವೆಚ್ಚ 300 ಕೋಟಿ ರೂಪಾಯಿಗಳಾಗಿದ್ದು, ವಾರ್ಷಿಕ ಆದಾಯ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಿರುವ ಕುಟುಂಬದ ವಿಧ್ಯರ್ಥಿಗಳಿಗೆ ಲ್ಯಾಪ್‌ಟಾಪ್ ದೊರೆಯಲಿದೆ.!! ಆದರೆ, ಸರ್ಕಾರದಿಂದ ಯಾವ ಸಾಮರ್ಥ್ಯದ ಲ್ಯಾಪ್‌ಟಾಪ್ ಸಿಗುತ್ತದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ!!

ಇನ್ನೆರಡು ತಿಂಗಳಿನಲ್ಲಿ 1,86,000 ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ !!

ಅನಿಮೇಶನ್, ವಿಶ್ಯವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಸ್ಮಿಕ್‌ಗಳ ಮೇಲಿನ ರಾಜ್ಯದ ಹೊಸ ನೀತಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ, ಈ ವಲಯದಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಲು ನೆರವಾಗಿದ್ದು, ಈ ಕ್ಷೇತ್ರ ಸುಮಾರು 20,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ರಾಜ್ಯಸರ್ಕಾರ ತಿಳಿಸಿದೆ.

English summary
laptops would be given to only those students whose family annual income was Rs 2.5 lakh.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot