ಸ್ವದೇಶಿ ಬ್ರ್ಯಾಂಡ್‌ನಿಂದ ಹೊಸ ಸೌಂಡ್‌ಬಾರ್ ಲಾಂಚ್! ಯುವಜನರ ದಿಲ್ ಗೆಲ್ಲೋದು ಗ್ಯಾರಂಟಿ!
ಇಂದಿನ ಯುವಜನತೆಯ ನೆಚ್ಚಿನ ಆಡಿಯೋ ಆಕ್ಸಿಸರೀಸ್‌ಗಳಲ್ಲಿ ಸೌಂಡ್‌ಬಾರ್‌ಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ಇದರಲ್ಲಿ ದೇಶಿ ಬ್ರ್ಯಾಂಡ್ Govo ಹಲವು ವೈವಿಧ್ಯಮಯ ಸೌಂಡ್‌ಬಾರ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇದೀಗ Govo ಬ್ರ್ಯಾಂಡ್ ತನ್ನ ಮತ್ತೊಂದು ಹೊಸ ಸೌಂಡ್‌ಬಾರ್ ಪರಿಚಯಿಸಿದೆ.
ಹೌದು, ದೇಶೀಯ ಆಡಿಯೊ ಟೆಕ್ನಾಲಜಿ ಬ್ರ್ಯಾಂಡ್ Govo ಹೊಸ GoSurround 850 ಸೌಂಡ್‌ಬಾರ್ ಬಿಡುಗಡೆ ಮಾಡಿದೆ. ಈ ಸೌಂಡ್‌ಬಾರ್ ಸ್ಟಿರಿಯೊ ಎಫೆಕ್ಟ್‌ಗಳನ್ನು ಪ್ರೊಡ್ಯೂಶ್ ಮಾಡಲಿದೆ. ಅಲ್ಲದೆ ಈ ಸೌಂಡ್‌ಬಾರ್ ಅನ್ನು ಹಬ್ಬದ ಋತುವಿನ ಆಚರಣೆಗಳನ್ನು ಹೆಚ್ಚಿಸಲು ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಈ ಹೊಸ ಸೌಂಡ್‌ಬಾರ್ ಏನೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೋವೋ ಗೋಸರೌಂಡ್ 850 ಸೌಂಡ್‌ಬಾರ್ ಫೀಚರ್ಸ್
ಗೋವೋ ಗೋಸರೌಂಡ್ 850 ಸೌಂಡ್‌ಬಾರ್ 200-ವ್ಯಾಟ್ ಪೀಕ್ ಔಟ್‌ಪುಟ್ ನೀಡಲಿದೆ. ಇದು 4 x 2-ಇಂಚಿನ ಸ್ಪೀಕರ್‌ಗಳೊಂದಿಗೆ 2.1 ಚಾನೆಲ್ ಸೌಂಡ್‌ಬಾರ್ ಸೆಟಪ್ ಅನ್ನು ಹೊಂದಿದೆ. ಇನ್ನು ಸೌಂಡ್‌ಬಾರ್ DSP-ಸಕ್ರಿಯಗೊಳಿಸಿದ ಸರೌಂಡ್ ಸೌಂಡ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಈ ಸೌಂಡ್‌ಬಾರ್ 6.25-ಇಂಚಿನ ವೈರ್ಡ್ ಸಬ್ ವೂಫರ್‌ನ ಡೀಪ್ ಬಾಸ್ ಹೊಂದಿರುವುದರಿಂದ ಥಿಯೇಟರ್ ಅನುಭವವನ್ನು ನೀಡುತ್ತದೆ ಎಂದು ವರದಿಯಾಗಿದೆ.
ಇನ್ನು ಸೌಂಡ್‌ಬಾರ್ ಮೂರು ಈಕ್ವಲೈಜರ್ ಮೋಡ್‌ಗಳನ್ನು ಹೊಂದಿದೆ. ಇವುಗಳನ್ನು ಚಲನಚಿತ್ರ, ಸುದ್ದಿ ಮತ್ತು ಸಂಗೀತ ವಿಧಾನಗಳು ಎಂದು ವಿಭಾಗಿಸಲಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಮ್ಯೂಸಿಕ್ ಅನುಭವವನ್ನು ಕೂಡ ಕಂಟ್ರೋಲ್ ಮಾಡಬಹುದಾಗಿದೆ. ಅಲ್ಲದೆ ಸೌಂಡ್‌ಬಾರ್‌ನಲ್ಲಿರುವ ಕೀ ಪ್ಯಾನೆಲ್ ಮೂಲಕ ಜೋಡಿಸಬಹುದು. ಇದು ರಿಮೋಟ್ ಕಂಟ್ರೋಲ್ ಅನ್ನು ಹೊಂದಿದ್ದು, ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಅನ್ನು ಸೆಟ್ ಮಾಡುವುದಕ್ಕೆ ಅವಕಾಶ ನೀಡಲಿದೆ.

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI, Aux, USB, OPT ಅಥವಾ Bluetooth V5.3 ಜೊತೆಗೆ ವಾಯರ್‌ಲೆಸ್ ಸ್ಟ್ರೀಮಿಂಗ್ ಮ್ಯೂಸಿಕ್ ಅನ್ನು ನೀಡಲಿದೆ. ಈ ಸೌಂಡ್‌ಬಾರ್ ಪ್ರೀಮಿಯಂ ಫಿನಿಶ್ ಹೊಂದಿರುವ ಡಿವೈಸ್‌ಗಳ ಸ್ಟೇಟಸ್ ಅನ್ನು ಪರಿಶೀಲಿಸಲು ಎಲ್‌ಇಡಿ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಇದಲ್ಲದೆ ಡಿವೈಸ್ ಅನ್ನು ಟಿವಿಯ ಮುಂದು ಇರಿಸಬಹುದು, ಇಲ್ಲವೇ ಗೋಡೆಯ ಮೇಲೆ ಜೋಡಿಸಬಹುದಾಗಿದೆ.

Govo GoSurround 850 ಬೆಲೆ ಮತ್ತು ಲಭ್ಯತೆ
GOVO GoSurround 850 ಸೌಂಡ್‌ಬಾರ್ ಭಾರತದಲ್ಲಿ 5,499ರೂ ಬೆಲೆಯನ್ನು ಹೊಂದಿದೆ. ಇದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇನ್ನು ಈ ಉತ್ಪನ್ನವು ಒಂದು ವರ್ಷದ ವಾರಂಟಿಯನ್ನು ಹೊಂದಿದ್ದು, ಪ್ಲಾಟಿನಂ ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಸಲು ಲಭ್ಯವಿದೆ.
ಇನ್ನು ಇತ್ತೀಚಿಗೆ ವರದಿಗಳ ಪ್ರಕಾರ ಭಾರತದ ಸೌಂಡ್‌ಬಾರ್ ಮಾರುಕಟ್ಟೆ ಗಾತ್ರವು 2022 ರಲ್ಲಿ $153.5 ಮಿಲಿಯನ್ ತಲುಪಿದೆ. ಅಲ್ಲದೆ IMARC ಗ್ರೂಪ್ ಮಾರುಕಟ್ಟೆಯು 2028 ರ ವೇಳೆಗೆ $284.1 ಮಿಲಿಯನ್ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೆ ಗೋವೋ ಕಂಪೆನಿ ಇತ್ತೀಚಿಗೆ ಭಾರತದಲ್ಲಿ GOVO GoBuds 445 ಇಯರ್‌ಬಡ್ಸ್ ಅನ್ನು ಪರಿಚಯಿಸಿದೆ. ಇದು ತನ್ನ ವಿಶೇಷ ವಿನ್ಯಾಸದಿಂದಾಗಿ ಯುವಜನರ ಗಮನಸೆಳೆಯುತ್ತಿದೆ. ಇದರಲ್ಲಿ ನೀಡಿರುವ ಸುಧಾರಿತ ಧ್ವನಿ ಗುಣಮಟ್ಟ ಹಾಗೂ ಪವರ್‌ಫುಲ್ ಸೌಂಡ್ ಸಿಸ್ಟಂ ಧ್ವನಿಯನ್ನು ಆಲಿಸುವ ನಿಮ್ಮ ವಿಧಾನವನ್ನು ಬದಲಾಯಿಸುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್ ಒಳಗೊಂಡಿರುವ ಬ್ಲೂಟೂತ್ V5.3 ತಂತ್ರಜ್ಞಾನ ನಿಮಗೆ ಅತ್ಯುತ್ತಮವ ವಾಯರ್‌ಲೆಸ್ ಕನೆಕ್ಟಿವಿಟಿ ಅನುಭವವನ್ನು ನೀಡಲಿದೆ.
ಇನ್ನು GOVO GoBuds 445 ಇಯರ್‌ಬಡ್ಸ್ ಬ್ಲೂಟೂತ್ V5.3 ಅನ್ನು ಒಳಗೊಂಡಿದೆ. ಇದು ನಿಮಗೆ 30 ಅಡಿ ದೂರದವರೆಗೆ ತಡೆರಹಿತ ಸಂಪರ್ಕವನ್ನು ನೀಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್ 20 Hz ಫ್ರಿಕ್ವೆನ್ಸಿ ರೇಂಜ್‌ನಲ್ಲಿ ಪವರ್‌ಫುಲ್ ಸೌಂಡ್ ಸಿಸ್ಟಂ ನೀಡಲಿದೆ. ಇನ್ನು ಇಯರ್‌ಬಡ್ಸ್ ನೀರು ಮತ್ತು ಸ್ಪ್ಲಾಶ್‌ಗಳನ್ನು ತಡೆದುಕೊಳ್ಳಲು IPX5 ವಾಟರ್ ಪ್ರೂಫ್ ರೇಟಿಂಗ್ ಅನ್ನು ಪಡೆದುಕೊಂಡಿದೆ.


Click it and Unblock the Notifications








