ಕೇಂದ್ರ ಗೃಹ ಇಲಾಖೆ ಸೂಚನೆ: ಎಲ್ಲರೂ ಈ 4 ಆಫ್‌ಗಳನ್ನು ಕಡ್ಡಾಯವಾಗಿ ಡಿಲೀಟ್‌ ಮಾಡಿ

By Suneel
|

ಕೇಂದ್ರ ಗೃಹ ಇಲಾಖೆ "ಪಾಕಿಸ್ತಾನ ಸಂಸ್ಥೆಗಳು ಭಾರತೀಯರ ಮೇಲೆ ಅನ್ವೇಷಣೆ ಕೈಗೊಂಡಿದ್ದು ಕೆಲವು ಮಾಲ್‌ವೇರ್‌ಗಳನ್ನು ಸ್ಮಾರ್ಟ್‌ಫೋನ್‌ ಆಪ್‌ಗಳ ಮೂಲಕ ಕಳುಹಿಸುತ್ತಿವೆ. ಈ ಆಪ್‌ಗಳು ಗಂಭೀರವಾಗಿ ಬಳಕೆದಾರರಿಗೆ ಬೆದರಿಕೆ ಒಡ್ಡಲಿದ್ದು, ಅವರ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲಿವೆ. ಈ ಆಪ್‌ಗಳನ್ನು ತಕ್ಷಣ ಸ್ಮಾರ್ಟ್‌ಫೋನ್‌ನಲ್ಲಿ ಬಳಸುತ್ತಿರುವವರು ಡಿಲೀಟ್ ಮಾಡಲೇಬೇಕು" ಎಂದು ಸೂಚನೆ ನೀಡಿದೆ.

ಕೇಂದ್ರ ಗೃಹ ಇಲಾಖೆ ಸೂಚನೆ: ಎಲ್ಲರೂ ಈ 4 ಆಫ್‌ಗಳನ್ನು ಕಡ್ಡಾಯವಾಗಿ ಡಿಲೀಟ್‌ ಮಾಡಿ

ಕೇಂದ್ರ ಗೃಹಸಚಿವಾಲಯ ಡಿಲೀಟ್ ಮಾಡಲು ಹೇಳಿರುವ ಆಪ್‌ಗಳಲ್ಲಿ 4 ಆಪ್‌ಗಳು ಪ್ರಮುಖವಾಗಿದ್ದು, ಅವುಗಳು ಯಾವುವು ಎಂದರೇ
* ಟಾಪ್ ಗನ್ -ಗೇಮಿಂಗ್ ಆಪ್‌ (Top Gun)
* ಎಂಪಿಜಂಕೀ - ಮ್ಯೂಸಿಕ್ ಆಪ್‌ (Mpjunkie)
* ಬಿಡಿಜಂಕೀ -ವೀಡಿಯೊ ಆಪ್‌ ಮತ್ತು (Bdjunkie)
* ಟಾಕಿಂಗ್ ಫ್ರಾಗ್ - ಮನರಂಜನೆ ಆಪ್‌ (Talking Frog)
ಈ ಮೇಲಿನ ಆಪ್‌ಗಳನ್ನು ಬಳಸುತ್ತಿದ್ದಲ್ಲಿ ಭಾರತೀಯರು ತಕ್ಷಣ ಡಿಲೀಟ್ ಮಾಡಬೇಕೆಂದು ಹೇಳಿದೆ.

ಕೇಂದ್ರ ಗೃಹ ಇಲಾಖೆ ಸೂಚನೆ: ಎಲ್ಲರೂ ಈ 4 ಆಫ್‌ಗಳನ್ನು ಕಡ್ಡಾಯವಾಗಿ ಡಿಲೀಟ್‌ ಮಾಡಿ

ಅಂದಹಾಗೆ, ಪಾಕಿಸ್ತಾನ ಸಂಸ್ಥೆಗಳು ಈ ಮೇಲಿನ ಆಪ್‌ಗಳನ್ನು ಗೌಪ್ಯ ಮತ್ತು ಮಹತ್ವದ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ಗಳಿಂದ ಕಳ್ಳತನ ಮಾಡಲು ರವಾನಿಸುತ್ತಿವೆ. ಈ ಹ್ಯಾಕರ್‌ಗಳು ಒಂದು ಬಾರಿ ಸ್ಮಾರ್ಟ್‌ಫೋನ್‌ಗೆ ಎಂಟರ್ ಆದರೆ ಯಾವುದೇ ಮಾಹಿತಿಯನ್ನು ಎಂಟರ್ ಮಾಡಿದರೆ ಅಥವಾ ಸೇವ್‌ ಆಗಿದ್ದಲ್ಲಿ ಆಕ್ಸೆಸ್ ಮಾಡಬಹುದಾದ ಅವಕಾಶ ಅವರಿಗಿರುತ್ತದೆ. ಅಲ್ಲದೇ ಮೊಬೈಲ್‌ ಪೇಮೆಂಟ್ ವಿವರಗಳನ್ನು ಅವರು ಹ್ಯಾಕ್‌ ಮಾಡಬಹುದು. ಹಳೆ ನೋಟುಗಳ ಚಲಾವಣೆ ರದ್ದಾದ ಈ ಸಮಯದಲ್ಲಿ ಇಂತಹ ಚಟುವಟಿಕೆ ಹೆಚ್ಚಾಗುವ ಸಂಭವವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತೀಚೆಗೆ ಇಂತದೇ ಘಟನೆಯ ಬಗ್ಗೆ ಒಂದು ವರದಿ ಆಗಿತ್ತು. ಸ್ಮೆಶ್‌ಆಪ್‌(SmeshApp) ಎಂದು ಕರೆಯಲ್ಪಡುವ ಈ ಆಪ್‌ ಅನ್ನು ಗೂಗಲ್ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ರಿಮೂವ್ ಮಾಡಿತ್ತು. ಸರ್ಕಾರ ಈ ಆಪ್ ಭಾರತೀಯ ಸೇನೆ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಎಂದು ಆರೋಪಿಸಿತ್ತು.

ಕೇಂದ್ರ ಗೃಹ ಇಲಾಖೆ ಸೂಚನೆ: ಎಲ್ಲರೂ ಈ 4 ಆಫ್‌ಗಳನ್ನು ಕಡ್ಡಾಯವಾಗಿ ಡಿಲೀಟ್‌ ಮಾಡಿ

ವರದಿಗಳ ಪ್ರಕಾರ, ಮೇಲೆ ತಿಳಿಸಿದ ಈ ಆಪ್‌ಗಳು ಪಾಕಿಸ್ತಾನ ಸಂಸ್ಥೆಗಳಿಂದ ಟ್ರೂಪ್‌ಗಳ ಮೇಲೆ ಬೇಹುಗಾರಿಕೆ ನಡೆಸಲು ಮತ್ತು ಮಹತ್ವದ ಮಾಹಿತಿಗಳನ್ನು ಭಾರತೀಯ ಮಿಲಿಟರಿಗೆ ಸಂಬಂಧಿಸಿದಂತೆ ತಿಳಿಸಲು ಉಪಯೋಗಿಸಲ್ಪಡುತ್ತಿದ್ದು, ಇದೊಂದು ರೀತಿಯ ಭಯೋತ್ಪಾದನೆ ಕಾರ್ಯಾಚರಣೆ ಎನ್ನಲಾಗಿದೆ.

ಅಂದಹಾಗೆ ತನಿಖೆಯು ಸೈಬರ್ ವಂಚಕರ ಹಿಂದಿರುವ ಇಂಟರ್- ಸರ್ವೀಸ್ ಇಂಟೆಲಿಜೆನ್ಸ್(ಐಎಸ್‌ಐ) ತೊಡಗುವಿಕೆ ಬಗ್ಗೆ ಬಹಿರಂಗ ಪಡಿಸಿದೆ. ಆಪ್‌ಗಳು ಸೇನೆಯ ಚಲನೆ, ಫೋನ್‌ ಕರೆಗಳು, ಮೆಸೇಜ್‌ ಮತ್ತು ಫೋಟ್ರೋಗ್ರಾಫ್ ಡೇಟಾವನ್ನು ಕಳ್ಳತನ ಮಾಡುವ ವೇಳೆ ಪತ್ತೆಯಾಗಿವೆ. ಸಂಗ್ರಹ ಮಾಡಿದ ಮಾಹಿತಿಯು ಜರ್ಮನಿಯಲ್ಲಿರುವ ಸರ್ವರ್‌ ಒಂದರಲ್ಲಿ ಸೇವ್‌ ಆಗಿತ್ತು, ಇದನ್ನು ಕರಾಚಿ ಮೂಲದ ಅಪರಿಚಿತ ವ್ಯಕ್ತಿ ಹೋಸ್ಟ್‌ ಮಾಡಿದ್ದನು ಎಂದು ತಿಳಿಯಲಾಗಿದೆ.

ಕೇಂದ್ರ ಗೃಹ ಇಲಾಖೆ ಸೂಚನೆ: ಎಲ್ಲರೂ ಈ 4 ಆಫ್‌ಗಳನ್ನು ಕಡ್ಡಾಯವಾಗಿ ಡಿಲೀಟ್‌ ಮಾಡಿ

ಅಘಾತಕಾರಿ ವಿಷಯವೆಂದರೆ, ಆಪ್‌ಗಳನ್ನು ಸಕ್ರಿಯವಾಗಿ ಪಾಕಿಸ್ತಾನ ಏಜೆನ್ಸಿಗಳು ಪಠಾಣ್‌ಕೋಟ್ ಭಯೋತ್ಪಾದನೆ ದಾಳಿಯ ಸಂದರ್ಭದಲ್ಲಿ 2016 ರ ಜನವರಿಯಲ್ಲಿ ಉಪಯೋಗಿಸಿದ್ದವು. ವರದಿಯ ಪ್ರಕಾರ ಈ ಆಪ್‌ಗಳು ಮೂರು ಸೇವೆಗಳಾದ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಮಾಹಿತಿ ಕದಿಯುವ ಗುರಿ ಹೊಂದಿವೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Government wants you to delete these 4 apps, right now. To know that apps and reason visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X