ಶಾಕಿಂಗ್ ನ್ಯೂಸ್!..ವಾಟ್ಸ್ಆಪ್ ಬ್ಯಾನ್?..ಸರ್ಕಾರವೇ ತರುತ್ತಿದೆ ಹೊಸ ಆಪ್!

|

ವಾಟ್ಸ್ಆಪ್ ಮತ್ತು ಸರ್ಕಾರದ ನಡುವಿನ ಜಗಳ ಇದೀಗ ಮತ್ತೆ ತಾರಕಕ್ಕೇರಿದೆ. ಇತ್ತೀಚಿಗಷ್ಟೇ ವಾಟ್ಸ್ಆಪ್ ಅನ್ನು ದೇಶದಲ್ಲಿ ನಿಷೇಧಿಸಲುವ ಸಲುವಾಗಿ ಪ್ಲ್ಯಾನ್ ಮಾಡಿಕೊಂಡಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳು ಇದೀಗ ವಾಟ್ಸ್ಆಪ್‌ಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಹೌದು, ಜನಪ್ರಿಯ ವಾಟ್ಸ್ಆಪ್‌ಗೆ ಪರ್ಯಾಯವಾಗಿ ಕೇಂದ್ರ ಸರ್ಕಾರವು ತನ್ನದೇ ಪ್ರತ್ಯೇಕ ವಾಟ್ಸ್ಆಪ್ ಮಾದರಿಯ ಆಪ್ ಹೊರತರಲು ನಿರ್ಧರಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಇತ್ತೀಚಿನ ವಿದ್ಯಮಾನಗಳು ಸಹ ಕಾರಣವಾಗಿವೆ.

ಶಾಕಿಂಗ್ ನ್ಯೂಸ್!..ವಾಟ್ಸ್ಆಪ್ ಬ್ಯಾನ್?..ಸರ್ಕಾರವೇ ತರುತ್ತಿದೆ ಹೊಸ ಆಪ್!

ವಾಟ್ಸ್ಆಪ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲದಿರುವುದು ಮತ್ತು ದೇಶದಲ್ಲೇ ದತ್ತಾಂಶ ಸಂಗ್ರಹಿಸುವ ಎರಡು ಗುರಿಗಳನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ. ಹಾಗಾಗಿ, ದೇಶದಲ್ಲಿ ಗರಿಷ್ಠ ಭದ್ರತೆಯ ಸರ್ವರ್ ಅಳವಡಿಸಿ ಗ್ರಾಹಕರ ಸುರಕ್ಷತೆ ಮತ್ತು ಮಾಹಿತಿ ಗೌಪ್ಯತೆಗಾಗಿ ನೂತನ ಆಪ್ ತಯಾರಿ ಕುರಿತು ಸರಕಾರ ಕಾರ್ಯಪ್ರವೃತ್ತವಾಗಿದೆ. ದತ್ತಾಂಶ ಸೋರಿಕೆಯಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಈ ಹೆಜ್ಜೆ ಇಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿದೇಶಿ ತಂತ್ರಜ್ಞಾನ ಕಂಪೆನಿಗಳು ದೇಶೀಯ ಸರ್ಕಾರಗಳಿಗೆ ಪೂರಕ ಮಾಹಿತಿಗಳನ್ನು ಒದಗಿಸುತ್ತಿಲ್ಲ. ಅದರ ಜೊತೆಗೆ ದತ್ತಾಂಶದ ವಿಷಯದಲ್ಲಿ ಬದಲಾಗುತ್ತಿರುವ ಅಂತರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ಇದಕ್ಕೆ ಪೂರಕವಾಗಿದೆ ಎಂದು ಹೇಳಲಾಗಿದೆ. ಹಾಗಾಗಿ, ಮೊದಲಿಗೆ ಸರ್ಕಾರಿ ಮಟ್ಟದ ಎಲ್ಲ ಸಂವಹನ, ಕೆಲಸ ಕಾರ್ಯಗಳಿಗೆ ಅನುಕೂವಾಗುವಂತೆ ಆಪ್ ರೂಪಿಸಲು ಫ್ಲಾನ್ ಮಾಡಲಾಗಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ?, ವಾಟ್ಸ್ಆಪ್ ಬ್ಯಾನ್ ಆಗಲಿದೆ ಎಂದು ಹೇಳುತ್ತಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಜಟಾಪಟಿ?

ಏನಿದು ಜಟಾಪಟಿ?

ವಾಟ್ಸ್ಆಪ್ ತನ್ನ ಮೂಲಕ ರವಾನೆಯಾಗುವ ಎಲ್ಲಾ ಸಂದೇಶ, ಫೋಟೊ, ವಿಡಿಯೊ ಹಾಗೂ ವಾಯ್ಸ್‌ ಮೆಸೇಜ್‌ ಇತ್ಯಾದಿಗಳನ್ನು 'ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್' ತಂತ್ರಜ್ಞಾನದ ಅಡಿಯಲ್ಲಿ ಸುರಕ್ಷಿತವಾಗಿಡುತ್ತಿದೆ. ಇದನ್ನು ಬೇರೆಯವರು ದುರ್ಬಳಕೆ ಮಾಡದಂತೆ ತಡೆಯುತ್ತಿರುವುದಾಗಿ ಬಳಕೆದಾರರಿಗೆ ಭರವಸೆ ನೀಡುತ್ತದೆ. ಆದರೆ, ದೇಶದಲ್ಲಿ ವಾಟ್ಸ್ಆಪ್‌ನಿಂದಾಗಿ ಇತ್ತೀಚಿಗೆ ನಡೆದಿರುವ ಹಲವು ದುರ್ಘಟನೆಗಳಿಂದಾಗಿ ವಾಟ್ಸ್ಆಪ್ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಸಹಕರಿಸಬೇಕು ಎಂದು ಸರ್ಕಾರ ವಾಟ್ಸ್ಆಪ್ ಸಂಸ್ಥೆಗೆ ಸೂಚಿಸಿದೆ.

ಏನೆಲ್ಲಾ ಮಾಹಿತಿ ಪತ್ತೆಗೆ ಕ್ರಮ?

ಏನೆಲ್ಲಾ ಮಾಹಿತಿ ಪತ್ತೆಗೆ ಕ್ರಮ?

ದೇಶದಲ್ಲಿ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಸರ್ಕಾಈ ಮೊದಲೇ ಮುಂದಾಗಿತ್ತು. ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿ ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು ಎಂದು ತಿಳಿಸಿತ್ತು.

ನಿರಾಕರಿಸಿತ್ತು ವಾಟ್ಸ್ಆಪ್!

ನಿರಾಕರಿಸಿತ್ತು ವಾಟ್ಸ್ಆಪ್!

ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯಿಸಿದ ವಾಟ್ಸ್ಆಪ್, ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿತ್ತು.

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ಜನರು ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾಟ್ಸ್ಆಪ್ ತಿಳಿಸಿತ್ತು.

ಕೇಂದ್ರದಿಂದ ಹೊಸ ಅಸ್ತ್ರ!

ಕೇಂದ್ರದಿಂದ ಹೊಸ ಅಸ್ತ್ರ!

ಇದಾದ ನಂತರ ಕೇಂದ್ರದ ಅಧಿಕಾರಿಗಳು ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ ಎನ್‌ಕ್ರಿಪ್ಷನ್ ಭೇದಿಸದೆಯೇ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಿದರು. ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್‌ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಅಧಿಕಾರಿಗಳು ಹೇಳಿದರು.

ಕೇಂದ್ರ ಅಧಿಕಾರಿಗಳು ಗರಂ!

ಕೇಂದ್ರ ಅಧಿಕಾರಿಗಳು ಗರಂ!

ಡಿಜಿಟಲ್‌ ಫಿಂಗರ್‌ಪ್ರಿಂಟ್‌ನಿಂದ, ಸಂದೇಶಗಳ ಎನ್‌ಕ್ರಿಪ್ಷನ್ ಕೋಡ್‌ ಅನ್ನು ಭೇದಿಸದೆಯೇ ಮೊದಲು ಯಾರು ಪ್ರಸಾರ ಮಾಡಿದರು ಎಂಬುದನ್ನು ಪತ್ತೆ ಹಚ್ಚಬಹುದು ಎಂದು ಅಧಿಕಾರಿಗಳು ಹೇಳಿದರೂ ಸಹ ವಾಟ್ಸ್ಆಪ್ ಗಂಭೀರವಾಗಿ ತೆಗೆದುಕೊಂಡಿಲ್ಲದಿರುವುದಕ್ಕೆ ಕೇಂದ್ರ ಅಧಿಕಾರಿಗಳು ಮತ್ತೆ ಗರಂ ಆಗಿದ್ದಾರೆ. ಆದರೆ, ಸರ್ಕಾರದ ಈ ಸಲಹೆ ಕಷ್ಟಸಾಧ್ಯ ಎಂದು ಹೇಳಲಾಗಿದೆ.

ಇದು ಕಠಿಣ ಸವಾಲು

ಇದು ಕಠಿಣ ಸವಾಲು

ಪ್ರಸ್ತುತ ವಾಟ್ಸ್‌ಆಪ್‌ ಯಾವುದೇ ಸಂದೇಶಗಳನ್ನು ಸ್ಟೋರ್ ಮಾಡುವುದಿಲ್ಲ. ಪ್ರತಿ ಸಂದೇಶದ ಡಿಜಿಟಲ್‌ ಫಿಂಗರ್‌ಪ್ರಿಂಟ್‌ ಬೇಕೆಂದರೆ, ಎಲ್ಲಾ ಸಂದೇಶಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸಬೇಕು. ಒಂದೊಂದು ಸಂದೇಶಕ್ಕೂ ಒಂದು ವಿಶಿಷ್ಟ ಐಡಿ ಒದಗಿಸಬೇಕು. ಇದಕ್ಕಾಗಿ ಇಡೀ ತಂತ್ರಾಂಶವನ್ನು ಪುನರ್‌ವ್ಯವಸ್ಥೆ ಮಾಡಬೇಕು. ಹಾಗಾಗಿ, ಇದು ಕೂಡ ಸವಾಲಾಗಿದೆ.

ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್?

ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್?

ದೇಶದ ಹಿತಕ್ಕಾಗಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಹೇಳಿರುವುದು ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

Most Read Articles
Best Mobiles in India

English summary
There are strong discussions that for strategic and security reasons, over a period of time, we should have email, messaging…all sorts of system. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more