ನಿಮ್ಮ ಫೋನ್ ರಕ್ಷಣೆಗಾಗಿ ಸರ್ಕಾರದಿಂದ ಹೊಸ ಟೂಲ್ ಬಿಡುಗಡೆ! ಇದರ ಕೆಲಸ ಏನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಮಾಲ್‌ವೇರ್ ಅಟ್ಯಾಕ್ ಹಾಗೂ ಸ್ಕ್ಯಾಮ್‌ಗಳು ಹೆಚ್ಚುತ್ತಲೇ ಇವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಮಾಲ್‌ವೇರ್ ಸಮಸ್ಯೆಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ರಕ್ಷಿಸಲು ಹೊಸ ಟೂಲ್ ಅನ್ನು ಪರಿಚಯಿಸಿದೆ. ಇದು ಫ್ರೀ ಬಾಟ್ ರಿಮೂವ್ ಟೂಲ್ ಆಗಿದೆ.
ಹೌದು, ದೂರಸಂಪರ್ಕ ಇಲಾಖೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸೈಬರ್ ಸ್ವಚ್ಛತಾ ಕೇಂದ್ರ ಪೋರ್ಟಲ್‌ನಲ್ಲಿ ಬಾಟ್ ರಿಮೂವ್ ಟೂಲ್ ಅನ್ನು ಪರಿಚಯಿಸಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗಳು ಮಾಲ್‌ವೇರ್ ಅಟ್ಯಾಕ್‌ನಿಂದ ರಕ್ಷಣೆಯನ್ನು ಪಡೆಯಲಿವೆ ಎಂದು ಹೇಳಲಾಗಿದೆ. ಹಾಗಾದ್ರೆ ದೂರ ಸಂಪರ್ಕ ಇಲಾಖೆ ಪರಿಚಯಿಸಿರುವ ಹೊಸ ಟೂಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್ಚುತ್ತಿರುವ ಮಾಲ್‌ವೇರ್ ದಾಳಿಗಳು ಹಾಗೂ ಸ್ಕ್ಯಾಮ್‌ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಟೂಲ್ ಅನ್ನು ಪರಿಚಯಿಸಿದೆ. ಇದಕ್ಕಾಗಿ ದೂರಸಂಪರ್ಕ ಇಲಾಖೆ ಈ ಉಚಿತ ಬೋಟ್ ರಿಮೂವ್ ಟೂಲ್ ಅನಾವರಣಗೊಳಿಸಿದೆ. ಅಲ್ಲದೆ ಈ ಟೂಲ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಎಸ್‌ಎಂಎಸ್ ನೋಟಿಫಿಕೇಶನ್ ಮೂಲಕ ಬಳಕೆದಾರರಿಗೆ ತಲುಪುವ ಪ್ರಯತ್ನಿಸುತ್ತಿದೆ. ಇದರ ಮೂಲಕ ಮಾಲ್‌ವೇರ್‌ಗಳ ದಾಳಿಯನ್ನು ಪ್ರಬಲವಾಗಿ ಹಿಮ್ಮೆಟ್ಟಿಸಲು ಮುಂದಾಗಿದೆ.
ನೀವು ಇತ್ತೀಚಿಗೆ "ಸೈಬರ್ ಸುರಕ್ಷಿತವಾಗಿರಿ! ನಿಮ್ಮ ಸಾಧನವನ್ನು ಬಾಟ್‌ನೆಟ್ ಸೋಂಕುಗಳು ಮತ್ತು ಮಾಲ್‌ವೇರ್‌ಗಳಿಂದ ರಕ್ಷಿಸಲು, ಭಾರತ ಸರ್ಕಾರವು CERT-In ಮೂಲಕ, ಇಲ್ಲಿ 'ಫ್ರೀ ಬಾಟ್ ರಿಮೂವಲ್ ಟೂಲ್ ಡಿವೈಸ್' ಡೌನ್‌ಲೋಡ್ ಮಾಡಲು ಶಿಫಾರಸು ಮಾಡುತ್ತದೆ csk.gov.in." ಎನ್ನುವ ಸಂದೇಶ ನೋಡಿರಬಹುದು. ಈ ಸಂದೇಶದ ಮೂಲಕ ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಮತ್ತು ತಮ್ಮ ಸಾಧನಗಳನ್ನು ರಕ್ಷಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚನೆ ನೀಡುತ್ತಿದೆ.

ಸೈಬರ್ ಸ್ವಚ್ಛತಾ ಕೇಂದ್ರ ಪೋರ್ಟಲ್ ಹೇಗೆ ಕಾರ್ಯನಿರ್ವಹಿಸಲಿದೆ?
ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿರುವಂತೆ ಸೈಬರ್ ಸ್ವಚ್ಛತಾ ಕೇಂದ್ರ ಪೋರ್ಟಲ್ ಮೂಲಕ ಬಳಕೆದಾರರ ಫ್ರೀ ಮಾಲ್ವೇರ್ ಡಿಟೆಕ್ಷನ್ ಡಿವೈಸ್‌ಗಳನ್ನು ಪ್ರವೇಶಿಸಬಹುದಾಗಿದೆ. ಇದರಲ್ಲಿ ಬಾಟ್ನೆಟ್ ಕ್ಲೀನಿಂಗ್ ಮತ್ತು ಮಾಲ್ವೇರ್ ಅನಾಲಿಸಿಸ್ ಸೆಂಟರ್ ಎನ್ನುಬವ ಆಯ್ಕೆಗಳನ್ನು ನೀಡಲಾಗಿದೆ. ಇವುಗಳ ಮೂಲಕ ನಿಮ್ಮ ಡಿವೈಸ್‌ನಲ್ಲಿ ಸೊಂಕಿತ ಮಾಲ್‌ವೇರ್ ಪ್ರವೇಶಿಸದಂತೆ ತಡೆಗಟ್ಟಬಹುದಾಗಿದೆ.
ಮಾಲ್ವೇರ್ ಮತ್ತು ಬಾಟ್‌ನೆಟ್ ಅನ್ನು ರಿಮೂವ್ ಮಾಡುವುದು ಹೇಗೆ?
* ಮೊದಲಿಗೆ CSK ವೆಬ್‌ಸೈಟ್‌ಗೆ ಹೋಗಿ: www.csk.gov.in/
* ನಂತರ ಸೆಕ್ಯುರಿಟಿ ಟೂಲ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ನೀವು ಬಳಸಲು ಬಯಸುವ ಆಂಟಿವೈರಸ್ ಕಂಪನಿಯ ಬೋಟ್ ರಿಮೂವಲ್ ಡಿವೈಸ್ ಅನ್ನು ಆಯ್ಕೆ ಮಾಡಿ
* ಟೂಲ್ಸ್ ಅನ್ನು ಡೌನ್‌ಲೋಡ್ ಮಾಡಲು "ಡೌನ್‌ಲೋಡ್" ಬಟನ್ ಕ್ಲಿಕ್ ಮಾಡಿ.
* ನಂತರ, ನಿಮ್ಮ ಡಿವೈಸ್‌ನಲ್ಲಿ ಬಾಟ್ ರಿಮೂವಲ್ ಡಿವೈಸ್ ಅನ್ನು ರನ್ ಮಾಡಿ.
ಈ ಅಪ್ಲಿಕೇಶನ್ ನಿಮ್ಮ ಡಿವೈಸ್‌ನಲ್ಲಿರುವ ಮಾಲ್‌ವೇರ್‌ಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಡಿವೈಸ್‌ನಲ್ಲಿರುವ ಮಾಲ್‌ವೇರ್ ಸೊಂಕುಗಳನ್ನು ರಿಮೂವ್ ಮಾಡಲಿದೆ.

ಇದಲ್ಲದೆ ಸರ್ಕಾರ ಬೋಟ್ ರಿಮೂವಲ್ ಟೂಲ್ಸ್ ಜೊತೆಗೆ CSK ಪೋರ್ಟಲ್ 'USB ಪ್ರತಿರೋಧ್' ಮತ್ತು 'AppSamvid' ನಂತಹ ಸೆಕ್ಯುರಿಟಿ ಅಪ್ಲಿಕೇಶನ್‌ಗಳನ್ನು ಸಹ ನೀಡಿದೆ. ಇವುಗಳು ಬಳಕೆದಾರರ ಅಧ್ಯತೆ ಮೇರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂದರೆ 'USB ಪ್ರತಿರೋಧ್' ಅನ್ನೊದು ಫೋನ್‌ಗಳು ಮತ್ತು ಪೆನ್ ಡ್ರೈವ್‌ಗಳಲ್ಲಿರುವ ಮಾಲ್‌ವೇರ್‌ಗಳನ್ನು ತೆಗೆಯಬಹುದಾದ ಆಯ್ಕೆಯಾಗಿದೆ.
ಇನ್ನು 'AppSamvid' ಅಂದರೆ ಆಪರೇಟಿಂಗ್ ಸಿಸ್ಟಂನಲ್ಲಿ ಅನುಮೋದಿತ ಫೈಲ್‌ಗಳನ್ನು ಮಾತ್ರ ರನ್ ಮಾಡುವ ಅಪ್ಲಿಕೇಶನ್ ಆಗಿದೆ. ಇದು ಬಳಕೆದಾರರಿಗೆ ವಿಶ್ವಾಸಾರ್ಹ ಕಾರ್ಯಗತಗೊಳಿಸಬಹುದಾದ ಮತ್ತು ಜಾವಾ ಫೈಲ್‌ಗಳ ಪಟ್ಟಿಗಳನ್ನು ರಚಿಸಲು ಅನುಮತಿಸುತ್ತದೆ.


Click it and Unblock the Notifications








