Home
ಸುದ್ದಿಜಾಲ

GOVO GoBuds 445 ಇಯರ್‌ಬಡ್ಸ್‌ ಬಿಡುಗಡೆ! ಬೆಲೆ ಕೇವಲ 1,299ರೂ. ಮಾತ್ರ

ಇಯರ್‌ಬಡ್ಸ್‌ ಪ್ರಿಯರಿಗೆ GOVO ಕಂಪೆನಿ ಹೊಸ ಇಯರ್‌ಬಡ್ಸ್‌ ಪರಿಚಯಿಸಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಬಡ್ಸ್‌ಗಳಿಗೆ ಹೆಸರುವಾಸಿಯಾಗಿರುವ GOVO ಇದೀಗ ಅತ್ಯಾಕರ್ಷಕವಾದ ಇಯರ್‌ಬಡ್ಸ್‌ ಪರಿಚಯಿಸಿದೆ. ಇದನ್ನು GOVO GoBuds 445 ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ ಎಂದು ಹೆಸರಿಸಲಾಗಿದೆ.

ಹೌದು, GOVO GoBuds 445 ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಭಾರತದ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಗುರಿಯಾಗಿರಿಸಿಕೊಂಡು ಈ ಇಯರ್‌ಬಡ್ಸ್‌ ಪರಿಚಯಿಸಲಾಗಿದೆ. ಇದು ಬ್ಲೂಟೂತ್‌ V5.3 ಅನ್ನು ಬೆಂಬಲಿಸಲಿದ್ದು, 30 ಅಡಿಗಳ ದೂರದಲ್ಲಿಯು ಕೂಡ ವಾಯರ್‌ಲೆಸ್‌ ಕನೆಕ್ಟಿವಿಟಿ ನೀಡಲಿದೆ. ಅಂದರೆ ನೀವು ದೂರದಲ್ಲಿದ್ದರೂ ಸಹ ಅತ್ಯುತ್ತಮ ಅನುಭವ ದೊರೆಯಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

GOVO GoBuds 445 ಇಯರ್‌ಬಡ್ಸ್‌ ಬಿಡುಗಡೆ! ಬೆಲೆ ಕೇವಲ 1,299ರೂ. ಮಾತ್ರ

GOVO GoBuds 445 ಇಯರ್‌ಬಡ್ಸ್‌ ತನ್ನ ವಿಶೇಷ ವಿನ್ಯಾಸದಿಂದಾಗಿ ಯುವಜನರ ಗಮನಸೆಳೆಯುತ್ತಿದೆ. ಇದರಲ್ಲಿ ನೀಡಿರುವ ಸುಧಾರಿತ ಧ್ವನಿ ಗುಣಮಟ್ಟ ಹಾಗೂ ಪವರ್‌ಫುಲ್‌ ಸೌಂಡ್‌ ಸಿಸ್ಟಂ ಧ್ವನಿಯನ್ನು ಆಲಿಸುವ ನಿಮ್ಮ ವಿಧಾನವನ್ನು ಬದಲಾಯಿಸುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್‌ ಒಳಗೊಂಡಿರುವ ಬ್ಲೂಟೂತ್ V5.3 ತಂತ್ರಜ್ಞಾನ ನಿಮಗೆ ಅತ್ಯುತ್ತಮವ ವಾಯರ್‌ಲೆಸ್‌ ಕನೆಕ್ಟಿವಿಟಿ ಅನುಭವವನ್ನು ನೀಡಲಿದೆ.

ಇನ್ನು GOVO GoBuds 445 ಇಯರ್‌ಬಡ್ಸ್‌ ಬ್ಲೂಟೂತ್ V5.3 ಅನ್ನು ಒಳಗೊಂಡಿದೆ. ಇದು ನಿಮಗೆ 30 ಅಡಿ ದೂರದವರೆಗೆ ತಡೆರಹಿತ ಸಂಪರ್ಕವನ್ನು ನೀಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ 20 Hz ಫ್ರಿಕ್ವೆನ್ಸಿ ರೇಂಜ್‌ನಲ್ಲಿ ಪವರ್‌ಫುಲ್‌ ಸೌಂಡ್‌ ಸಿಸ್ಟಂ ನೀಡಲಿದೆ. ಇನ್ನು ಇಯರ್‌ಬಡ್ಸ್‌ ನೀರು ಮತ್ತು ಸ್ಪ್ಲಾಶ್‌ಗಳನ್ನು ತಡೆದುಕೊಳ್ಳಲು IPX5 ವಾಟರ್‌ ಪ್ರೂಫ್‌ ರೇಟಿಂಗ್‌ ಅನ್ನು ಪಡೆದುಕೊಂಡಿದೆ.

ಈ ಇಯರ್‌ಬಡ್ಸ್‌ನ ಪ್ರಮುಖ ವಿಶೇಷತೆ ಎಂದರೆ ಇದು ಗೂಗಲ್‌ ಅಸಿಸ್ಟೆಂಟ್‌ ಮತ್ತು ಆಪಲ್‌ ಸಿರಿಯನ್ನು ಬೆಂಬಲಿಸುವುದು. ಇವುಗಳನ್ನು ನೀವು ಸುಲಭ ಟ್ಯಾಪ್‌ ಮೂಲಕ ಆಕ್ಟಿವ್‌ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇದಿಷ್ಟೇ ಅಲ್ಲ ಇಯರ್‌ಬಡ್ಸ್‌ನಲ್ಲಿ ಸೂಪರ್ ಟಚ್ ಕಂಟ್ರೋಲ್ ಅನ್ನು ಸಹ ನೀಡಲಾಗಿದೆ. ಇದರಿಂದ ನಿಮ್ಮ ಡಿವೈಸ್‌ನೊಂದಿಗೆ ಇಯರ್‌ಬಡ್ಸ್‌ ಅನ್ನು ಸುಲಭವಾಗಿ ಕನೆಕ್ಟ್‌ ಮಾಡಲು ಸಾಧ್ಯವಾಗಲಿದೆ. ಇದು ಗೇಮರ್‌ಗಳನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಇದಕ್ಕೆ ಕಾರಣವಾಗಿದೆ

GOVO GoBuds 445 ಇಯರ್‌ಬಡ್ಸ್‌ 50ms ಲೋ ಲೇಟೆನ್ಸಿ ಮೋಡ್‌ನೊಂದಿಗೆ ಬರಲಿದೆ. ಇದು ನಿಮಗೆ ತಡೆರಹಿತ ಗೇಮಿಂಗ್‌ ಅನುಭವವನ್ನು ನೀಡಲಿದೆ. ಇನ್ನು ಇಯರ್‌ಬಡ್ಸ್‌ ಕ್ವಾಡ್ ಮೈಕ್ ಎನ್‌ಕ್ಲೋಸರ್ ಅನ್ನು ಹೊಂದಿದೆ. ಇದರಿಂದ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಪಡೆದಿದೆ. ಅಷ್ಟೇ ಅಲ್ಲ ನಾಯ್ಸ್‌ ಕ್ಯಾನ್ಸಲೇಶನ್‌ ಮೂಲಕ ಹೆಚ್ಚಿನ ಎಂಟರ್‌ಟೈನ್‌ಮೆಂಟ್‌ ಪಡೆದುಕೊಳ್ಳಬಹುದಾಗಿದೆ. ಇನ್ನು ಇದರಲ್ಲಿ ಕಂಡುಬರುವ ಮತ್ತೊಂದು ಆಸಕ್ತಿದಾಯಕ ಆಂಶವೆಂದರೆ ಇದರ ವೇಗದ ಚಾರ್ಜಿಂಗ್‌ ಸಾಮರ್ಥ್ಯ.

GOVO GoBuds 445 ಇಯರ್‌ಬಡ್ಸ್‌ 600mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ವೇಗದ ಚಾರ್ಜ್ ಅನ್ನು ಬೆಂಬಲಿಸಲಿದ್ದು, ಕೇವಲ 5-ನಿಮಿಷದ ಚಾರ್ಜ್ನಲ್ಲಿ 120 ನಿಮಿಷಗಳ ಮ್ಯೂಸಿಕ್‌ ಮತ್ತು ಟಾಕ್‌ ಟೈಂ ಅನ್ನು ನೀಡಲಿದೆ. ಇದು ಒಟ್ಟಾರೆ ಸಂಪೂರ್ಣ ಚಾರ್ಜ್‌ನಲ್ಲಿ 72 ಗಂಟೆಗಳ ಪ್ಲೇಟೈಮ್‌ ಅನ್ನು ನೀಡಲಿದೆ.

ಇನ್ನು ಈ ಇಯರ್‌ಬಡ್ಸ್‌ ಭಾರತದಲ್ಲಿ 4,999ರೂ. ಬೆಲೆಯನ್ನು ಹೊಂದಿದೆ. ಆದರೆ ಇದನ್ನು ಪರಿಚಯಾತ್ಮಕ ಬೆಲೆಯಲ್ಲಿ ಸೀಮಿತ ಅವಧಿಗೆ ಕೇವಲ 1,299ರೂ.ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಅಮೆಜಾನ್‌ನಲ್ಲಿ ಲಭ್ಯವಿದ್ದು, ಪ್ಲಾಟಿನಂ ಕಪ್ಪು ಬಣ್ಣದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಒಂದು ವರ್ಷದ ವಾರೆಂಟಿಯನ್ನು ಒಳಗೊಂಡಿದೆ.

Best Mobiles in India

English summary
GOVO GoBuds 445 earbuds Launched in india: Price at just Rs. 1,299
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+