ಆಧಾರ್-ಮೊಬೈಲ್ ಲಿಂಕ್ ಮಾಡಿಲ್ವಾ..? ಹಾಗಿದ್ರೆ ನಿಮಗೊಂದು ಸಿಹಿ ಸುದ್ದಿ..!

|

ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಿಸುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಬ್ರೇಕ್ ಬಿದಿದೆ. ಸುಪ್ರೀಂ ಕೋರ್ಟ್‌ ನಲ್ಲಿ ಆಧಾರ್-ಮೊಬೈಲ್ ಕಡ್ಡಾಯವಾಗಿ ಲಿಂಕ್ ಮಾಡಲು ಮುಂದಾಗುವುದಿಲ್ಲ ಎಂದು ಕೇಂದ್ರ ಸರಕಾರವೂ ಒಪ್ಪಿಕೊಂಡಿದೆ ಎನ್ನಲಾಗಿದೆ.

ಆಧಾರ್-ಮೊಬೈಲ್ ಲಿಂಕ್ ಮಾಡಿಲ್ವಾ..? ಹಾಗಿದ್ರೆ ನಿಮಗೊಂದು ಸಿಹಿ ಸುದ್ದಿ..!

ಈ ಹಿಂದೆ ಮೊಬೈಲ್‌-ಆಧಾರ್ ಲಿಂಕ್ ಮಾಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಆದೇಶವನ್ನು ನೀಡಿಲ್ಲ. ಹಾಗಿದ್ದರೂ ಕೇಂದ್ರ ಸರಕಾರ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಅನ್ನು ಜೋಡಿಸುವುದನ್ನು ಕಡ್ಡಾಯ ಮಾಡಲು ಮುಂದಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಬಳಕೆದಾರರ ಆಕ್ರೋಶ:

ಬಳಕೆದಾರರ ಆಕ್ರೋಶ:

ಸರಕಾರವೂ ಆಧಾರ್ ಹೆಸರಿನಲ್ಲಿ ನಮ್ಮ ಮಾಹಿತಿಗಳನ್ನು ಬಲವಂತವಾಗಿ ಪಡೆದುಕೊಳ್ಳುತ್ತಿದೆ. ಅಲ್ಲದೇ ಮೊಬೈಲ್‌-ಆಧಾರ್ ಲಿಂಕ್ ಕಡ್ಡಾಯ ಮಾಡಿದೆ ಎಂದು ಹಲವರು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಹಾಕಿದ್ದರು ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಮಾಡಿಲ್ಲ:

ಸುಪ್ರೀಂ ಕೋರ್ಟ್ ಆದೇಶ ಮಾಡಿಲ್ಲ:

ಪಿಐಎಲ್‌ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, ಮೊಬೈಲ್‌-ಆಧಾರ್ ಲಿಂಕ್ ಮಾಡುವ ವಿಷಯದಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ ಅಂತ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೇಂದ್ರಕ್ಕೆ ಆದೇಶ ನೀಡಿಲ್ಲ:

ಕೇಂದ್ರಕ್ಕೆ ಆದೇಶ ನೀಡಿಲ್ಲ:

ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಅನ್ನು ಕಡ್ಡಾಯವಾಗಿ ಬೆಸೆಯುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಇದನ್ನು ಕೇಂದ್ರ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಬಳಕೆದಾರರಿಗೆ ಸಿಹಿ ಸುದ್ದಿ:

ಬಳಕೆದಾರರಿಗೆ ಸಿಹಿ ಸುದ್ದಿ:

ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಸಂತೋಷವಾಗಿದ್ದು, ಮೊಬೈಲ್‌-ಆಧಾರ್ ಲಿಂಕ್ ಮಾಡುವ ವಿಚಾರವಾಗಿ ಬಳಕೆದಾರರು ಸಾಕಷ್ಟು ಕಿರಿಕಿರಿಯನ್ನು ಅನುಭವಿಸಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಸಿಹಿ ಸುದ್ದಿಯನ್ನು ನೀಡಿದೆ.

ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ?

ಆಧಾರ್ ಮಾಹಿತಿಯೂ ಎಲ್ಲೆಲ್ಲಿ ಬಳಕೆಯಾಗಿದೆ?

ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಅನ್ನು ಎಲ್ಲಾ ಕಡೆಗಳಲ್ಲಿಯೂ ಬಳಕೆ ಮಾಡಿಕೊಳ್ಳುವುದು ಅಧಿಕವಾಗುತ್ತಿದೆ. ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಮಾಹಿತಿಗಳು ಲೀಕ್ ಆಗುತ್ತಿದೆ ಎನ್ನುವ ಮಾಹಿತಿಯೂ ಆಗಾಗ್ಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ನೀವು ತಿಳಿಯಬಹುದಾಗಿದೆ. ಇದಕ್ಕಾಗಿ ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರವೂ ಅವಕಾಶವನ್ನು ಮಾಡಿಕೊಟ್ಟಿದೆ.

ತಿಳಿಯುವುದು ಹೇಗೆ..?

ತಿಳಿಯುವುದು ಹೇಗೆ..?

ಈ ಹಿನ್ನಲೆಯಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ಯಾವ ಕಾರಣಕ್ಕೆ, ಎಲ್ಲಿ ಬಳಕೆ ಮಾಡಿಕೊಂಡಿದ್ದೀರಾ ಎಂಬುದನ್ನು ಟ್ರಾಕ್ ಮಾಡಬಹುದಾಗಿದೆ. ಆಕೌಂಟ್ ಲಿಂಕ್. ಸಿಮ್ ಕಾರ್ಡ್. ಪ್ಯಾನ್ ಕಾರ್ಡ್ ಸೇರಿದಂತೆ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ನೀಡಿದೆ. ಇದರೊಂದಿಗೆ ನಿಮ್ಮ ಆಧಾರ್ ಮಾಹಿತಿಯೂ ಮೀಸ್ ಯೂಸ್ ಆಗಿದೆ ಎಂದರೆ ನೀವು ದೂರ ಸಹ ನೀಡಬಹುದಾಗಿದೆ. l

ಹಂತ 01:

ಹಂತ 01:

ಮೊದಲಿಗೆ UIDAI ವೆಬ್ ಸೈಟಿಗೆ ಭೇಟಿ ನೀಡಿ. ಮತ್ತು ಆಧಾರ್ ಅಥ್ರಟಿಫಿಕೇಷನ್ ಹಿಸ್ಟರಿ ಪೇಜ್ ಒಪನ್ ಮಾಡಿರಿ.

ಹಂತ 02:

ಹಂತ 02:

ಪೇಜ್ ಓಪನ್ ಮಾಡಿ ಮತ್ತು 12 ಅಂಕಿಗಳ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ದಾಖಲಿಸಿ.

ಹಂತ 03:

ಹಂತ 03:

ನಂತರ ಅಲ್ಲಿಯೇ ಕೆಳಗೆ ಇರುವ ಜನರೆಟ್ OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04:

ಹಂತ 04:

ನಿಮ್ಮ ರಿಜಿಸ್ಟರ್ ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗೆ OTPಯು ಬರಲಿದೆ. OTP ಬರಬೇಕಾದರೆ ನಿಮ್ಮ ಮೊಬೈಲ್ ನಂಬರ್ ವೇರಿಫಿಕೇಷನ್ ಆಗಿರಬೇಕು.

ಹಂತ 05:

ಹಂತ 05:

ನಿಮಗೆ ಬೇಕಾದ ಮಾಹಿತಿಯ ವಿಧ ಮತ್ತು ಅವಧಿಯನ್ನು ಎಂಟ್ರಿ ಮಾಡಬೇಕಾಗಿದೆ. ನಂತರದಲ್ಲಿ OTP ಯನ್ನು ಎಂಟ್ರಿ ಮಾಡಿದ ನಂತರದಲ್ಲಿ ಸುಮಾರು 50 ಬಳಕೆಯ ಮಾಹಿತಿಯೂ ನಿಮಗೆ ದೊರೆಯಲಿದೆ. ಅಲ್ಲದೇ ಆರು ತಿಂಗಳ ಅವಧಿಯದ್ದು ಮಾತ್ರವೇ ಲಭ್ಯವಿರಲಿದೆ.

ಹಂತ 06:

ಹಂತ 06:

ಮಾಹಿತಿಯಲ್ಲಿ ನೀವು ಆಧಾರ್ ಬಳಕೆ ಮಾಡಿದ ಸ್ಥಳ, ಸಮಯ ಮತ್ತು ಬಳಕೆ ಮಾಡಿದ ಕಾರ್ಯವು ಯಶಸ್ವಿಯಾಗಿದೆಯೇ ಎಂಬುದರ ಸಂಪೂರ್ಣ ಮಾಹಿತಿಯೂ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Govt accepts Supreme Court never made Aadhaar-mobile linkage compulsory. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X