Home
ಸುದ್ದಿಜಾಲ

ಭಾರತ ಸರ್ಕಾರದ 2023 ರ ಟೆಲಿಕಾಂ ಬಿಲ್‌ ಪಾಸ್‌!..ಟೆಲಿಕಾಂ ಬಿಲ್‌ ವಿಶೇಷತೆ ಏನು?

ಈ ಭಾರಿಯ ಲೋಕಸಭೆ ಚಳಿಗಾಲದ ಅಧಿವೇಶದಲ್ಲಿ ಭಾರತ ಸರ್ಕಾರ ಹೊಸ ಟೆಲಿಕಾಂ ಮಸೂದೆಯನ್ನು ಪಾಸ್‌ ಮಾಡಿದೆ. ಈ ಹೊಸ ಕಾಯ್ದೆಯಿಂದಾಗಿ ಭಾರತದ ಟೆಲಿಕಾಂ ವಲಯದಲ್ಲಿ ಹಲವು ಬದಲಾವಣೆಗಳಾಗುವುದು ಪಕ್ಕಾ ಆಗಿದೆ. ಹೊಸ ಮಸೂದೆಯ ಮೂಲಕ 1885 ರ ಹಿಂದಿನ ಮೂರು ಹಳೆಯ ಕಾಯಿದೆಗಳನ್ನು ಬದಲಾಯಿಸುವುದಕ್ಕೆ ಭಾರತ ಸರ್ಕಾರ ಮುಂದಡಿ ಇಟ್ಟಿದೆ.

ಹೌದು, ಭಾರತ ಸರ್ಕಾರ ಹೊಸ ಟೆಲಿಕಾಂ ಬಿಲ್‌ (Telecom Bill) ಅನ್ನು ಪರಿಚಯಿಸಿದೆ. ಇದರಿಂದ ಟೆಲಿಗ್ರಾಫ್ ಆಕ್ಟ್ 1885, ಇಂಡಿಯನ್ ವಾಯರ್‌ಲೆಸ್ ಟೆಲಿಗ್ರಾಫಿ ಆಕ್ಟ್ 1933, ಮತ್ತು ಟೆಲಿಗ್ರಾಫ್ ವೈರ್‌ಗಳು ( ಕಾನೂನುಬಾಹಿರ ಸ್ವಾಧೀನ) ಕಾಯಿದೆ 1950 ಅನ್ನು ಬದಲಾಯಿಸುವುದಕ್ಕೆ ಮುಂದಾಗಿದೆ. ಅಲ್ಲದೆ ಈ ಬಿಲ್‌ ಪ್ರಸ್ತುತ ಅಸ್ತಿತ್ವದಲ್ಲಿರುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಕಾಯಿದೆ 1997 ಅನ್ನು ಸಹ ತಿದ್ದುಪಡಿ ಮಾಡಲಿದೆ. ಹಾಗಾದ್ರೆ ಹೊಸ ಟೆಲಿಕಾಂ ಬಿಲ್‌ನ ಉದ್ದೇಶ ಏನು? ಇದರಿಂದಾಗುವ ಬದಲಾವಣೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತ ಸರ್ಕಾರದ 2023 ರ ಟೆಲಿಕಾಂ ಬಿಲ್‌ ಪಾಸ್‌!..ಟೆಲಿಕಾಂ ಬಿಲ್‌ ವಿಶೇಷತೆ ಏನು?

ಭಾರತ ಸರ್ಕಾರದ ಹೊಸ ಟೆಲಿಕಾಂ ಬಿಲ್‌ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಿದೆ. ಇದರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಹಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಅಂದರೆ ರಾಷ್ಟ್ರೀಯ ಭದ್ರತೆಯ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಪೂರ್ಣ ನಿರ್ವಾಹಕರ ಸೇವೆಗಳನ್ನು ಅಮಾನತುಗೊಳಿಸುವ ಅಧಿಕಾರ ಸರ್ಕಾರದ ಬಳಿ ಇರಲಿದೆ.

ಏನಿದು ಹೊಸ ಟೆಲಿಕಾಂ ಬಿಲ್?
ಭಾರತ ಸರ್ಕಾರದ 2023 ರ ಟೆಲಿಕಾಂ ಬಿಲ್‌ ಮೂಲಕ ಈಗಾಗಲೇ ಜಾರಿಯಲ್ಲಿದ್ದ ಹಳೆಯ ಮೂರು ಕಾನೂನಗಳನ್ನು ಬದಲಾಯಿಸಲಿದೆ. 1885 ರ ಭಾರತೀಯ ಟೆಲಿಗ್ರಾಫ್ ಕಾಯಿದೆ, 1933 ರ ಭಾರತೀಯ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್ ಮತ್ತು 1950 ರ ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯಿದೆಯನ್ನು ಬದಲಾಯಿಸುವುದಕ್ಕಾಗಿಯೇ ಈ ಹೊಸ ಮಸೂದೆಯನ್ನು ಜಾರಿಗೆ ತರಲಾಗಿದೆ. ಹಲವು ಸುತ್ತಿನ ಚರ್ಚೆಗಳ ನಂತರ ಪ್ರಸ್ತುತ ದಿನಗಳಿಗೆ ಅನುಗುಣವಾಗಿ ತಂತ್ರಜ್ಞಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಕಾಯಿದೆ ಜಾರಿಗೆ ತರಲಾಗಿದೆ.

ಭಾರತ ಸರ್ಕಾರದ 2023 ರ ಟೆಲಿಕಾಂ ಬಿಲ್‌ ಪಾಸ್‌!..ಟೆಲಿಕಾಂ ಬಿಲ್‌ ವಿಶೇಷತೆ ಏನು?

ಹೊಸ ಟೆಲಿಕಾಂ ಬಿಲ್‌ ವಿಶೇಷತೆ ಏನು?
ಈ ಟೆಲಿಕಾಂ ಬಿಲ್‌ ಪ್ರಮುಖ ಹೈಲೈಟ್‌ ಎಂದು OTT ಸೇವೆಗಳನ್ನು ಟೆಲಿಕಾಂ ರೆಗ್ಯುಲೆಟರಿ ನಿಯಂತ್ರಣದಿಂದ ತೆಗೆದುಹಾಕುವುದು. ಇನ್ಮುಂದೆ ಒಟಿಟಿ ಸೇವೆಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಿರ್ವಹಿಸುತ್ತದೆ. ಇಲ್ಲಿ OTT ಎಂದರೆ WhatsApp, ಟೆಲಿಗ್ರಾಮ್, ಸಿಗ್ನಲ್, ಇತ್ಯಾದಿಗಳಂತಹ ಇಂಟರ್‌ನೆಟ್ ಸಂದೇಶ ಸೇವೆಗಳು ಕೂಡ ಸೇರಿವೆ ಅನ್ನೊದು ಪ್ರಮುಖವಾಗಿದೆ.

ಹೊಸ ಬಿಲ್‌ನಿಂದ ಏನು ಅನುಕೂಲ?
ಭಾರತ ಸರ್ಕಾರ ತಂದಿರುವ ಹೊಸ ಟೆಲಿಕಾಂ ಬಿಲ್‌ ತುರ್ತು ಸಂದರ್ಭಗಳಲ್ಲಿ ಸರ್ಕಾರ ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಮತ್ತೊಂದು ಹೈಲೈಟ್ ಏನೆಂದರೆ, ರಾಷ್ಟ್ರೀಯ ಭದ್ರತಾ ಬೆದರಿಕೆಯ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಆಪರೇಟರ್, ವ್ಯಕ್ತಿ ಅಥವಾ ಪ್ರದೇಶದ ಟೆಲಿಕಾಂ ಸೇವೆಗಳನ್ನು ಅಮಾನತುಗೊಳಿಸುವ ಅಧಿಕಾರವನ್ನು ಸರ್ಕಾರದ ಬಳಿ ಇರಲಿದೆ. ಅಂದರೆ ಸರ್ಕಾರವು ದೇಶದ ಯಾವುದೇ ಟೆಲಿಕಾಂ ಸೇವೆಯನ್ನು ತಡೆಹಿಡಿಯಬಹುದಾಗಿದೆ.

ಭಾರತ ಸರ್ಕಾರದ 2023 ರ ಟೆಲಿಕಾಂ ಬಿಲ್‌ ಪಾಸ್‌!..ಟೆಲಿಕಾಂ ಬಿಲ್‌ ವಿಶೇಷತೆ ಏನು?

ಆದರೆ ಸರ್ಕಾರವು ಟೆಲಿಕಾಂ ಸೇವೆಗಳನ್ನು ಅಮಾನತುಗೊಳಿಸುವ ಅಥವಾ ಪ್ರತಿಬಂಧಿಸುವ ನಿಖರವಾದ ಸಂದರ್ಭಗಳನ್ನು ನಿರ್ದಿಷ್ಟಪಡಿಸಲಾಗಿಲ್ಲ. ರಾಷ್ಟ್ರೀಯ ಭದ್ರತೆಯ ಸಂದರ್ಭಗಳಲ್ಲಿ ಈ ಅಧಿಕಾರಗಳನ್ನು ಕಾರ್ಯಗತಗೊಳಿಸಬಹುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಟೆಲಿಕಾಂ ಸೇವೆಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಪ್ರಯತ್ನಿಸುವ ಯಾವುದೇ ವ್ಯಕ್ತಿಯನ್ನು ಅಮಾನತುಗೊಳಿಸಲು ಮತ್ತು ಶಿಕ್ಷಿಸಲು ಮಸೂದೆಯು ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂದು ವರದಿಯಾಗಿದೆ.

ಇನ್ನು ಈ ಹೊಸ ಮಸೂದೆಯ ಮೂರನೇ ಪ್ರಮುಖ ಅಂಶವೆಂದರೆ ಸರ್ಕಾರವು ಈಗ ಉಪಗ್ರಹ ಸೇವೆ ಒದಗಿಸುವವರಿಗೆ ಉಪಗ್ರಹ ತರಂಗಾಂತರವನ್ನು ಹರಾಜು ಮಾಡುವ ಬದಲು ಹಂಚಿಕೆ ಮಾಡುವುದಕ್ಕೆ ಮುಂದಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಒನ್‌ವೆಬ್, ಸ್ಟಾರ್‌ಲಿಂಕ್, ಅಮೆಜಾನ್ ಕೈಪರ್ ಮತ್ತು ಇತರ ಕಂಪನಿಗಳು ಮೊದಲು GMPCS ಪರವಾನಗಿಯನ್ನು ಪಡೆಯಬೇಕಿದೆ. GMPCS (ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಸರ್ವಿಸಸ್) ಪರವಾನಗಿ ಹೊಂದಿರುವವರು ಇಂಟರ್‌ನೆಟ್‌, ಕರೆ, ಮೆಸೇಜಿಂಗ್ ಇತ್ಯಾದಿಗಳಂತಹ ವಿವಿಧ ಉಪಗ್ರಹ ಸಂವಹನ ಸೇವೆಗಳನ್ನು ನೀಡಬಹುದು.

Best Mobiles in India

English summary
Government of India has introduced a new Telecom Bill:What Is the New Telecom Bill?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+