ಆಪಲ್ ಬಳಕೆದಾರರಿಗೆ ಗರಿಷ್ಟ ಅಪಾಯದ ಸೂಚನೆ ನೀಡಿದ ಸರ್ಕಾರ; ಬಳಕೆದಾರರು ಮಾಡಬೇಕಾಗಿರುವುದು ಏನು..?
ಭಾರತದಲ್ಲಿನ ಆಪಲ್ ಬಳಕೆದಾರರಿಗೆ ಹೆಚ್ಚಿನ ಅಪಾಯವಿದ್ದು, ಸೂಕ್ಷ್ಮ ಮಾಹಿತಿಗಳನ್ನು ಕದಿಯಲು ಹ್ಯಾಕರ್ಸ್‌ಗಳಿಗೆ ಆಪಲ್ ಸಾಫ್ಟ್‌ವೇರ್ ಅವಕಾಶ ಮಾಡಿಕೊಡುತ್ತದೆ ಎಂದು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ) ಸಂಸ್ಥೆ ಮಾಹಿತಿ ನೀಡಿದೆ.
ಆಪಲ್ ಸಾಧನಗಳ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಸಂಸ್ಥೆ ತೀವ್ರ ಎಚ್ಚರಿಕೆ ನೀಡಿದೆ. ಐಪ್ಯಾಡ್, ಮ್ಯಾಕ್, ಐಫೋನ್‌ಗಳ ಸಂಯೋಜಿತ ಸಾಫ್ಟ್‌ವೇರ್‌ಗಳು ಹ್ಯಾಕರ್ಸ್‌ಗಳಿಗೆ ಮಾಹಿತಿ ಕದಿಯಲು ಅವಕಾಶ ಮಾಡಿಕೊಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹ್ಯಾಕರ್ಸ್‌ಗಳು ಆಪಲ್ ಸಾಧನದೊಳಗೆ ಅಕ್ರಮವಾಗಿ ಪ್ರವೇಶಿಸಿ ಸೂಕ್ಷ್ಮ ಮಾಹಿತಿ ಕದಿಯಲು ಹಾಗೂ ಸಾಧನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರೆ ಎಂಬ ಅಂಶವನ್ನು ಹೈಲೆಟ್ ಮಾಡಿರುವ ಸಿಇಆರ್‌ಟಿ ತಂಡ, ಸೈಬರ್ ಭದ್ರತಾ ತಂಡವು ಈ ಅಪಾಯಗಳನ್ನು ತಗ್ಗಿಸಲು ಹಾಗೂ ಸೂಕ್ಷ್ಮ ಮಾಹಿತಿ ಕಳ್ಳತನವಾಗದಂತೆ ರಕ್ಷಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ಟೀಮ್ ಒತ್ತಾಯಿಸಿದೆ.
ಸಿಇಆರ್‌ಟಿ ಹೇಳಿರುವ ದೋಷಗಳೇನು..?
ಸಿಇಆರ್‌ಟಿ ಹೇಳಿರುವಂತೆ ಐಒಎಸ್ (iOS) ಐಪ್ಯಾಡ್ (iPad), ಮ್ಯಾಕ್ (Mac) ಓಎಸ್ (OS), ಸಫಾರಿ ಹಾಗೂ ಟಿವಿ ಓಎಸ್ (OS) ಸೇರಿದಂತೆ ವಿವಿಧ ಆಪಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಮಸ್ಯೆ ಕಂಡು ಬಂದಿದ್ದು, ಈ ಅವಕಾಶವನ್ನು ಹ್ಯಾಕರ್ಸ್ ಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದಿದೆ.
ಸೌಕರ್ಯಗಳನ್ನು ಹೆಚ್ಚಿಸುವುದು: ಸಿಸ್ಟಮ್‌ನಲ್ಲಿ ಉನ್ನತ ಮಟ್ಟದ ತಂತ್ರಾಂಶಗಳನ್ನು ಬಳಸಿಕೊಳ್ಳುವುದು ಹಾಗೂ ನಿರ್ವಾಹಕರಿಗೆ ಸಾಮಾನ್ಯವಾಗಿ ನಿರ್ಬಂಧಿಸಿರುವ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ನೀಡಬೇಕು ಎಂದು ಸಿಇಆರ್‌ಟಿ ತಂಡ ತಿಳಿಸಿದೆ.
ಸುರಕ್ಷತಾ ನಿರ್ಬಂಧಗಳನ್ನು ಬೈಪಾಸ್ ಮಾಡಿ: ನಿಮ್ಮ ಸಾಧನವನ್ನು ರಕ್ಷಿಸಲು ಸರ್ಕಮ್ವೆಂಟ್ ಭದ್ರತಾ ಕ್ರಮಗಳನ್ನು ಇರಿಸಲಾಗಿದೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದು.
ರಿಮೋಟ್ ಕೋಡ್ ಕಾರ್ಯಗತಗೊಳಿಸಿ: ನಿಮ್ಮ ಸಾಧನದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಿ ಮತ್ತು ಸಂಭಾವ್ಯವಾಗಿ ಮಾಲ್‌ವೇರ್ ಸ್ಥಾಪಿಸಿ ಹಾಗೂ ಇತರ ದುರುದ್ದೇಶಪೂರಿತ ಚಟುವಟಿಕೆ ಮಾಡುವುದನ್ನು ನಿಲ್ಲಿಸಿ.
ಸಮಸ್ಯೆಗೊಳಗಾಗಬಹುದಾದ ಆಪಲ್ ಸಾಫ್ಟ್‌ವೇರ್‌ಗಳ ವಿವರ: ಐಒಎಸ್ ಮತ್ತು ಐಪ್ಯಾಡ್‌ನ 16.7.8 ಮತ್ತು 17.5 ಒಳಗಿನ ಆವೃತ್ತಿಗಳು, ಮ್ಯಾಕ್ ಓಎಸ್ (macOS) 12.7.5 ರೊಳಗಿನ ಮಾಂಟೆರಿ ಆವೃತ್ತಿಗಳು, 13.5.7ರ ಒಳಗಿನ ವೆಂಚುರಾ ಆವೃತ್ತಿಗಳು ಮತ್ತು 14.5ರ ಒಳಗಿನ ಸೊನೊಮಾ (Sonoma) ಆವೃತ್ತಿಗಳು ಹೆಚ್ಚಾಗಿ ಹ್ಯಾಕ್ ಆಗುವ ಸಾಧ್ಯತೆ ಇದೆ.
ಆಪಲ್ ಸಾಧನಗಳನ್ನು ರಕ್ಷಿಸಿಕೊಳ್ಳುವ ಬಗೆ ಹೇಗೆ: ಆಪಲ್ ಸಾಧನಗಳನ್ನು ರಕ್ಷಿಸಿಕೊಳ್ಳಲು ತಮ್ಮ ಸಾಧನಗಳನ್ನು ಕೂಡಲೆ ಲಭ್ಯವಿರುವ ಆವೃತ್ತಿಗಳಿಗೆ ಅಪ್‌ಡೇಟ್ ಮಾಡಬೇಕೆಂದು ಸಿಇಆರ್‌ಟಿ ಸೂಚಿಸಿದೆ.
ನಿಮ್ಮ ಸಾಧನಗಳಿಗೆ ಭವಿಷ್ಯದಲ್ಲಿ ಯಾವುದೇ ದೋಷ ಬಾರದಂತೆ ಸುರಕ್ಷಿತವಾಗಿರಿಸಲು ಕೆಲವು ಪ್ರಮುಖ ಸಲಹೆಗಳನ್ನು ನೋಡುವುದಾದರೆ:
ಸೈಬರ್ ಸುರಕ್ಷತೆ ಬೆದರಿಕೆಗಳು, ದುರ್ಬಲತೆಗಳ ಬಗ್ಗೆ ಅಪ್‌ಡೇಟ್ ಮತ್ತು ಸಲಹೆಗಳಿಗಾಗಿ ಆಪಲ್‌ಗೆ ಸಂಬಂಧಿಸಿದ ಭದ್ರತಾ ಅಧಿಕಾರಿಗಳಿಂದ ನಿಮ್ಮ ಸಾಧನದ ಕುರಿತು ಮಾಹಿತಿ ಪಡೆಯುವುದು. ದುರುದ್ದೇಶ ಹೊಂದಿರುವ ವೆಬ್‌ಸೈಟ್‌ಗಳು, ಲಿಂಕ್‌ಗಳು ಅಥವಾ ಫೈಲ್‌ಗಳನ್ನು ಪ್ರವೇಶಿಸುವಾಗ ಮತ್ತು ಸಂವಹನ ಮಾಡುವಾಗ ಎಚ್ಚರಿಕೆ ವಹಿಸಿ.
ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು, ಅನಧಿಕೃತ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡುವುದನ್ನು ಅಥವಾ ಅಪರಿಚಿತ ಮೂಲಗಳಿಗೆ ಸೂಕ್ಷ್ಮ ಮಾಹಿತಿಯನ್ನು ಒದಗಿಸುವುದನ್ನು ತಡೆಯಿರಿ. ಸರಳವಾದ ಪಾಸ್‌ವರ್ಡ್ ಬದಲಾಗಿ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸುವುದು ಮತ್ತು ಸುರಕ್ಷಿತ ಸ್ಥಳಗಳಿಗೆ ಡೇಟಾವನ್ನು ನಿಯಮಿತವಾಗಿ ಬ್ಯಾಕಪ್ ಮಾಡುವಂತಹ ಸುರಕ್ಷತಾ ಕ್ರಮಗಳನ್ನು ಅಳವಡಿಸಿ.
ಈ ಕ್ರಮಗಳು ನಿಮ್ಮ ಆಪಲ್ ಸಾಧನಗಳ ಒಟ್ಟಾರೆ ಭದ್ರತೆ ಹೆಚ್ಚಿಸಲು ಮತ್ತು ಸಂಭವಿಸಬಹುದಾದ ಅನಾಹುತ ತಪ್ಪಿಸಲು ಸಹಕಾರಿಯಾಗಲಿದೆ.


Click it and Unblock the Notifications








