ಸರಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್

Written By: Lekhaka

ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಘಿ ಕರ್ನಾಟಕ ಸರಕಾರವು ಪಿಯುಸಿ ನಂತರದ ಪದವಿ, ಡಿಪ್ಲೊಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 'ಲ್ಯಾಪ್‌ಟಾಪ್‌ ಭಾಗ್ಯ' ಯೋಜನೆಯ ಮೂಲಕ ಉಚಿತ ಲ್ಯಾಪ್ ಟಾಪ್ ನೀಡಲು ಮುಂದಾಗಿದ್ದು, ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ.

ಸರಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್

ಸದ್ಯ ರಾಜ್ಯ ಸರಕಾರವೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 31 ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಣೆ ಮಾಡಲಿದೆ ಎನ್ನಲಾಗಿದೆ. ಈ ತಿಂಗಳಲ್ಲೇ ಎಲ್ಲ 31,742 ಸಾವಿರ ಪರಿಶಿಷ್ಟ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ವಿತರಣೆ ಯಾಗಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಇದಲ್ಲದೇ ಮುಂಬರುವ ದಿನಗಳಲ್ಲಿ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ಎಲ್ಲ ವರ್ಗದ 1.50 ಲಕ್ಷ ಪದವಿ ಮತ್ತು ಡಿಪ್ಲೊಮ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುವ ಸಾಧ್ಯತೆಯೂ ಇದ್ದು, ಸರಕಾರ ಈ ನಿಟ್ಟಿನಲ್ಲಿ ಆಲೋಚನೆಯನ್ನು ನಡೆಸಿದೆ ಎನ್ನಲಾಗಿದೆ.

ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..?

ಸರಕಾರ ಉಚಿತವಾಗಿ ನೀಡುತ್ತಿರುವುದು ಎಸರ್ ಕಂಪನಿಯ ಲ್ಯಾಪ್ ಟಾಪ್ ಗಳಾಗಿದ್ದು, ಸುಮಾರು 45 ಕೋಟಿ ಬಜೆಟ್ ನಲ್ಲಿ ಖರೀದಿಸಲಾಗಿದೆ. ಪ್ರತಿಯೊಂದಕ್ಕೂ ರೂ.14,490 ಗಳಾಗಿದೆ ಎನ್ನಲಾಗಿದೆ. ಈ ಲ್ಯಾಪ್ ಟಾಪ್ ಗಳು ವಿಂಡೋಸ್ 10ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಇನ್ ಟೆಲ್ ಕ್ವಾಡ್ ಕೋರ್ ಪ್ರೋಸೆಸರ್ ಅನ್ನು ಈ ಲ್ಯಾಪ್ ಟಾಪ್ ಗಳಲ್ಲಿ ಕಾಣಬಹುದಾಗಿದ್ದು, 1 TB ಹಾರ್ಡ್ ಡ್ರೈವ್, 4GB RAM ಅನ್ನು ಹೊಂದಿರುವ ಲ್ಯಾಪ್ ಟಾಪ್ ಇದಾಗಿದ್ದು, 14 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಸಹಕಾರಿಯಾಗಲಿದೆ.
Read more about:
English summary
While the government is working towards empowering citizens digitally through the Digital India scheme, Karnataka Chief Minister Siddaramaiah has now announced that his state government body is now gifting free Acer laptops to qualified students in colleges.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot