'ಲಾಕಿ' ತಡೆಯಲು 'ಹೈ ಅಲರ್ಟ್' ನೀಡಿದ ಭಾರತ ಸರ್ಕಾರ..ಏನಿದು ಲಾಕಿ?

Written By:

ವನ್ನಾ ಕ್ರೈ ವೈರಸ್ ದಾಳಿಯ ನಂತರ ಮತ್ತೊಂದು ವೈರಸ್ ಭೂತ ಪ್ರಪಂಚದಾಧ್ಯಂತ ಕಾಲಿಟ್ಟಿದೆ.!! ವನ್ನಾ ಕ್ರೈ ವೈರಸ್ ದಾಳಿಯ ರೀತಿಯಲ್ಲಿಯೇ ದಾಳಿ ನಡೆಸುತ್ತಿರುವ ಈ ವೈರೆಸ್‌ಗೆ ಲಾಕಿ ರ್ಯಾನ್ಸಮ್ ವೇರ್ ಎಂದು ಹೆಸರಿಡಲಾಗಿದ್ದು, "ಹೈ ಅಲರ್ಟ್" ಎನ್ನುವ ಸೂಚನೆಯೊಡನೆ ಸರ್ಕಾರ ಎಲ್ಲರಿಗೂ ಎಚ್ಚರಿಕೆ ನೀಡಿದೆ.!!

ಲಾಕಿ ರ್ಯಾನ್ಸಮ್ ವೇರ್ ಗಳನ್ನು ಹರಡುವ ಸ್ಪ್ಯಾಮ್‌ಗಳ ಬಗ್ಗೆ ಎಚ್ಚರಿಕೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹೆಚ್ಚುವರಿ ಕಾರ್ಯದರ್ಶಿ ಅಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.!! ಹಾಗಾದರೆ, ಏನಿದು ಲಾಕಿ ರ್ಯಾನ್ಸಮ್ ವೇರ್? ಹೇಗೆ ಕಾರ್ಯನಿರ್ವಹಿಸುತ್ತಿದೆ? ವೈರಸ್ ಅಟ್ಯಾಕ್ ಆಗದಂತೆ ನಾವೇನು ಮಾಡಬೇಕು? ಎಂಬೆಲ್ಲಾ ವಿಷಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವನ್ನಾ ಕ್ರೈ ಅಲ್ಲ.! ಆದರೆ, ಅದೇ ರೀತಿ!!

ವನ್ನಾ ಕ್ರೈ ಅಲ್ಲ.! ಆದರೆ, ಅದೇ ರೀತಿ!!

ಲಾಕಿ ರ್ಯಾನ್ಸಮ್ ವೇರ್ ದುರುದ್ದೇಶದಿಂದ ಕೂಡಿದ ತಂತ್ರಾಂಶವಾಗಿದ್ದು, ಲಾಕಿ ಲಾಕಿ ರ್ಯಾನ್ಸಮ್ ವೇರ್ ಅಟ್ಯಾಕ್ ಆಗಿರುವ ಸಿಸ್ಟಮ್ ಗಳಿಂದ ಅದನ್ನು ತೆಗೆದುಹಾಕಲು ಹಣದ ಬೇಡಿಕೆ ಇಡಲಾಗುತ್ತದೆ . ನೇರವಾಗಿ ವನ್ನಾ ಕ್ರೈ ವೈರಸ್ ಭೂತದಂತೆಯೇ ಲಾಕಿ ವೈರಸ್ ಕಾರ್ಯಾಚರಣೆ ನಡೆಸುತ್ತಿದೆ.!!

ಸರ್ಕಾರದ ಎಚ್ಚರಿಕೆ ಏನು?

ಸರ್ಕಾರದ ಎಚ್ಚರಿಕೆ ಏನು?

ಈ ಬಗ್ಗೆ ಭಾರತ ಸರ್ಕಾರವು ಸೈಬರ್ ಸ್ವಚ್ಚತಾ ಕೇಂದ್ರದ ಮೂಲಕ ನೀಡಿರುವ ಎಚ್ಚರಿಕೆ ನೀಡಿದ್ದು, "ಹೈ ಅಲರ್ಟ್" ಎನ್ನುವ ಸೂಚನೆಯೊಡನೆ ಜಗತ್ತಿನಾಧ್ಯಂತ ಹೆಚ್ಚು ಹಾವಳಿ ಇಡುತ್ತಿರುವ ಈ ಲಾಕಿ ರ್ಯಾನ್ಸಮ್ ವೇರ್ ಎನ್ನುವ ಹೊಸ ಮಾಲವೇರ್ ನಿಮ್ಮ ಕಂಪ್ಯೂಟರ್‌ಗಳನ್ನು ಲಾಕ್ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.

ಹೇಗೆಲ್ಲಾ ಅಟ್ಯಾಕ್ ಆಗುತ್ತೆ.?

ಹೇಗೆಲ್ಲಾ ಅಟ್ಯಾಕ್ ಆಗುತ್ತೆ.?

ಸಾಮಾಜಿಕ ಜಾಲತಾಣಗಳು ವಾಟ್ಸ್‌ಆಪ್‌ನಂತಹ ಮೆಸೇಜಿಂಗ್ ಆಪ್‌ಗಳು ಮತ್ತು ಮೇಲ್‌ಗಳಲ್ಲಿ 'ಪ್ಲೀಸ್ ಪ್ರಿಂಟ್', 'ಡಾಕ್ಯುಮೆಂಟ್', 'ಫೋಟೋ ಇಮೇಜಸ್ 'ಸ್ಪ್ಯಾನ್' ಮುಂತಾದ ಸಾಮಾನ್ಯ ವಿಷಯಗಳ ಮೂಲಕ ಲಾಕಿ ಲಾಕಿ ರ್ಯಾನ್ಸಮ್ ವೇರ್ ವೈರೆಸ್ ಅಟ್ಯಾಕ್ ಆಗುತ್ತದೆ.

All about Nokia 3310 Phone - GIZBOT KANNADA
ವೈರೆಸ್ ದಾಳಿ ತಡೆಯುವುದು ಹೇಗೆ?

ವೈರೆಸ್ ದಾಳಿ ತಡೆಯುವುದು ಹೇಗೆ?

ಯಾವುದೇ ವೈರೆಸ್ ದಾಳಿಯನ್ನು ತಡೆಯಲು ಮುಖ್ಯವಾಗಿ ನಿಮಗೆ ತಿಳಿಯದ ಅಥವಾ ಹೆಚ್ಚು ಪರಿಚಿತವಲ್ಲದ ಲಿಂಕ್‌ಗಳನ್ನು ಒತ್ತಬೇಡಿ.!! 100 ರೂಪಾಯಿಗೆ ಮೊಬೈಲ್ ಖರೀದಿಸಿ ಎನ್ನುವ ಲಿಂಕ್ ಇದಕ್ಕೆ ಉದಾಹರಣೆ! ಇನ್ನು ಉತ್ತಮ ಆಂಟಿವೈರಸ್ ಬಳಸಿ ವೈರಸ್‌ನಿಂದ ನಿಮ್ಮ ಡಿವೈಸ್ ಕಾಪಾಡಿಕೊಳ್ಳಿ.!!

ಓದಿರಿ:ಈ ಆಪ್‌ನಲ್ಲಿ ಕೇವಲ ಹೆಸರು ಹೇಳಿದರೆ ಬದಲಾಗುತ್ತದೆ ಟಿವಿ ಚಾನೆಲ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
'Locky Ransomware' that can lock computers and demand ransom for unlocking them. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot